
ಬೆಂಗಳೂರು: ರಾಜ್ಯ ಸರ್ಕಾರ ಸಂಪುಟ ಪುನಾರಚನೆಗೆ ಮುಹೂರ್ತ ಕೂಡಿ ಬಂದಿದೆ. ಈ ಬಗ್ಗೆ ಸರ್ಕಾರದ ಸಚಿವರೇ ಸುಳಿವು ನೀಡಿದ್ದಾರೆ. ಈ ಸರ್ಕಾರ ಬಂದಾಗಲೇ ಸಂಪುಟ ಪುನಾರಚನೆ ಬಗ್ಗೆ ನಿರ್ಧಾರ ಆಗಿತ್ತು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದು, ಕುತೂಹಲ ಹೆಚ್ಚಿಸಿದೆ.

ನಗರದಲ್ಲಿ ಮಾತಾಡಿದ ಸಚಿವರು, ಯಾವ ಕಾಲಕ್ಕೆ ಏನೇನು ಆಗಬೇಕು ಅದು ಆಗುತ್ತೆ, ಈಗ ಜವಬ್ದಾರಿ ಸ್ಥಾನದಲ್ಲಿದ್ದು, ಕೆಲಸ ಮಾಡೋನಾ, ಮುಂದಿನದ್ದು ಕಾಲ ತೀರ್ಮಾನ ಮಾಡುತ್ತೆ ಎಂದಿದ್ದಾರೆ..
ಸಿಎಂ ಇರ್ತಾರೋ ಬಿಡ್ತಾರೋ ಬೇರೆ ಪ್ರಶ್ನೆ. ಈ ಸರ್ಕಾರ ಬಂದಾಗಲೇ ಮಂತ್ರಿ ಮಂಡಲದಿಂದ ಹೊರಗಿರುವವರಿಗೆ ಅವಕಾಶ ಕೊಡಬೇಕು ಅನ್ನೋದು ಮಂಡನೆ ಆಗಿದೆ.. ಆ ಸಂಪುಟ ಪುನಾರಚನೆ ಯಾವಾಗ ಆಗುತ್ತೆ ವರಿಷ್ಠರು ತೀರ್ಮಾನ ಮಾಡುತ್ತಾರೆ.
ಸೂಕ್ತ ಸಮಯದಲ್ಲಿ ಸಂಪುಟದಿಂದ ಹೊರಗಿರುವ ಅರ್ಹರಿಗೆ ಅವಕಾಶ ಕೊಡಬೇಕೆಂದು ವರಿಷ್ಠರು ತೀರ್ಮಾನಿಸಿದ್ದಾರೆ. ಸಂಪುಟದ ಒಳಗಿರುವರು ಕೂಡ ಇದಕ್ಕೆ ಒಪ್ಪಿದ್ದಾರೆ. ಇದು ಸ್ವಾಭಾವಿಕ ನ್ಯಾಯ, ಧರ್ಮ. ನಾನು ಹೊರಗೆ ಹೋದರು ಪರವಾಗಿಲ್ಲ. ಬೇರೆಯವರಿಗೆ ಅವಕಾಶ ಸಿಗಬೇಕು ಎಂದು ಪರೋಕ್ಷವಾಗಿ ಸಚಿವ ಸ್ಥಾನ ಬಿಡಲು ರೆಡಿ ಎಂದಿದ್ದು, ಇದು ತ್ಯಾಗ ಅಲ್ಲ ಕರ್ತವ್ಯ ಎಂದು ಭಾವಿಸುತ್ತೇವೆ ಎಂದಿದ್ದಾರೆ.

ಇನ್ನು ನನ್ನ ಸಾಮರ್ಥ್ಯ ಮೀರಿ ಪಕ್ಷ ಅವಕಾಶ ಕೊಟ್ಟಿದೆ. ಕೊಟ್ಟಿದೆ ಕೆಲಸ ಮಾಡಿದ್ದೇವೆ. ಇನ್ನೂ ಮಾಡೋದು ಹೆಚ್ಚಿದೆ. ಯಾವ ಸ್ಥಾನ ಕೊಟ್ರು ಕೆಲಸ ಮಾಡ್ತಿನಿ. ನನ್ನ ಕ್ಷೇತ್ರದಲ್ಲೇ ಕೆಲಸ ಮಾಡಲು ಸಮಯ ಸಾಲುತ್ತಿಲ್ಲ ಎಂದಿದ್ದಾರೆ. ಅವಕಾಶ ವಿಚಾರದಲ್ಲಿ ನನಗೆ ಹೊಟ್ಟೆ ತುಂಬಿದೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.







