ತುಮಕೂರಿನ (Tumkur) ನಾಗರಕಟ್ಟೆ ಹಿಂದೂ ಮಹಾಗಣಪತಿ (Hindu maha ganapathi) ವಿಸರ್ಜನಾ ಮೆರವಣಿಗೆ ವೇಳೆ ಪೊಲೀಸರಿಂದ ಹಲ್ಲೆ ನಡೆಸಲಾಗಿರುವ ಆರೋಪ ಕೇಳಿಬಂದಿದೆ. ಹಿಂದೂ ಮಹಾಗಣಪತಿ ಕಾರ್ಯಕರ್ತರು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.
ತುಮಕೂರಿನ ನಗರಕಟ್ಟೆ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.ಈ ಘಟನೆ ವೇಳೆ ಹಿಂದೂ ಮಹಾಗಣಪತಿಯ ಸಂಘದ ಓರ್ವ ಕಾರ್ಯಕರ್ತನಿಗೆ ಗಾಯಗಳಾಗಿದೆ. ತುಮಕೂರು ನಗರದ ಎಂಜಿ ರಸ್ತೆಯಲ್ಲಿ ರಾತ್ರಿ ೯ ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಗಮೇಶ ವಿಸರ್ಜನಾ ಮೆರವಣಿಗೆ ಸಾಗುವ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ನೂಕಾಟ ತಳ್ಳಾಟ ಆರಂಭವಾಗಿದೆ. ಹೀಗಾಗಿ ಗುಂಪು ಚದುರಿಸಲು ಪೊಲೀಸರು ಮುಂದಾಗಿದ್ದಾರೆ.

ಈ ವೇಳೆ ಸೊಗಡು ಶಿವಣ್ಣ ಕೆಳಗೆ ಬಿದ್ದಿದ್ದು, ಅವರನ್ನು ಮೇಲೆತ್ತಲು ಹೊದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಇದ್ರಿಂದ ರೋಹಿತ್, ಹರೀಶ್ ಎಂಬ ಹಿಂದೂ ಮಹಾಗಣಪತಿ ಕಾರ್ಯಕರ್ತರಿಗೆ ಗಾಯಗಳಾಗಿದೆ. ರೋಹಿತ್ ಎಂಬ ವ್ಯಕ್ತಿಯ ಕಣ್ಣಿನ ಕೆಳಭಾಗದಲ್ಲಿ ಗಂಭೀರ ಗಾಯವಾಗಿದ್ದು ಸದ್ಯ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.



