• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸೈಟ್ ಕೊಡಿಸೋದಾಗಿ ಹಣ ಪಡೆದು ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ಭಾವನ ಬೆಳಗೆರೆ 

Chetan by Chetan
August 2, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಸೈಟ್ ಕೊಡಿಸೋದಾಗಿ ಹಣ ಪಡೆದು ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ಭಾವನ ಬೆಳಗೆರೆ 
Share on WhatsAppShare on FacebookShare on Telegram

ದಿವಂಗತ ಪತ್ರಕರ್ತ ರವಿ ಬೆಳಗೆರೆ (Ravi belegere) ಅವರ ಪುತ್ರಿ ಭವನ ಬೆಳಗೆರೆ (Bhavana belegere) ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನಿಂದ (KTVA) ತಮಗೆ ಮೋಸವಾಗಿದ್ದು, ಸೈಟ್ ಕೊಡುವುದಾಗಿ ಜನ ಪಡೆದು ತಮ್ಮನ್ನು ವಂಚಿಸಲಾಗಿದೆ ಎಂದು ಭವನ ಬೆಳೆಗೆರೆ ಆರೋಪಿಸಿದ್ದು, ದೂರು ದಾಖಲಿಸಿದ್ದಾರೆ. ಈ ಸಂಬಂಧ ಈಗಾಗಲೇ ಎಫ್.ಐ.ಆರ್ ದಾಖಲಾಗಿದೆ. 

ADVERTISEMENT

ಈ ದೂರಿನ ಸಾರಾಂಶ ಹೀಗಿದೆ. ಪಿರ್ಯಾದುದಾರರಾದ ಶ್ರೀಮತಿ ಭಾವನ ಬೆಳಗೆರೆ ರವರು ನೀಡಿದ ದೂರಿನ ಅನ್ವಯ, ಕರ್ನಾಟಕ ಕಿರುತರೆ ಚಿತ್ರ ನಟ-ನಟಿಯವರು ಸೇರಿಕೊಂಡು ಇಂಡಸ್ಟ್ರಿ ಹಾಗೂ ತಮ್ಮ ಒಳಿತಿಗೆ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ [KTVA] ರಚಿಸಿಕೊಂಡಿದ್ದು, ಸದರಿ ಆಸೋಷಿಯೇಷನ್ ನಲ್ಲಿ.. ಕೇಬಲ್ ಆಪರೇಟರ್ಸ್, ಬ್ರಾಡ್ ಕಾಸ್ಮರ್ಸ್ ಮತ್ತು ಇಂಡಸ್ಟ್ರಿಯ ಇತರರು ಇರುತ್ತಾರೆ.

ಈಗಿರುವಾಗ್ಗೆ, ಸಂಜೀವ್ ತಗಡೂರು, ಎನ್. ರವೀಂದ್ರ, ಎ.ಎನ್ ಉಮಾಕಾಂತ್, ಎಂ. ಗುರುಪ್ರಸಾದ್ ಎಂಬುವವರು ಸದರಿ ಅಸೋಷಿಯೇಷನ್ ನ ಸೈಟ್ ಕಮಿಟಿ ಮೆಂಬರ್ಸ್ ಆಗಿದ್ದು, ಸದರಿಯವರು ಸುಮಾರು 2012-13 ರಲ್ಲಿ. ASB Developers & Promoters ಎಂಬುವವರ ಜೊತೆ ಸೇರಿಕೊಂಡು ಅಸೋಹೀಯೇಷನ್ ನ ಸದಸ್ಯರುಗಳಿಗೆ ಸೈಟ್ ಕೊಡಿಸುವುದಾಗಿ ಪ್ರೊಮೋಟ್ ಮಾಡಿ ನಂಬಿಸಿದ್ದು, ಅದರಂತೆ ನಾವುಗಳು ಸಹ ಸದರಿಯವರ ಮಾತುಗಳನ್ನು ನಂಬಿ ASB Developers & Promoters ಕಂಪೆನಿಗೆ ಹಣವನ್ನು ಹೂಡಿಕೆ ಮಾಡಿ ಸೈಟ್ ಖರೀದಿ ಮಾಡಲು ಮುಂದಾಗಿದ್ದು, ಅದರಂತೆ KTVA ಸದಸ್ಯರುಗಳಾದ ಶ್ರೀ ಶರತ್ ಚಂದ್ರ ಟಿ.ಎಲ್. ಶ್ರೀ ರಾಹುಲ್ ಟಿ.ಎಲ್ ಹಾಗೂ ಪಿರ್ಯಾದುದಾರರಾದ ಶ್ರೀಮತಿ ಭಾವನ ಬೆಳಗೆರೆ ರವರು ಹಣವನ್ನು ಹೂಡಿಕೆ ಮಾಡಿದ್ದು ದಿನಾಂಕ 06/10/2015 ರಂದು ASB Developers & Promoters ಕಂಪೆನಿಯ ಎಸ್. ಭಗೀರತ ರವರು ನಮ್ಮಗಳಿಗೆ ಕ್ರಮವಾಗಿ ಸರ್ವೆ ನಂ. 138/11, ತಾವರೆಕೆರೆ ಗ್ರಾಮ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು, ಇಲಿ..

ಸೈಟ್ ನಂ. 16, ಖಾತಾ ನಂ. 58, ಪೂರ್ವ ಪಶ್ಚಿಮವಾಗಿ 60 ಅಡಿ, ಉತ್ತರ ದಕ್ಷಿಣವಾಗಿ 40 ಅಡಿ, ಸೈಟ್ ನಂ. 15, ಖಾತಾ ನಂ. 58, ಪೂರ್ವ ಪಶ್ಚಿಮವಾಗಿ 60 ಅಡಿ, ಉತ್ತರ ದಕ್ಷಿಣವಾಗಿ 40 ಅಡಿ ಹಾಗೂ ಸೈಟ್ ನಂ. 01, ಖಾತಾ ನಂ. 58, ಪೂರ್ವ ಪಶ್ಚಿಮವಾಗಿ 60 ಅಡಿ, ಉತ್ತರ ದಕ್ಷಿಣವಾಗಿ 40 ಅಡಿ ನಿವೇಶನಗಳನ್ನು ಉಪನೋಂದಣಾಧಿಕಾರಿಗಳ ಕಚೇರಿ ರಾಜರಾಜೇಶ್ವರಿ ನಗರ,.. ಶುದ್ರಕ್ರಯ ಮಾಡಿರುತ್ತಾರೆ, ತದನಂತರ ಖಾತಾಗಳನ್ನು ಮೇಲ್ಕಂಡ ಖರೀದಿದಾರ ಹೆಸರಿಗೆ ವರ್ಗಾಹಿಸುವ ಸಂಬಂಧ ಪಿರ್ಯಾದುದಾರರು ಹಾಗೂ ಖರೀದಿದಾರರು ಹಲವಾರು ಬಾರಿ ಸಂಜೀವ್ ತಗಡೂರು, ಎನ್. ರವೀಂದ್ರ, ಎ.ಎನ್ ಉಮಾಕಾಂತ್, ಎಂ. ಗುರುಪ್ರಸಾದ್ ಹಾಗೂ ASB Developers & Promoters ಕಂಪನಿಯ ಎಸ್. ಭಗೀರತ ರವರನ್ನು ಸಂಪರ್ಕಿಸಲಾಗಿ ಸದರಿಯವರು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ… ಇದೇ ವಿಚಾರವಾಗಿ ಖರೀದಿದಾರರು ಎಲ್ಲರೂ ಸೇರಿಕೊಂಡು ಖಾತಾವನ್ನು ತಮ್ಮ ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಭೇಟಿ ನೀಡಿದಾಗ ಮೇಲ್ಕಂಡ ಸ್ವತ್ತು ನೋಂದಾಯಿತ ಇಲ್ಲದಿರುವುದಾಗಿ ತಿಳಿದು ಬಂದಿರುತ್ತದೆ.

ಮುಂದುವರೆದು, KTVA ಸೈಟ್ ಕಮಿಟಿ ಸದಸ್ಯರುಗಳಾದ ಸಂಜೀವ್ ತಗಡೂರು, ಎನ್. ರವೀಂದ್ರ, ಎ.ಎನ್ ಉಮಾಕಾಂತ್, ಎಂ. ಗುರುಪ್ರಸಾದ್ ರವರು KTVA ಅಧಿಕೃತ ಖಾತೆಯಿಂದ ಹಾಗೂ ಇತರೆ ಖಾತೆಗಳಿಂದ ASB Developers & Promoters ಕಂಪೆನಿಯ ಎಸ್. ಭಗೀರತ ರವರ ಜೊತೆ ಸೇರಿಕೊಂಡು ಸದರಿ ಕಂಪೆನಿಗೆ 14/05/2012 ರಲೆ.. MoU ಮಾಡಿಕೊಂಡು KTVA ಸದಸ್ಯರುಗಳಿಂದ ಸೈಟ್ ಖರೀದಿಗೆಂದು ಹಣವನ್ನು ಪಡೆದುಕೊಂಡು, ಸದಸ್ಯರುಗಳ ಗಮನಕ್ಕೆ ಬಾರದ ಹಾಗೆ ಅಕ್ರಮವಾಗಿ 1.6 ಕೋಟಿ ರೂ. ಗಳನ್ನು ದುರುಪಯೋಗಪಡಿಸಿಕೊಂಡಿರುತ್ತಾರೆ,

ಅದೇ ರೀತಿ 14/03/2024 ರಂದು ತಾವು ಈ ಹಿಂದೆ ದಿ, 14/05/2012 ರಲ್ಲಿ.. ಮಾಡಿಕೊಂಡಿದ್ದ MoU ದಸ್ತಾವೇಜು ಸಂಖ್ಯೆ VJN-1- 000493-2012-13 ಅನ್ನು ಹಕ್ಕು ಪತ್ರ ಒತ್ತೆಯಿಡುವ ರದ್ದು ಪತ್ರ ಮಾಡಿಕೊಂಡು, 1.6 ಕೋಟಿ ರೂ. ಗಳನ್ನು ASB Developers & Promoters ಕಂಪೆನಿಯ ಎಸ್. ಭಗೀರತ ರವರಿಂದ ಸಂಜೀವ್ ತಗಡೂರು, ಎನ್. ರವೀಂದ್ರ, ಎ.ಎನ್ ಉಮಾಕಾಂತ್, ಎಂ. ಗುರುಪ್ರಸಾದ್ ರವರು RTGS ಮುಖೇನ ಅಕ್ರಮವಾಗಿ ಹಣ ಪಡೆದುಕೊಂಡಿರುತ್ತಾರೆ,

ಈಗೆ, ಮೇಲ್ಕಂಡ ಸಂಜೀವ್ ತಗಡೂರು, ಎನ್. ರವೀಂದ್ರ, ಎ.ಎನ್ ಉಮಾಕಾಂತ್, ಎಂ. ಗುರುಪ್ರಸಾದ್ ಹಾಗೂ ASB Developers & Promoters ಕಂಪೆನಿಯ ಎಸ್. ಭಗೀರತ ರವರು ಮೋಸಮಾಡುವ ಉದ್ದೇಶದಿಂದ ಒಳಸಂಚು ನಡೆಸಿ, ನಕಲಿ ಲೇಔಟ್ ಪ್ಲಾನ್ ಹಾಗೂ ದಾಖಲಾತಿಗಳನ್ನು ಸೃಷ್ಟಿಸಿಕೊಂಡು, ಸೈಟ್ ಮಾರಾಟ ಮಾಡುತ್ತೇವೆ ಎಂದು ನಂಬಿಸಿ ಸುಮಾರು 139 ಜನ KTVA ಸದಸ್ಯರುಗಳಿಂದ ಹಣ ಪಡೆದುಕೊಂಡು, ಹಣವನ್ನು ದುರುಪಯೋಗಪಡಿಸಿಕೊಂಡು ವಂಚಿಸಿರುತ್ತಾರೆ. ಆದ್ದರಿಂದ ಸದರಿ ಆಸಾಮಿಗಳ ವಿರುದ್ಧ ಕಾನೂನು ರೀತಾ ಕ್ರಮ ಜರುಗಿಸಿ ಎಂದು ಕೊಟ್ಟ ದೂರು ದಾಖಲಿಸಿದ್ದಾರೆ.

Tags: bhavana belagerebhavana belagere bigg bossbhavana belagere interviewbhavana belagere on darshanbhavana belagere videosBhavana belegerebhavana belegere angrybhavana belegere controversybhavana belegere on darshanbhavana belegere on darshan casebhavana belegere on darshan wifebhavana belegere on pavithra gowdabhavana belegere on renukaswamy casebhavana belegere on vijayalakshmibhavana belegere videosbhavana beleregebhavanabelegereFIRKTVAravi belegereravibelegere
Previous Post

ಜನರ ಸಮಸ್ಯೆ ಬದಲಿಗೆ ಕಾಂಗ್ರೆಸ್‌ನ ಸಿಎಂ ಖುರ್ಚಿಗೆ ಹೋರಾಡುತ್ತಿರುವ ಕರ್ನಾಟಕ ಬಿಜೆಪಿ! ✍🏻ರಾಜೀವ ಹೆಗಡೆ

Next Post

Lakshmi Hebbalkar: ಎಐಸಿಸಿ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾಗಿ..!!

Related Posts

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ
Top Story

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

by ಪ್ರತಿಧ್ವನಿ
April 30, 2026
0

ದಶಕದ ಹಿಂದೆ ರಾಜ್ಯವನ್ನೇ ಕಂಗೊಳಿಸಿದ್ದ ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಪ್ರಕರಣದ...

Read moreDetails
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
Next Post

Lakshmi Hebbalkar: ಎಐಸಿಸಿ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾಗಿ..!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada