ಬೆಂಗಳೂರು: ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರ ನಾಯಕತ್ವ ನಮಗೆ ಬೇಕೆ ಬೇಕು ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಇಬ್ಬರು ಕೂಡ ಪಕ್ಷದ ಎರಡು ಕಣ್ಣುಗಳಿಂದ್ದಂತೆ. ಎಲ್ಲರೂ ಕುಳಿತು ಮಾತುಕತೆ ನಡೆಸಿ ಒಳ್ಳೇಯ ತೀರ್ಮಾನ ಮಾಡುತ್ತಾರೆ. ಒಂದು ಕಣ್ಣಿಗೆ ನೋವಾದರೂ ಸಹ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ.

ಇಬ್ಬರು ನಾಯಕರ ಅವಶ್ಯಕತೆ ನಮ್ಮ ಕಾಂಗ್ರೆಸ್ ಪಕ್ಷಕ್ಕಿದೆ. ಪಕ್ಷದಲ್ಲಿ ಹಿರಿಯ ನಾಯಕರು ಇದ್ದಾರೆ. ಅವರೆಲ್ಲರ ಜೊತೆಗೆ ಚರ್ಚೆ ನಡೆಸಿ ಪಕ್ಷ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಬಾಲಕೃಷ್ಣ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ.













