ಬೆಂಗಳೂರಿನ (Bengaluru ) ವಿಲ್ಸನ್ ಗಾರ್ಡನ್ ನ (Wilson garden) ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟ (Cylinder blast) ಸಂಭವಿಸಿದ್ದು ಮನೆಯ ಮೂವರು ಸದಸ್ಯರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಡುಗೋಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೊದಲ ಮಹಡಿಯಲ್ಲಿದ್ದ ಮಹಿಳೆ ಕಸ್ತೂರಿ (28), 9 ವರ್ಷದ ಬಾಲಕಿಗೆ ಗಂಭೀರ ಗಾಯವಾಗಿದ್ದು, ಸರಸಮ್ಮ (50) ಎಂಬಾಕೆಗೆ ತಲೆಗೆ ತೀವ್ರ ಪೆಟ್ಟಾಗಿದೆ. ಇನ್ನು ಸ್ಪೋಟದ ರಭಸಕ್ಕೆ ಮೊದಲನೆ ಮಹಡಿ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. ಸಬ್ರಿನ್ ಬಾನು (35),ಮುಬಾರಕ್ (10) ಪಾತೀಮಾ (8) ಸೇರಿ ಒಟ್ಟಾರೆ ಏಳು ಮಂದಿಗೆ ಗಾಯಗಳಾಗಿದೆ.

ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.ಕಟ್ಟಡದ ಮೇಲ್ಭಾಗದ ಮನೇಲಿ ಸ್ಫೋಟ ಆಗಿದೆ. ಮೇಲುನೋಟಕ್ಕೆ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.ಸಿಲಿಂಡರ್ ಬ್ಲಾಸ್ಟ್ ಆಗಿರಬಹುದು ಅನ್ನೋ ಶಂಕೆಯಿದೆ ಎಂದಿದ್ದಾರೆ. ಇದೊಂದು ವರಾಂಡ, ವರಾಂಡ ರೀತಿಯ ಮನೆಯಿಂದ ಎಲ್ಲಾ ಮನೆಗಳು ಬಿದ್ದಿವೆ ಎಂದಿದ್ದಾರೆ.

ಇನ್ನು ಘಟನೆಯಲ್ಲಿ ಮುಬಾರಕ್ ಎಂಬ ಹುಡುಗ ಸಾವನ್ನಪ್ಪಿದ್ದಾನೆ. ಒಂಭತ್ತು ಜನರಿಗೆ ಇಂಜುರಿಗಳಾಗಿರೋ ಮಾಹಿತಿ ಇದೆ.ಸದ್ಯ ಎಲ್ಲರಿಗೂ ಚಿಕಿತ್ಸೆ ನೀಡಲಾಗ್ತಿದೆ.ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.ಹತ್ತು ಜನರಲ್ಲಿ ಓರ್ವ ಸಾವನ್ನಪ್ಪಿದ್ದಾನೆ.ಮೃತ ಮುಬಾರಕ್ ಕುಟುಂಬಸ್ಥರಿಗೆ ಐದು ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.