ಜಾತಿ ಜನಗಣತಿ ವರದಿಗೆ ಕಾಂಗ್ರೆಸ್ನಲ್ಲೇ ಅಪಸ್ವರ ಹೆಚ್ಚುತ್ತಿದೆ. ಗೊಲ್ಲ ಸಮುದಾಯ ವಿಚಾರವಾಗಿ ಆಕ್ಷೇಪ ಇದೆ ಎಂದು ಪರಿಷತ್ ಸದಸ್ಯ ನಾಗರಾಜ್ ಯಾದವ್ ಹೇಳಿದ್ದಾರೆ. ನಾವು 25 ಲಕ್ಷಕ್ಕೂ ಹೆಚ್ಚು ಜನ ಇದ್ದೇವೆ. ಆದರೆ ವರದಿಯಲ್ಲಿ 10 ಲಕ್ಷ ಮಾತ್ರ ತೋರಿಸಿದ್ದಾರೆ. ಇದನ್ನ ಮೊದಲು ಸರಿ ಮಾಡಬೇಕಿದೆ. 147 ಸಮುದಾಯ ಕೆಟಗರಿ 1ರಲ್ಲಿ ಸೇರಿಸಲಾಗಿದೆ. ಗೊಲ್ಲರಲ್ಲಿ 28 ಉಪ ಜಾತಿ ಇದೆ. ಅದರಲ್ಲಿ ಯಾದವ ಸಮುದಾಯ ಒಂದು. ಆದರೆ ಯಾದವ ಸಮುದಾಯವನ್ನ 1ಬಿ ಗೆ ಹಾಕಿದ್ದಾರೆ. ಹೀಗಾಗಿ ನಾನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಜನಸಂಖ್ಯೆ ಅನುಗುಣವಾಗಿ ಕೆಟಗರಿ ನೋಡಬೇಕು, ತೆಲಂಗಾಣದಂತೆ ಇಲ್ಲೂ ಮೀಸಲಾತಿ ವಿಸ್ತರಣೆ ಮಾಡಬೇಕು. ಕೆಟಗರಿ-1 ಗೆ ಕ್ರೀಮಿಲೇಯರ್ ಹಾಕಬೇಕು ಅಂತ ಶಿಫಾರಸ್ಸು ಮಾಡಿದ್ದು ಯಾವ ನ್ಯಾಯ..? ನಮ್ಮ ಸಮುದಾಯ ಹಿಂದುಳಿದಿದೆ. ಅದರೂ ಕ್ರೀಮಿಲೇಯರ್ ಹಾಕಿದ್ದಾರೆ ಇದು ಸರಿಯಲ್ಲ ಎಂದಿದ್ದಾರೆ.

ಜಾತಿ ಗಣತಿ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಜಾತಿ ಗಣತಿ ವಿಚಾರ ಕ್ಯಾಬಿನೆಟ್ ಮೀಟಿಂಗ್ ಚರ್ಚೆ ಆಗಿದೆ. ಇದು ಪಬ್ಲಿಕ್ ದಾಖಲೆ ಆಗಿದೆ. ಲೋಪದೋಷಗಳು ಇದ್ರೆ ಸರಿ ಮಾಡಿ ಅಂತ ಹೇಳೋಣ, ನಮ್ನ ರೆಡ್ಡಿ ಸಮಾಜವನ್ನು ಮೀಟಿಂಗ್ ಕರೆದಿದ್ದೇವೆ. 7.5 ಲಕ್ಷ ರೆಡ್ಡಿ ಸಮಾಜ ಇದ್ದಾರೆ ಎಂದು ತೋರಿಸಿದ್ದಾರೆ. ನಾನು ಸಹ ಶನಿವಾರ ರೆಡ್ಡಿ ಸಮುದಾಯದ ಸಭೆ ಕರೆದಿದ್ದೇವೆ. ಜಿಲ್ಲಾಧ್ಯಕ್ಷರು, ಮುಖಂಡರ ಸಭೆ ಕರೆದಿದ್ದೇವೆ. ನಾವು ರೆಡ್ಡಿ ಸಮುದಾಯ ಸರ್ವೆ ಮಾಡುತ್ತೇವೆ. ಜನಗಣತಿಯಲ್ಲಿ ಕಡಿಮೆ ಆಗಿದ್ದರೆ ಸರಿಪಡಿಸಿ ನೀಡುತ್ತೇವೆ. ಈ ವರದಿ ಅಂತಿಮವಲ್ಲ ಎಂದಿದ್ದಾರೆ. ಹೇಗಿದ್ದರೂ 90 ದಿನಗಳ ಕಾಲ ಅವಕಾಶ ಇದೆ. ನಮ್ಮ ಅನುಮಾನಗಳು ಏನಿದ್ರೂ ಕ್ಲಿಯರ್ ಮಾಡಿಕೊಳ್ಳಬಹುದು. ಸಮಾಜದ ನಿಲುವು ಕೂಡ ಜನಪ್ರತಿನಿಧಿಗಳ ನಿಲುವು ಆಗಿದೆ. ಅದರಲ್ಲಿ ಏನಾದರೂ ಲೋಪ ದೋಷಗಳು ಇದ್ದರೆ ಸರಿಪಡಿಸುವ ಕೆಲಸ ಮಾಡಬಹುದು ಎಂದಿದ್ದಾರೆ.
ಜಾತಿ ಜನಗಣತೆಯ ಬಗ್ಗೆ ಮಹಾಸಭಾದವರು ಸೂಕ್ತ ತೀರ್ಮಾನ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 28, 2024 ರಂದು ಸಭೆ ಮಾಡಿ ರಾಷ್ಟ್ರೀಯ ಅಧ್ಯಕ್ಷರಾದ ಶಾಮಮನೂರು ಅಧ್ಯಕ್ಷತೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೆವೆ. ಯಾವುದೇ ಕಾರಣಕ್ಕೂ ಜಾತಿ ಜನಗಣತಿ ಒಪ್ಪೋದು ಬೇಡ ಅಂತ ತೀರ್ಮಾನ ಮಾಡಿದ್ದೇವೆ ಎಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಹೇಳಿದ್ದಾರೆ. ಅವರ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಜ್ಯದ ಎಲ್ಲಾ ಜನರಿಗೆ ಅದರಿಂದ ಒಳ್ಳೆಯದು ಆಗಲಿದೆ. ಚಿನ್ನಪ್ಪ ರೆಡ್ಡಿ ಆಯೋಗ ಮತ್ತು ಹಾವನೂರು ಆಯೋಗಕ್ಕೆ ಹೋಲಿಸಿದರೆ ನಮ್ಮ ಜನ ಸಂಖ್ಯೆ ಕಡಿಮೆಯಾಗಿದೆ.
ಚಿನ್ನಪ್ಪ ರೆಡ್ಡಿ ಆಯೋಗದಲ್ಲಿ ಶೇಕಡ 17.34 ಇತ್ತು. ಈಗ ಶೇಕಡ 11.09 ಆಗಿದೆ. ಅಂದರೆ ಶೇಕಡ 6.32 ರಷ್ಟು ಕಡಿಮೆ ಆಗಿದೆ. ನಮ್ಮ ಸಮಾಜದ ಸಚಿವರು ಮುಖ್ಯಮಂತ್ರಿ ಗಮನಕ್ಕೆ ತರ್ತಾರೆ. ಈ ವರದಿ ಜಾರಿಯಾದ್ರೆ ಬರಿ ಲಿಂಗಾಯತರಿಗೆ ತೊಂದರೆ ಆಗಲ್ಲ. ಅನೇಕ ಸಮಾಜದವರಿಗೆ ತೊಂದರೆ ಆಗುತ್ತದೆ. ಕಳೆದ ಭಾರಿ 3B ಯಲ್ಲಿ ನಮ್ಮ ಸಮಾಜ 75 ಲಕ್ಷ ಇತ್ತು, ಈ ಸಲ 66 ಲಕ್ಷಕ್ಕೆ ತಂದಿದ್ದಾರೆ. ಕ್ಯಾಬಿನೆಟ್ನಲ್ಲಿ ಏನು ಆಗುತ್ತೆ ನೋಡಿಕೊಂಡು ಶಾಮನೂರು ಶಿವಶಂಕರಪ್ಪ ಸಭೆ ಕರೆಯುತ್ತಾರೆ ಎಂದಿದ್ದಾರೆ ಶಂಕರ್ ಬಿದರಿ.





