ಭಾರತವನ್ನು (India) ಕೆಣಕಿ ಪಾಕಿಸ್ತಾನದ (Pakistan) ಪರಿಸ್ಥಿತಿ ಗರಗಸಕ್ಕೆ ಸಿಕ್ಕಂತಾಗಿದೆ. ಒಂದಡೆ ಪಾಕಿಸ್ತಾನದ ಮೇಲೆ ಭಾರತ ಬೆಚ್ಚಿ ಬೀಳಿಸೋ ದಾಳಿ ಮಾಡಿದ್ರೆ ಸುಧಾರಿಸಿಕೊಳ್ಳಲು ಸಾಧ್ಯವಾಗದೆ ತಿಣುಕಾಡುತ್ತಿದೆ.ಈ ಮಧ್ಯೆ ಅತ್ತ ಬಲೂಚಿಸ್ತಾನ ಲಿಬರೇಷನ್ ಆರ್ಮಿ (BLA) ಕೂಡ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಮುಂದಾಗಿದೆ.

ಹೌದು ಬಲೂಚಿಸ್ತಾನದ ಹೋರಾಟಗಾರರು ನಿನ್ನೆ ಕ್ವೆಟ್ಟಾ ನಗರದ ಮೇಲೆ ದಾಳಿ ನಡೆಸಿ,ಸಂಪೂರ್ಣ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬಲೂಚಿಸ್ತಾನದಲ್ಲಿ ಕ್ವೆಟ್ಟಾದಲ್ಲಿರುವ ಪಾಕಿಸ್ತಾನಿ ಪಡೆಗಳ ಫ್ರಾಂಟಿಯರ್ ಕಾರ್ಪ್ಸ್ ಪ್ರಧಾನ ಕಚೇರಿಯ ಮೇಲೆ ಬಲೂಚಿಸ್ತಾನದ ಹೋರಾಟಗಾರರು ದಾಳಿ ಮಾಡಿದ್ದಾರೆ.

ಈ ದಾಳಿಯ ಬಳಿಕ ಈ ಭಾಗದಲ್ಲಿ ದೊಡ್ಡ ಉದ್ವಿಗ್ನತೆ ಉಂಟಾಗಿದೆ. ಬಲ್ಲೋಚಿಸ್ತಾನ ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಸ್ವತಂತ್ರ ಪ್ರದೇಶವಾಗುವ ಹೋರಾಟ ಮಾಡುತ್ತಿದ್ದು,ಹೀಗಾಗಿ ಬಲೂಚಿಗಳು ಪಾಕಿಸ್ತಾನಿ ಸೇನೆಯನ್ನು ಹೊರದಬ್ಬುವ ಮೂಲಕ ಕ್ವೆಟ್ಟಾವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.
ಇನ್ನು ಕ್ವೆಟ್ಟಾದ ಪಾಕಿಸ್ತಾನಿ ಪಡೆಗಳ ಕ್ಯಾಪ್ಟನ್ ಸಫರ್ ಖಾನ್ ಚೆಕ್ ಪೋಸ್ಟ್ ಟಾರ್ಗೆಟ್ ಮಾಡಲಾಗಿದ್ದು ಎರಡು ಸ್ಫೋಟಗಳು ಸಂಭವಿಸಿವೆ. ಇದರ ಜೊತೆಗೆ, ಕ್ವೆಟ್ಟಾದ ಕಿರಣಿ ರಸ್ತೆಯ ಹಜಾರಾ ಪಟ್ಟಣದಲ್ಲಿರುವ ಪಾಕಿಸ್ತಾನಿ ಪಡೆಗಳ ಪೋಸ್ಟ್ ಅನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಗುರಿಯಾಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಹಲವಾರು ಸ್ಫೋಟಗಳು ಮತ್ತು ಗುಂಡಿನ ದಾಳಿ ನಡೆದಿದೆ.