
ಕಳೆದ ಎರಡು ವರ್ಷಗಳಿಂದ ಆಮೆ ಗತಿಯಲ್ಲಿ ನಡಿತಿರೊ ಕಾಮಗಾರಿ
ಸುಮಾರು 2 ಕೋಟಿ ರೂಪಾಯಿ ಅನುದಾನ ಬಂದ್ರು, ಸಮರ್ಪಕವಾಗಿ ಬಳಕೆಯಾಗ್ತಿಲ್ಲ
ಸ್ಥಳಿಯರು ಹಾಗೂ ಈಜು ಪ್ರೇಮಿಗಳಿಂದ ಕೇಳಿ ಬರ್ತಿರೊ ಆರೋಪ
ದ್ರೋರ್ಣಾಚಾರ್ಯ ಕ್ರೀಡಾಂಗಣದಲ್ಲಿ ನಿರ್ಮಾಣವಾಗ್ತಿರೊ ಈಜುಕೊಳ
ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿರೊ ಕ್ರೀಡಾಂಗಣ
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ನಿರ್ಮಿಸ್ತಿರೊ ಈಜುಕೊಳ
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗೆ ಸಿದ್ಧರಿದ್ಧ ಪ್ರತಿಭೆಗಳಿಗೆ ನಿರಾಶೆ
ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಕೂಡಿದ ಸ್ವಿಮ್ಮಿಂಗ್ ಫೂಲ್

ಕಾಮಗಾರಿ ಬಳಕೆಗೆ ತಂದ ಸಿಮೆಂಟ್ ಚೀಲ, ಕಬ್ಬಿಣದ ವಸ್ತು ಬಿದ್ದ ಜಾಗದಲ್ಲೆ ಬಿದ್ದಿವೆ
ಮಳೆ-ಗಾಳಿಗೆ ಸಿಮೆಂಟ್ ಗಟ್ಟಿಯಾದ್ರೆ, ಕಬ್ಬಿಣ ತುಕ್ಕು ಹಿಡಿದಿದೆ
ಇದೇ ವಸ್ತುಗಳನ್ನ ಬಳಸಿ ಕಾಮಗಾರಿಗೆ ಮುಂದಾಗ್ತಾರೆ ಅನ್ನೋದು ಸ್ಥಳೀಯರ ಆರೋಪ
ಈ ಭಾಗದ ಮಕ್ಕಳಿಗೆ ಸುಸಜ್ಜಿತ ಈಜುಕೊಳ ನಿರ್ಮಾಣ ಆಗ್ಬೇಕು ಅನ್ನೊದು ಜನಪ್ರತಿನಿಧಿಗಳ ಆಕಾಂಕ್ಷೆ
ಹಾಗಾಗಿ ಕಾಡಿ-ಬೇಡಿ ಶಾಸಕರು ಸಿಮ್ಮಿಂಗ್ ಫೂಲ್ ಮಂಜೂರು ಮಾಡಿಕೊಂಡು ಬಂದ್ರೆ

ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಈಜಕೊಳ ಕಾಣದ ಈ ಭಾಗದ ಮಕ್ಕಳು
ಸ್ವಿಮ್ಮಿಂಗ್ ಫೂಲ್ ಗೆ ಗುಣಮಟ್ಟದ ಕಬ್ಬಿಣ,ಮರಳು, ಸಿಮೆಂಟ್ ಹಾಕದೆ ನಿರ್ಮಾಣ ಮಾಡಿರುವ ಆರೋಪ
ಈಜುಕೊಳ ಸ್ವಚ್ಚ ಮಾಡಿ ನೀರು ಹೋರಹಾಕಬೇಕಾದ್ರೆ ನೀರೆ ಹೊರಹೋಗಲ್ಲ
ವ್ಯರ್ಥ ನೀರು ಬಿಡ್ಲಿಕ್ಕೆ ಹಳ್ಳದ ಮಟ್ಟ ಮೇಲಿದೆ. ಸ್ವಿಮ್ಮಿಂಗ್ ಫೂಲ್ ತಗ್ಗು ಪ್ರದೇಶದಲ್ಲಿದೆ
ಒಟ್ಟಾರೆ ಅವೈಜ್ಞಾನಿಕ ಈಜುಕೊಳ ನಿರ್ಮಾಣಕ್ಕೆ ಮುಂದಾದ ಗುತ್ತಿಗೆದಾರ
ಅದಕ್ಕೆ ಪೂರಕವಾಗಿ ಅಧಿಕಾರಿಗಳ ಸಾಥ್
ಕಾಟಾಚಾರಕ್ಕೆ ಕಟ್ಟಿ ಬಿಲ್ ತೆಗೆದುಕೊಳ್ಳುವ ಹುನ್ನಾರು ನಡೆಸಿದ್ದಾರೆ ಅನ್ನೊದು ಸ್ಥಳೀಯರು ಆರೋಪ
ಸ್ವಿಮ್ಮಿಂಗ್ ಫೂಲ್ ಕಾಮಗಾರಿ ಹಾಗೂ ನಿರ್ವಹಣೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದ್ರೆ

ಅಲ್ಲಿ ಕಾಮಗಾರಿ ಕಳಪೆ ಆಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ
ಬೆಂಗಳೂರು ಇಂಜನೀಯರ್ ವಿಭಾಗ, ಕೆ.ಆರ್.ಡಿ.ಎಲ್ ವಿಭಾಗ ಗಮನಕ್ಕೆ ತರ್ತೆನೆ
ಸರ್ಕಾರಿ ಕೆಲಸ ಕಳಪೆ ಕಾಮಗಾರಿ ಆಗಬಾರದು, ಗುಣ ಮಟ್ಟದ ಕಾಮಗಾರಿ ಆಗಬೇಕು
ಅದು ಕಳಪೆ ಆಗಿದ್ರೆ ಸಂಬಂಧಿಸಿರವರ ಮೇಲೆ ಮೇಲಾಧಿಕಾರಿಗಳು ಶಿಸ್ತು ಕ್ರಮ ಜರುಗಿಸ್ತಾರಂತೆ






