ಬೈಂದೂರು ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಯುವ ಕಾರ್ಯಕರ್ತರ ಶ್ರಮ ಸಾಕಷ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಹೇಳಿದರು.
ಉಡುಪಿಯ ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷ ಬಡವರ ಪಕ್ಷ. ಸದಾ ಬಡವರ ಬಗ್ಗೆ ಯೋಚಿಸುವ ಪಕ್ಷ ಎಂದು ಹೇಳಿದರು.

ದೇಶಕ್ಕಾಗಿ ಗಾಂಧಿ ಕುಟುಂಬದ ಕೊಡುಗೆ ಅಪಾರ. ಗಾಂಧಿ ಕುಟುಂಬದಿಂದ ಪ್ರಧಾನಿಯಾದ ಮೂವರಲ್ಲಿ ಇಬ್ಬರು ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಮನಸ್ಸು ಮಾಡಿದ್ದರೆ 2004ರಲ್ಲೆ ಅಧಿಕಾರ ಹಿಡಿಯಬಹುದಿತ್ತು. ಜವಹರಲಾಲ್ ನೆಹರು (Jawaharlal Nehru) ಅವರು ಅಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್.
ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು, ನಾನು ಕೂಡ ಬೂತ್ ಏಜೆಂಟ್, ಕೌಟಿಂಗ್ ಏಜೆಂಟ್ ಆಗಿ ಕೆಲಸ ಮಾಡಿರುವೆ. ಪಕ್ಷಕ್ಕಾಗಿ ಕೆಲಸ ಮಾಡಿದ್ದನ್ನು ಗುರುತಿಸಿ ಟಿಕೆಟ್ ನೀಡಲಾಯಿತು. ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬಳೇ ಮಹಿಳಾ ಮಂತ್ರಿಯಾಗಿರುವೆ. ನನಗೆ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

ಮಾಜಿ ಶಾಸಕ ಗೋಪಾಲ್ ಪೂಜಾರಿ ಅವರು ಕಳೆದ ಚುನಾವಣೆಯಲ್ಲಿ ಸೋತರೂ ಕಾರ್ಯಕರ್ತರ, ಕ್ಷೇತ್ರದ ಒಡನಾಟ ಬಿಟ್ಟಿಲ್ಲ. ಜನರ ಕಷ್ಟ ಸುಖದ ಬಗ್ಗೆ ಸದಾ ಯೋಚನೆ ಮಾಡುತ್ತಾರೆ ಎಂದರು.
ನಿಕಟ ಪೂರ್ವ ಅಧ್ಯಕ್ಷ ಶೇಖರ್ ಪೂಜಾರಿ (President Shekar Poojari) ಅವರು ನೂತನ ಅಧ್ಯಕ್ಷರಾದ ಭರತ್ ದೇವಾಡಿಗ (Bharath Devadiga) ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ(Manjunath Bandari), ಮಾಜಿ ಶಾಸಕ ಗೋಪಾಲ್ ಪೂಜಾರಿ(Gopal Poojari), ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಅಶೋಕ್ ಕೊಡವೂರು(Ashok Kodavuru) , ಉದಯ್ ಕುಮಾರ್ ಶೆಟ್ಟಿ(Uday Kumar Shetty), ಮುಖಂಡರಾದ ರಾಜು ಪೂಜಾರಿ(Raju Poojari), ಕಿಶನ್ ಹೆಗ್ಡೆ(Kishan Hegde), ರಘುರಾಮ್ ಶೆಟ್ಟಿ(Raghuram Shetty), ಅರವಿಂದ್ ಪೂಜಾರಿ (Aravind Poojari) ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.









