ಬೆಂಗಳೂರಿನ ದೇವಹನಲ್ಲಿ ಸಮೀಪ ಡಿಫೆನ್ಸ್ ಹಾಗೂ ಸ್ಪೇಸ್ ಗೆ ಸಂಬಂಧಪ್ಪಟಂತೆ ಕೈಗಾರಿಕೆ ಅಭಿವೃದ್ಧಿಪಡಿಸಲು 13 ಗ್ರಾಮಗಳ 1,777 ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ 2022 ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿತ್ತು. ಆದ್ರೆ ರೈತರ ತೀವ್ರ ಹೋರಾಟದ ನಂತರ ಇದೀಗ ಈ ಅಧಿಸೂಚನೆಯನ್ನು ರದ್ದುಗೊಳಿಸಲಾಗಿದೆ.

ಇಂದು ಈ ಬಗ್ಗೆ ರೈತರು, ರೈತಪರ ಹೋರಾಟಗಾರರ ಜೊತೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದು, ಸಭೆ ಬಳಿಕ ಮಾತನಾಡಿದ ಸಿಎಂ, ರೈತರ ಹೋರಾಟಕ್ಕೆ ಸ್ಪಂದಿಸಿ ಈ ಭೂಸ್ವಾದೀನ ಪ್ರಕ್ರಿಯೆ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದ್ರೆ ಒಂದುವೇಳೆ ರೈತರು ತಾವಾಗಿಯೇ ಜಾಮೇನುಗಳನ್ನು ನೀಡಲು ಬಯಸಿದಲ್ಲಿ ಆಗ ನಾನು ಒಪ್ಪಂದದ ಮೇರೆಗೆ ಜಮೀನು ಖರೀದಿಸಿ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ರೈತರ 1200 ದಿನಗಳ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಂತಾಗಿದ್ದು, ಅನ್ನದಾತರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.






