
ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಇವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ NIA ಅಧಿಕಾರಿಗಳು ವಶಕ್ಕೆ ಪಡೆದು ಜೋಧ್ ಪುರಕ್ಕೆ ಕರೆದೋಯ್ದಿದ್ದಾರೆಂದು ಅವರ ಪತ್ನಿ ತಿಳಿಸಿದ್ದಾರೆ. ಸೋನಮ್ ವಾಂಗ್ಚುಕ್ ರವರು ಲಡಾಖ್ ನನ್ನು ಪ್ರತ್ಯೇಕ ರಾಜ್ಯವನ್ನಾಗಿ ಮತ್ತು ಸಂವಿಧಾನದ 6 ಅನುಚ್ಚೇಧದಡಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದರು.
ಕೆಲವು ದಿನಗಳ ಹಿಂದೆ ಪತ್ರಿಭಟನೆಯೂ ತೀವ್ರ ಸ್ವರೂಪ ಪಡೆದುಕೊಂಡಿತ್ತು, ಪ್ರತಿಭಟನಾಕಾರರು ಲೇಹ್ ನಲ್ಲಿರುವ ಬಿಜೆಪಿ ಕಚೇರಿಗೆ ಲಗ್ಗೆ ಇಟ್ಟು, ಪಕ್ಷದ ಕಚೇರಿಯನ್ನು ಬೆಂಕಿ ಹೆಚ್ಚಿ ದ್ವಂಸಗೊಳಿಸುವ ಪ್ರಯತ್ನ ಮಾಡಿದರು. ಇನ್ನೂ ಈ ಪ್ರತಿಭಟನೆಯಲ್ಲಿ 4 ಜನರು ಮೃತಪಟ್ಟರೆ ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ. ಸೋನಮ್ ವಾಂಗ್ಚುಕ್ ಅವರು ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ಲೇಹ್ ಲಡಾಖ್ ಪ್ರದೇಶಗಳನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಲು ಪತ್ರವನ್ನು ಬರೆದಿದ್ದರು ಕೂಡ ಮೋದಿ ಸರ್ಕಾರ ಈ ಬಗ್ಗೆ ಗಮನವಹಿಸದೆ ಈ ವಿಚಾರವನ್ನು ನಿರ್ಲಕ್ಷಿಸುತ್ತಲೇ ಬಂದಿದೆ.

ಈ ಹಿನ್ನಲೆಯಲ್ಲಿ ಸೋನಮ್ ವಾಂಗ್ಚುಕ್ ಅವರು ಮಾರ್ಚ್ ತಿಂಗಳಲ್ಲಿ 35 ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಅವರನ್ನು ಭೇಟಿಯಾಗಲು ಭಾರತೀಯ ಚಿತ್ರರಂಗದ ಪ್ರಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರಾಜ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿ ಇವರು ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು. ಆಗಲು ಕೂಡ ಕೇಂದ್ರ ಸರ್ಕಾರ ಸೋನಾಮ್ ಅವರನ್ನು ಭೇಟಿಯಾಗಲು ಯಾವ ಒಬ್ಬ ಕೇಂದ್ರ ಸಚಿವರಾಗಲಿ ಅಥವಾ ಸಂಸದರಾಗಲಿ ಭೇಟಿಯಾಗಲಿಲ್ಲ.
ಈ ಬಾರಿಯೂ ಅವರು 15 ದಿನಗಳ ಕಾಲ ಉಪವಾಸ ಸತ್ಯಾ ಗ್ರಹವನ್ನು ಪ್ರಾರಂಭಿಸಿದ್ದರು. ಆದರೆ ಯಾವಾಗ ಪ್ರತಿಭಟನೆ ಕಾವು ಹೆಚ್ಚಾಯಿತು ಆಗ ಅವರು ಸತ್ಯಗ್ರಹವನ್ನು ಮುರಿದಿದ್ದಲ್ಲದೆ, ಪ್ರತಿಭಟನಾಕಾರರನ್ನು ಎಚ್ಚರಿಸಿದ್ದಾದರು ಸಹ ಯಾವುದೇ ಪ್ರಯೋಜನವಾಗಲಿಲ್ಲ ಕಾರಣ ಆಗಲೇ ಪರಿಸ್ಥಿತಿ ಕೈ ಮೀರಿತ್ತು. ಇದಾದ ಬಳಿಕ ಅವರ ಬಂಧನವಾಗಿ
5 ದಿನಗಳು ಕಳೆದಿವೆಯಾದರೂ ಕೂಡ NIA ಅಧಿಕಾರಿಗಳು ಈವರೆಗೂ ಯಾವುದೇ ಸೂಕ್ತ ಮಾಹಿತಿಯನ್ನು ನೀಡುತ್ತಿಲ್ಲ. ಇತ್ತ ಕೇಂದ್ರ ಸರ್ಕಾರ ಎಂದಿನಿಂತೆ ಈ ವಿಚಾರದಲ್ಲೂ
ಮೌನವನ್ನು ತಾಳಿದೆ.

ಇವರ ಬಗ್ಗೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯನದ ಹಾಗೂ Super Hit Movie 3 Idiots ಚಿತ್ರವು ಪ್ರಖ್ಯಾತ ಲೇಖಕ ಚೇತನ್ ಭಗತ್ ಬರೆದ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಅಮೀರ್ ಖಾನ್ ಮಾಡಿದ ರಾಂಚೋದಾಸ್ ಛಾಂಛಡ್ ಅಲಿಯಾಸ್ ಪುನ್ ಸುಕ್ ವಾಂಗ್ಡು ಪಾತ್ರವು ಇವರ ಬಗ್ಗೆ ಎಂಬುದು ವಿಶೇಷ.
