2025 ರ ಐಪಿಎಲ್ (Indian Premier League ) ಯಶ್ವಸ್ವಿಯಾಗಿ ನಡೆಯುತಿದ್ದು, ಇನ್ನೇನು ಪ್ಲೇ ಆಫ್ (Playoff) ಹಂತವನ್ನು ತಲುಪಿದೆ. ಆದ್ರೆ ಇದೀಗ ಆಪರೇಷನ್ ಸಿಂಧೂರದ (Operation sindhoor) ಹಿನ್ನಲೆ ಐಪಿಎಲ್ ಸರಣಿಯ ಮೇಲೆ ಯುದ್ಧದ ಕರಿನೆರಳು ಆವರಿಸಿದೆ.

ಹೌದು ಭಾರತ ಮತ್ತು ಪಾಕಿಸ್ತಾನದ (India v/s Pakistan) ನಡುವೆ ಕ್ಷಣ ಕ್ಷಣಕ್ಕೂ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ನಡುವೆ ನಿನ್ನೆಯ ಪಂದ್ಯವನ್ನ ಕೂಡ ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ. ಬ್ಲಾಕ್ ಔಟ್ (Blackout) ಘೋಷಿಸಿದ ಹಿನ್ನಲೆ ಪಂದ್ಯವನ್ನು ನಿಲ್ಲಿಸಲಾಗಿದೆ.
ಇನ್ನು ಲಕ್ಕೋದ ಎಕಾನಾ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers),ಲಕ್ಕೋ ಸೂಪರ್ ಜೈಂಟ್ಸ್ ತಂಡವನ್ನ ಎದುರಿಸಬೇಕಿದೆ. ಆದ್ರೆ ಸದ್ಯದ ಬೆಳವಣಿಗೆ ನೋಡಿದ್ರೆ ಈ ಪಂದ್ಯ ನಡೆಯುವುದು ಕೂಡ ಅನುಮಾನ ಎನ್ನಲಾಗುತ್ತಿದೆ.

ಹೀಗಾಗಿ ಈ ಯುದ್ಧದ ಭೀತಿ ನಡುವೆ ಈ ಬಾರಿಯ ಐಪಿಎಲ್ 2025ರ ಪಂದ್ಯಾವಳಿಯನ್ನು ಮುಂದುವರೆಸಬೇಕೆ ಅಥವಾ ಸ್ಥಗಿತಗೊಳಿಸಬೇಕೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.ಆಟಗಾರರು, ಪ್ರೇಕ್ಷಕರ ಭದ್ರತೆ ವಿಚಾರವನ್ನ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಯಾವ ಕ್ರಮ ಕೈಗೊಳ್ಳುತ್ತೋ ಕಾದು ನೋಡ ಬೇಕಿದೆ.