• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭೂಸ್ವಾಧೀನ ರದ್ದಾಗಿದೆ, ಯೋಜನೆ ರದ್ದಾಗಿಲ್ಲ!

ಪ್ರತಿಧ್ವನಿ by ಪ್ರತಿಧ್ವನಿ
July 15, 2025
in Top Story, ಕರ್ನಾಟಕ, ರಾಜಕೀಯ, ವಾಣಿಜ್ಯ
0
ಭೂಸ್ವಾಧೀನ ರದ್ದಾಗಿದೆ, ಯೋಜನೆ ರದ್ದಾಗಿಲ್ಲ!
Share on WhatsAppShare on FacebookShare on Telegram

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತ ಸುಮಾರು ಒಂದೂವರೆ ಸಾವಿರ ಎಕರೆಯ ಭೂಸ್ವಾಧೀನದ ಆದೇಶವನ್ನು ರದ್ದುಪಡಿಸುವ ಸ್ವಾಗತಾರ್ಹ ತೀರ್ಮಾನವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಎಷ್ಟೇ ಎಡರುತೊಡರು ಬಂದರೂ ಕಳೆದ 3+ ವರ್ಷಗಳಿಂದ ನಿರಂತರವಾಗಿ ಧರಣಿ/ಪ್ರತಿಭಟನೆ ಮಾಡಿದ ಅಲ್ಲಿಯ ರೈತರ ಹೋರಾಟ ಮನೋಭಾವ ಮತ್ತು ಬದ್ಧತೆ ಪ್ರಶಂಸನೀಯ. ಹಲವು ಸಂಘಟನೆಗಳು ಮತ್ತು ವ್ಯಕ್ತಿಗಳೂ ಈ ಹೋರಾಟಕ್ಕೆ ಪ್ರಾಮಾಣಿಕ ಬೆಂಬಲ ನೀಡಿದ್ದರು ಮತ್ತು ಇತ್ತೀಚಿನ ಹೋರಾಟಕ್ಕೆ ಹಲವು ಶಕ್ತಿ ಮತ್ತು ಆಯಾಮಗಳು ಕೂಡಿಕೊಂಡು ಸರ್ಕಾರ ಈ ತೀರ್ಮಾನ ಘೋಷಿಸುವಂತೆ ಆಗಿದೆ. ಪ್ರಾಮಾಣಿಕವಾಗಿ ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳು. (ಈ ಹೋರಾಟದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಕೆಲವರ ಕುರಿತ ನನ್ನ ಟೀಕೆಗಳನ್ನು ನಾನು ಈ ಹಿಂದೆಯೇ ದಾಖಲಿಸಿದ್ದೇನೆ. ಈಗ ಮತ್ತೊಮ್ಮೆ ಅದರ ಪ್ರಸ್ತಾಪ ಬೇಡ ಎಂದು ಅಲ್ಲಿಗೆ ಬಿಡುತ್ತಿದ್ದೇನೆ.)

ADVERTISEMENT
PODCASTS:  ರೈತರ ಸಮಸ್ಯೆ ಏನು ಅಂತ ಯಾವತ್ತಾದ್ರು ಕೇಳಿದ್ದೀರಾ - ನಜ್ಮಾ..? #pratidhvani #farmer #pmmodi #bjp

ಆದರೆ ನಾನು ಇಲ್ಲಿ ಮುಖ್ಯವಾಗಿ ಹೇಳಬಯಸಿದ್ದು ಇದಲ್ಲ. ಭೂಸ್ವಾಧೀನದ ಅಂತಿಮ ಪ್ರಕ್ರಿಯೆಗಳು ಮುಗಿದಿದ್ದರೂ ಸರ್ಕಾರ ಮನಸ್ಸು ಮಾಡಿದರೆ ಎಲ್ಲಾ ಕಾನೂನು ತೊಡಕುಗಳನ್ನು ಮೀರಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂದು ಇವತ್ತಿನ ಘೋಷಣೆಯಿಂದ ಗೊತ್ತಾಗಿದೆ. ರಾಜಕೀಯ ಇಚ್ಛಾಶಕ್ತಿ ಇದ್ದರೆ ತನ್ನದೇ ನಿರ್ಧಾರಗಳನ್ನು ರದ್ದು ಪಡಿಸಲು ಸರ್ಕಾರಕ್ಕೆ ಅಡೆತಡೆಗಳು ಇಲ್ಲವೇ ಇಲ್ಲ ಅಥವ ಬಹಳ ಕಡಿಮೆ. ಅದೇ ರೀತಿ, ತಾನೇ ರದ್ದು ಪಡಿಸಿದ ಆದೇಶಗಳನ್ನು ಕಾನೂನಿನ ಇನ್ಯಾವುದೋ ತೊಡಕು ಬಳಸಿ ಅದು ಆಗದೇ ಇರುವ ಹಾಗೆ ನೋಡಿಕೊಳ್ಳುವುದೂ ಸರ್ಕಾರಕ್ಕೆ ಸಾಧ್ಯ. ಇಲ್ಲಿ ಜನರ ಮುಂದೆ ಮೆಚ್ಚುಗೆ ಪಡೆಯಲು ಒಂದು ತೀರ್ಮಾನ, ಮತ್ತೆ ನ್ಯಾಯಾಲಯ ಅಥವ ಮತ್ಯಾವುದೋ ತಾಂತ್ರಿಕ ಕಾರಣಗಳನ್ನು ಒಡ್ಡಿ ಮತ್ತೆ ಜನರಿಂದ ಅನುಕಂಪ ಗಿಟ್ಟಿಸಿಕೊಂಡು ಪಟ್ಟಭದ್ರರ ಹಿತಾಸಕ್ತಿ ರಕ್ಷಿಸುವ ಪ್ರಚ್ಛನ್ನ ಹುನ್ನಾರ. ಇದು ಭ್ರಷ್ಟರ ಪುಸ್ತಕದಲ್ಲಿ ದಂಡಿಯಾಗಿ ಸಿಗುವ ಹಳೇ ಟ್ರಿಕ್.

ತಾವಾಗಿಯೇ ಜಮೀನು ನೀಡಬಯಸುವ ರೈತರಿಂದ ಸದರಿ ಯೋಜನೆಗೆ ಭೂಮಿ ಖರೀದಿಸುವ ತೀರ್ಮಾನವನ್ನು ಇಂದಿನ ಸಭೆಯಲ್ಲಿ ಪ್ರಕಟಿಸಿರುವುದರಲ್ಲಿಯೇ ಮುಂದಿನ ಕೆಲವು ಆಗುಹೋಗುಗಳನ್ನು ಊಹಿಸಬಹುದು. ಈ ಪ್ರದೇಶದಲ್ಲಿ ಸದರಿ ಪ್ರಸ್ತಾವಿತ ಯೋಜನೆಯನ್ನೇ ಕೈಬಿಟ್ಟಿದ್ದಿದ್ದರೆ ಸರ್ಕಾರದ ಚಿತ್ತಶುದ್ಧಿಯನ್ನು ಪ್ರಶಂಸಿಸಬಹುದಿತ್ತು. ಈಗಾಗಲೇ ಪೇಮೆಂಟ್ ಪಡೆದಿರುವವರು ಅಷ್ಟು ಸುಲಭವಾಗಿ ಹಿಂದೆ ಸರಿಯುವುದಿಲ್ಲ. ಇಬ್ಬರು ಸಚಿವರು ಹಠಕ್ಕೆ ಬಿದ್ದಿರುವುದನ್ನು ಗಮನಿಸಿದರೆ ಸಾಕು ಇದು ಇಲ್ಲಿಗೇ ನಿಲ್ಲುವುದಿಲ್ಲ ಎಂದು ಸುಲಭವಾಗಿ ಭಾವಿಸಬಹುದು. ಅಂತಹ ಸಂದರ್ಭದಲ್ಲಿ #ಕಾಂಬುಜೀ(ಕಾಂಗ್ರೆಸ್ ಬುದ್ಧಿಜೀವಿ)ಗಳ ಮತ್ತು #ಕಾಂಪಹೋ(ಕಾಂಗ್ರೆಸ್ ಪರ ಹೋರಾಟಗಾರ)ರ ನಿಲುವು ಏನಿರುತ್ತದೆ ಎನ್ನುವುದನ್ನು ಆಗ ವಿಶ್ಲೇಷಿಸೋಣ.

ಮುಂದೆ ಏನಾಗುತ್ತದೋ ಗೊತ್ತಿಲ್ಲ. ಒಳ್ಳೆಯದಾಗಲಿ ಎಂದು ಆಶಿಸೋಣ.

ಮತ್ತೊಮ್ಮೆ, ಸದ್ಯದ ಸಂದರ್ಭದಲ್ಲಿ ಇಷ್ಟು ಮಾತ್ರದ ಗೆಲುವನ್ನು ಸಾಧಿಸಿದ ಮತ್ತು ಸಾಧಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು.

Tags: BJPbusinessmen son in rave partyccb raid on jade villa rave partyCongress PartyDevanahallidevanahalli rave partydevanahallyjade 735 villa rave partyjade villa rave partyjade villa rave party case updatesjade villa rave party latest newsk annamalai dmk fileskrs partypoliticians son in rave partyrave party accused ankit jainrave party bustedrave party busted at jade 735 villarave party in jade 735 villars praveen kumar songsಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಶೀಘ್ರವೇ ಐದು ಪಾಲಿಕೆ ರಚನೆ ಡಿಸಿಎಂ ಡಿ.ಕೆ.ಶಿವಕುಮಾರ್

Next Post

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಕಾರ್ – ನೂತನ ಶೋ ರೂಮ್ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ 

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಕಾರ್ – ನೂತನ ಶೋ ರೂಮ್ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ 

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಕಾರ್ - ನೂತನ ಶೋ ರೂಮ್ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada