• Home
  • About Us
  • ಕರ್ನಾಟಕ
Friday, July 25, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿರುವ ಪ್ಯಾರಾ ನಾರ್ಮಲ್ ಹಾಗೂ ಹಾರಾರ್ ಜಾನಾರ್ ನ ಚಿತ್ರ “ಕಮರೊ2” ಆಗಸ್ಟ್ 1 ರಂದು ತೆರೆಗೆ .

ಪ್ರತಿಧ್ವನಿ by ಪ್ರತಿಧ್ವನಿ
July 23, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ವಾಣಿಜ್ಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಪ್ಯಾರಾ ನಾರ್ಮಲ್ ಜಾನರ್ ನ “ಕಮರೊ2” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು,‌ ಭಾರಿ ಕುತೂಹಲ ಮೂಡಿಸಿದೆ. ಹಾರಾರ್ ಕಥಾಹಂದರವನ್ನೂ ಹೊಂದಿರುವ ಈ ಚಿತ್ರ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ. ಪವನ್ ಗೌಡ ನಿರ್ಮಾಣದ ಈ ಚಿತ್ರವನ್ನು ಎ.ಪರಮೇಶ್ ನಿರ್ದೇಶಿಸಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

ADVERTISEMENT

ಮೊದಲು ಮಾತನಾಡಿದ ನಿರ್ದೇಶಕ ಪರಮೇಶ್, ನಾನು ಈ ಹಿಂದೆ ಕನ್ನಡದಲ್ಲಿ ಮೊದಲ ಬಾರಿ ಅಪರೂಪ ಎನ್ನಬಹುದಾದ ಪ್ಯಾರಾ ನರ್ಮಲ್ ಜಾನರ್ ನ “ಕಮರೊಟು ಚೆಕ್ ಪೋಸ್ಟ್” ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದೆ. ಅದು ನನ್ನ ತಂತ್ರಜ್ಞಾನದ ಅನುಭವಕ್ಕಾಗಿ ಮಾಡಿದ ಚಿತ್ರ. ಅದರಲ್ಲಿ ಯಾವುದೇ ಪರಿಚಿತ ಕಲಾವಿದರು ಅಭಿನಯಿಸಿರಲಿಲ್ಲ. ಆದರೂ ಆ ಚಿತ್ರ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಈಗ ಸೀಕ್ವೆಲ್ ಆಗಿ “ಕಮರೊ2” ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಇದು ಸಹ ಹಾರಾರ್ ಕಥೆಯೊಂದಿಗೆ ಪ್ಯಾರಾ ನಾರ್ಮಲ್ ಜಾನರ್ ನ ಚಿತ್ರವಾಗಿದೆ. ಚಿತ್ರಕ್ಕೆ ಮಂಗಳೂರಿನ ಉಡುಪಿ, ಚಿಕ್ಕ ಮoಗಳೂರು ಸುತ್ತಮುತ್ತಲ್ಲಿನಲ್ಲಿ ಚಿತ್ರೀಕರಣ ಆಗಿದೆ. ಚಿತ್ರದ ಕಥೆ ಕೇಳಿದ ನಿರ್ಮಾಪಕ ಪವನ್ ಗೌಡ ನಿರ್ಮಾಣಕ್ಕೆ ಮುಂದಾದರು. ಮೊದಲ ಬಾರಿಗೆ ವಿಭಿನ್ನಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ಈವರೆಗೂ ಮಾಡಿರದ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಅವರಿಗೆ ಕಥೆ ಹೇಳುವಾಗ ಒಪ್ಪಿಕೊಳ್ಳುತ್ತಾರೊ? ಇಲ್ಲವೊ? ಎಂಬ ಭಯವಿತ್ತು. ಆದರೆ ಕಥೆ ಕೇಳಿದ ತಕ್ಷಣ ಒಪ್ಪಿಕೊಂಡರು. ಕನ್ನಡದ “ಮಿಥುನ ರಾಶಿ” ಸೇರಿದಂತೆ ತಮಿಳಿನ ಧಾರಾವಾಹಿಗಳಲ್ಲೂ ನಟಿಸಿ ಜನಪ್ರಿಯರಾಗಿರುವ ಅನಂತಸ್ವಾಮಿ, ತಮ್ಮ ಅಭಿನಯದ ಮೂಲಕ ಜನರ ಮನಸನ್ನು ಗೆದ್ದಿದಾರೆ.

“ಚೋ ಮಂತರ್” ಸಿನಿಮಾದ ಮೊಗ್ರಾ ಪಾತ್ರದಿಂದಾಗಿ ಚಿರಪರಿಚಿತರಾಗಿರುವ ರಜನಿ ಭಾರದ್ವಾಜ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ನೀನಾಸಂ ಅಶ್ವಥ್, ನಾಗೇಂದ್ರ ಅರಸ್, ಮಹೇಶ್ ರಾಜ್, ಬೇಬಿ ಖುಷಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಶೇಷಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಸಹ ಇದ್ದಾರೆ. ಎ.ಟಿ. ರವೀಶ್ ಸಂಗೀತ ನಿರ್ದೇಶನ ಹಾಗೂ ಪ್ರಜ್ವಲ್ ಗೌಡ ಛಾಯಾಗ್ರಹಣವಿರುವ ಈ ಚಿತ್ರ ಪ್ರೇಕ್ಷಕರನ್ನು ಕುರ್ಚಿ ತುದಿಯಲ್ಲಿ ಕೂರಿಸುವ ಹಾಗೂ ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರ ಎಂದು ಹೇಳುತ್ತಾ ನಿರ್ದೇಶಕರು, ಆಗಸ್ಟ್ 1 ರಂದು ರಾಜ್ಯದಂತ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಪ್ರಿಯಾಂಕ ಉಪೇಂದ್ರ ಅವರು ನಿರ್ದೇಶಕ ಪರಮೇಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ನನ್ನ ಪಾತ್ರ ಕೂಡ ಚೆನ್ನಾಗಿದೆ. ಗುಟಮಟ್ಟದಲ್ಲಂತೂ ಯಾವುದೇ ಭಾಷೆಗಳ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ಬಹಳ ಉತ್ತಮಾವಾಗಿ ಚಿತ್ರಿಸಿದ್ದಾರೆ. ಇಂತಹ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರಬೇಕು. ನನ್ನ ಪಾತ್ರ ಕೂಡ ಇಲ್ಲಿ ವಿಭಿನ್ನವಾಗಿದೆ ಎಂದರು ನಟಿ ಪ್ರಿಯಾಂಕ ಉಪೇಂದ್ರ.

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನನಗೆ ಪರಮೇಶ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಖುಷಿಯಾಗಿ ನಟಿಸಲು ಒಪ್ಪಿಕೊಂಡೆ. ಪ್ರೇಕ್ಷಕರು ಕೂಡ ನನ್ನ ಪಾತ್ರ ಒಪ್ಪಿಕೊಳ್ಳುವ ಭರವಸೆ ಇದೆ ಎಂದು ನಟ ಅನಂತ ಸ್ವಾಮಿ ತಿಳಿಸಿದರು.

ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ ಚಿತ್ರೀಕರಣದ ಅನುಭವ ತುಂಬಾ ಚೆನ್ನಾಗಿತ್ತು ಎಂದು ನಟಿ ರಜನಿ ಭಾರದ್ವಾಜ್ ಹೇಳಿದರು.

ನನ್ನನ್ನು ಈ ಚಿತ್ರದಲ್ಲಿ ನೀವು ಊಹೆ ಮಾಡುವುದು ಸ್ವಲ್ಪ ಕಷ್ಟ. ಆ ರೀತಿಯ ಪಾತ್ರ. ಈವರೆಗೂ ಮಾಡಿರದ ಪಾತ್ರ ಕೂಡ ಎಂದರು ನಟ ನೀನಾಸಂ ಅಶ್ವಥ್.

ತಂತ್ರಜ್ಞರು ಹಾಗೂ ಕಲಾವಿದರು ನೀಡಿದ ಪ್ರೋತ್ಸಾಹವೇ ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣ. ಅವರಿಗೆ ನನ್ನ ಧನ್ಯವಾದ. ಇದು ನನ್ನ ನಿರ್ಮಾಣದ ಮೊದಲ ಚಿತ್ರ. ನಾನು ರವಿಚಂದ್ರನ್ ಅವರ ಅಭಿಮಾನಿ. ಹಾಗಾಗಿ ನಮ್ಮ ಸಂಸ್ಥೆಗೆ ಕನಸು ಪಿಕ್ಚರ್ಸ್ ಎಂದು ಹೆಸರಟ್ಟಿದ್ದೇನೆ. ಆಗಸ್ಟ್ 1 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರ ಬೆಂಬವಿರಲಿ ಎಂದರು ನಿರ್ಮಾಪಕ ಪವನ್ ಗೌಡ.

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಎ.ಟಿ.ರವೀಶ ಮಾಹಿತಿ ನೀಡಿದರು. ನಟರಾದ ನಾಗೇಂದ್ರ ಅರಸ್, ರಕ್ಷಿತ್, ಪವನ್ ಎಸ್ ನಾರಾಯಣ್, ಮಹೇಶ್ ರಾಜ್, ಬೇಬಿ ಖುಷಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ವಿ. ಎಫ್. ಎಕ್ಸ್ .ತಂತ್ರಜ್ಞ ಸಂಗಮೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags: A ParameshAnanthaswamyBaby KushiCinemakamoro2kannada cinemaMahesh RajMithuna RashiNagendra ArasNinasam Ashwathpavan Gowdapriyanka upendraRajani Baradwajsandalwood
Previous Post

ಜುಲೈ 25ರಂದು ‘ಮಹಾವತಾರ ನರಸಿಂಹ’ ಆನಿಮೇಷನ್‌ ಚಿತ್ರ ಬಿಡುಗಡೆ

Next Post

Lakshmi Hebbalkar: ಎಲ್ಲರಿಗೂ ಒಳಿತು ಬಯಸುವ ವೀರಶೈವ ಲಿಂಗಾಯತ ಸಮಾಜ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Related Posts

Top Story

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

by ಪ್ರತಿಧ್ವನಿ
July 25, 2025
0

ಲವ್ ಜಾನರ್ ನ ಈ ಚಿತ್ರದ ಚಿತ್ರೀಕರಣ ಆಗಸ್ಟ್ ನಲ್ಲಿ ಆರಂಭ ಕನ್ನಡದಲ್ಲಿ ಪ್ರೇಮಕಥೆಗಳುಳ್ಳ ಚಿತ್ರಗಳು ಸಾಕಷ್ಟು ‌ಬಂದಿವೆಯಾದರೂ, ಒಂದಕ್ಕಿಂತ ಒಂದು ವಿಭಿನ್ನ ಎನ್ನಬಹುದು. ಪ್ರೇಮಕಥೆಯೇ ಪ್ರಧಾನವಾಗಿರುವ...

Read moreDetails
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

July 25, 2025
ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

July 25, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

ಒಟ್ಟೊಟ್ಟಿಗೆ ದೆಹಲಿಗೆ ಹಾರಿದ ಸಿಎಂ & ಡಿಸಿಎಂ..! ತರಾತುರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ..?! 

July 25, 2025
ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು

ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು

July 25, 2025
Next Post

Lakshmi Hebbalkar: ಎಲ್ಲರಿಗೂ ಒಳಿತು ಬಯಸುವ ವೀರಶೈವ ಲಿಂಗಾಯತ ಸಮಾಜ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Recent News

Top Story

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

by ಪ್ರತಿಧ್ವನಿ
July 25, 2025
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?
Top Story

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

by Chetan
July 25, 2025
ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 
Top Story

ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

by Chetan
July 25, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 
Top Story

ಒಟ್ಟೊಟ್ಟಿಗೆ ದೆಹಲಿಗೆ ಹಾರಿದ ಸಿಎಂ & ಡಿಸಿಎಂ..! ತರಾತುರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ..?! 

by Chetan
July 25, 2025
ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು
Top Story

ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು

by ನಾ ದಿವಾಕರ
July 25, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

July 25, 2025
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

July 25, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!