• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜನಿವಾರ ಹಾಕಿ ಪರೀಕ್ಷೆ ಬರೆಯುವಂತಿಲ್ಲ..?! ವಿದ್ಯಾರ್ಥಿ ಮೇಲೆ ಅಧಿಕಾರಿಗಳ ದರ್ಪ ಸರಿಯಲ್ಲ ! ಸರ್ಕಾರದ ನಡೆಗೆ ವಿಜಯೇಂದ್ರ ಕೆಂಡ ! 

Chetan by Chetan
April 18, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಜನಿವಾರ ಹಾಕಿ ಪರೀಕ್ಷೆ ಬರೆಯುವಂತಿಲ್ಲ..?! ವಿದ್ಯಾರ್ಥಿ ಮೇಲೆ ಅಧಿಕಾರಿಗಳ ದರ್ಪ ಸರಿಯಲ್ಲ ! ಸರ್ಕಾರದ ನಡೆಗೆ ವಿಜಯೇಂದ್ರ ಕೆಂಡ ! 
Share on WhatsAppShare on FacebookShare on Telegram

ಬೀದರ್ ನಲ್ಲಿ (Bidar) ಜನಿವಾರ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿಗಯೊಬ್ಬರಿಗೆ ಸಿಇಟಿ ಪರೀಕ್ಷೆಗೆ (CET Exams) ಅವಕಾಶ ಕೊಡದ ಘಟನೆ,ಜೊತೆಗೆ ಶಿವಮೊಗ್ಗದಲ್ಲಿ (Shimoga) ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ್ಪ ಮೆರೆದ ಘಟನೆಗೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ .ವೈ ವಿಜಯೇಂದ್ರ (BY Vijayendra) ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

 ಈ ರೀತಿಯ ದರ್ಪದ ವರ್ತನೆಯಿಂದ ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿದ ಅಧಿಕಾರಿ,ಸಿಬ್ಬಂದಿಗಳ ವರ್ತನೆ ಅತ್ಯಂತ ಹೇಯವಾದದ್ದು. ಈ ರೀತಿಯ ಬೌದ್ಧಿಕ ವಿಕೃತಿ  ಹಾಗೂ ಮನುಷ್ಯತ್ವ ಇಲ್ಲದ ನಡೆ ಇನ್ನೊಂದಿರಲಾರದು, ಇದು ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಾಲ್ಯದಿಂದಲೂ ಕನಸು ಕಟ್ಟಿಕೊಂಡು ಭವಿಷ್ಯದ ತಿರುವಿನಲ್ಲಿ ಆಘಾತ ಎದುರಿಸಿ ವಿದ್ಯಾರ್ಥಿಯೊಬ್ಬನ ಇಂಜಿನಿಯರಿಂಗ್ ಪದವಿಯ ಕನಸಿನ ಮೇಲೆ ಅಟ್ಟಹಾಸಗೈದ ಸಿಇಟಿ ಪರೀಕ್ಷಾ ಸಿಬ್ಬಂದಿಯ ವರ್ತನೆ ಅತ್ಯಂತ ಖಂಡನೀಯ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ. 

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಪರೀಕ್ಷೆ ಹಾಗೂ ಸಂದರ್ಶನ ಎದುರಿಸುವ ವೇಳೆ ಕೆಲ ವಸ್ತುಗಳನ್ನು ಕೊಂಡೊಯ್ಯುವುದು ನಿಷಿದ್ಧ, ಆದರೆ ಜನಿವಾರ ತೊಡುವುದು ಒಂದು ಕುಟುಂಬ ಹಾಗೂ ಭಾರತೀಯ ಸಮುದಾಯದ ಆಚಾರ ವಿಚಾರಕ್ಕೆ ಸಂಬಂಧಿಸಿದ್ದು, ವಿದ್ಯಾರ್ಥಿ ಬರೆಯುವ ಪರೀಕ್ಷೆಯ ಮೇಲೆ ಜನಿವಾರ ಏನು ಪ್ರಭಾವ ಅಥವಾ ಪರಿಣಾಮ ಬೀರುತ್ತದೆ? ಎಂಬುದಕ್ಕೆ ಸಂಬಂಧಿಸಿದ ಸಚಿವರು ಹಾಗೂ ಸರ್ಕಾರ ಉತ್ತರಿಸಬೇಕು. ಶಿಕ್ಷಣವೆಂದರೆ ಸಂಸ್ಕಾರ, ಅದು ಇಲ್ಲದವರು ಶಿಕ್ಷಣ ಖಾತೆಯನ್ನು ನಿರ್ವಹಿಸಿದರೆ ಏನು ಪರಿಣಾಮ ಬೀರಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 

ಮುಖ್ಯಮಂತ್ರಿಗಳು ಈ ಸಂಬಂಧವಾಗಿ ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿ ಹಿಂದೂ ಸಂಪ್ರದಾಯದ ಆಚಾರ ವಿಚಾರವನ್ನು ಅಪಮಾನಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಲಿ. ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳಿಗೆ ಮಾರ್ಗದರ್ಶನ ತೋರುವ ಸಭ್ಯ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಿರುವ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ ಎಂದು ಬಿ.ವಿ ವಿಜಯೇಂದ್ರ ಆಗ್ರಹಿಸಿದ್ದಾರೆ. 

Tags: ಕಾಂಗ್ರೆಸ್ ಸರ್ಕಾರಜನಿವಾರಜನಿವಾರ ಹಾಕುವಂತಿಲ್ಲಬಿ ವೈ ವಿಜಯೇಂದ್ರವಿದ್ಯಾರ್ಥಿ ಜನಿವಾರಸಿಇಟಿ ಪರೀಕ್ಷೆ
Previous Post

10 ವರ್ಷದ ಹಿಂದಿನ ಜಾತಿಗಣತಿ ವರದಿ ಈಗ ಜಾರಿ ಮಾಡುವುದು ನ್ಯಾಯೋಚಿತವಲ್ಲ : ಸಿದ್ದಲಿಂಗ ಶ್ರೀಗಳು 

Next Post

CET ಪರೀಕ್ಷೆಯಲ್ಲಿ ಜನಿವಾರ ಗಲಾಟೆ.. ಗೇಟ್​ ಪಾಸ್​..! ಆಕ್ರೋಶ

Related Posts

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”
Top Story

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

by ಪ್ರತಿಧ್ವನಿ
May 16, 2026
0

ಅಮರಾವತಿ : ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮೂರನೇ ಮಗುವಿನ ಜನನಕ್ಕೆ ₹30 ಸಾವಿರ ಹಾಗೂ...

Read moreDetails
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

May 16, 2026
Next Post
CET ಪರೀಕ್ಷೆಯಲ್ಲಿ ಜನಿವಾರ ಗಲಾಟೆ.. ಗೇಟ್​ ಪಾಸ್​..! ಆಕ್ರೋಶ

CET ಪರೀಕ್ಷೆಯಲ್ಲಿ ಜನಿವಾರ ಗಲಾಟೆ.. ಗೇಟ್​ ಪಾಸ್​..! ಆಕ್ರೋಶ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada