• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಗಣಿ ಕಿಕ್​ಬ್ಯಾಕ್​ ಆರೋಪ.. ಹೈಕಮಾಂಡ್​ಗೆ ಸಿಎಂ ಸಿದ್ದರಾಮಯ್ಯ ದೂರು

ಕೃಷ್ಣ ಮಣಿ by ಕೃಷ್ಣ ಮಣಿ
April 12, 2025
in ಕರ್ನಾಟಕ, ರಾಜಕೀಯ
0
ಗಣಿ ಕಿಕ್​ಬ್ಯಾಕ್​ ಆರೋಪ.. ಹೈಕಮಾಂಡ್​ಗೆ ಸಿಎಂ ಸಿದ್ದರಾಮಯ್ಯ ದೂರು
Share on WhatsAppShare on FacebookShare on Telegram

ಮುಡಾ ಸೈಟಿನ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯರಿಗೆ ಈಗ ಗಣಿ ಕಿಕ್​ ಬ್ಯಾಕ್​ ಹೊಸ ಸಂಕಷ್ಟ ತಂದೊಡ್ಡಿದೆ. 8 ಗಣಿ ಕಂಪನಿಗಳ ನವೀಕರಣದಿಂದ ಸುಮಾರು ₹500 ಕೋಟಿ ರೂಪಾಯಿ ಕಿಕ್​ಬ್ಯಾಕ್ ಪಡೆದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರಿಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಗೌಡ ಎಂಬುವರು ರಾಜ್ಯಪಾಲರಿಗೆ ಪತ್ರ ಬರೆದು, ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿ ಅಂತ ಮನವಿ ಮಾಡಿದ್ದಾರೆ.

ADVERTISEMENT

ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆ ಮತ್ತೊಂದು ಚರ್ಚೆ ಹುಟ್ಟುಹಾಕಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ 8 ಕಂಪನಿಗಳ ಗಣಿ ಗುತ್ತಿಗೆಯಲ್ಲಿ ಕಿಕ್​ಬ್ಯಾಕ್​​ ಪಡೆದ ಆರೋಪ ಸುಳ್ಳು, ಕಾನೂನು ಬದ್ಧವಾಗಿ ಷರತ್ತು ಬದ್ಧ ಅನುಮೋದನೆ ಕೊಟ್ಟಿದ್ದೀವಿ ಎಂದು ಸ್ಪಷ್ಟನೆ ಕೊಟ್ಟಿದ್ದು, ರಾತ್ರೋರಾತ್ರಿ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಅವರನ್ನ ಭೇಟಿ ಮಾಡಿ, ಚರ್ಚೆ ಮಾಡಿದ್ದಾರೆ. ಕಿಕ್​ಬ್ಯಾಕ್​​ ಆರೋಪದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ವಿವರಣೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅಂತಹ ಭ್ರಷ್ಟರು ಇಡೀ ದೇಶದಲ್ಲೇ ಇಲ್ಲ #pratidhvani

2015ರಲ್ಲಿ ರಾಜ್ಯದ 8 ಗಣಿ ಗುತ್ತಿಗೆಗಳ ನವೀಕರಣ ಆಗಿದೆ.. ಹರಾಜು ಹಾಕುವ ಬದಲಿಗೆ ನವೀಕರಣ ಮಾಡಲಾಗಿದೆ.. ಒಟ್ಟು 2 ಸಾವಿರದ 386 ಎಕರೆ ಭೂಮಿಯನ್ನು 8 ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ನವೀಕರಣದಿಂದ ಸರ್ಕಾರಕ್ಕೆ ₹5000 ಕೋಟಿ ನಷ್ಟವಾಗಿದೆ. ಸುಮಾರು ₹500 ಕೋಟಿ ಕಿಕ್‌ಬ್ಯಾಕ್ ಪಡೆದು ಸಹಿ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಆದರೆ ಕಿಕ್​ಬ್ಯಾಕ್​ಗೆ ಸಿಎಂ ಸ್ಪಷ್ಟನೆ ನೀಡಿದ್ದು, 3 ಗಣಿ ಕಂಪನಿಗಳ ಗಣಿಗಾರಿಕೆ ಹಕ್ಕು ನೀಡಿಲ್ಲ, 3 ಕಂಪನಿಗೆ 2020-201ರಲ್ಲಿ ಬಿಜೆಪಿ ಗುತ್ತಿಗೆ ಹಕ್ಕು ಕೊಟ್ಟಿದೆ. 2 ಕಂಪನಿಗೆ 2016-2018ರಲ್ಲಿ ಗಣಿ ಗುತ್ತಿಗೆಗೆ ಒಪ್ಪಿಗೆ ಸಿಕ್ಕಿದೆ. ಎಲ್ಲಾ 8 ಪ್ರಕರಣಗಳಲ್ಲಿ ಸರ್ಕಾರಕ್ಕೆ ನಯಾಪೈಸೆ ನಷ್ಟವಾಗಿಲ್ಲ. ಈಗ ಸುಗ್ರೀವಾಜ್ಞೆ ಮೂಲಕ ಗಣಿ ಗುತ್ತಿಗೆ ಹರಾಜಾಗಿದೆ ಎಂದಿದ್ದಾರೆ.

ಕಾಂಗ್ರೆಸ್​ ಹೈಕಮಾಂಡ್​ ನಾಯಕರು ಕೂಡ ಗಣಿ ಕಿಕ್​ ಬ್ಯಾಕ್​ ಬಗ್ಗೆ ಸ್ಪಷ್ಟನೆ ಪಡೆದಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ನನ್ನ ವಿರುದ್ಧ ಆರೋಪ ಹೊರಿಸಲಾಗ್ತಿದೆ. ವಿರೋಧ ಪಕ್ಷಗಳ ನಾಯಕರ ಜೊತೆಗೆ ನಮ್ಮದೇ ಪಕ್ಷದ ಪ್ರಭಾವಿಗಳೂ ಸೇರಿಕೊಂಡಿದ್ದಾರೆ. ನಮ್ಮವರೇ ಸಾಥ್​ ಕೊಡ್ವತಿರೋದ್ರಿಂದ ವಿರೋಧಿಗಳ ಬಾಯಿಗೆ ಆಹಾರ ಆಗುವಂತೆ ಆಗಿದೆ. ನಮ್ಮ ಪಕ್ಷದಲ್ಲಿ ಯಾರು ಈ ರೀತಿಯ ಚಾರಿತ್ರ್ಯ ವಧೆ ಆಗ್ತಿದೆ ಅನ್ನೋದು ನಮಗೂ ಗೊತ್ತು. ನಿಮಗೂ ಗೊತ್ತಿರುವ ಸಂಗತಿ. ರಾಜ್ಯದಲ್ಲಿ ಉತ್ತಮ ಅಧಿಕಾರ ನಡೆಸಬೇಕಿದ್ದರೆ ನಮ್ಮ ಪಕ್ಷದವರನ್ನು ನಿಯಂತ್ರಣ ಮಾಡಬೇಕಿದೆ ಎಂದಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಪಂಚಮಸಾಲಿ ಸಮುದಾಯದಲ್ಲಿ ‘ಪಂಚ’ ಪೀಠ ಮಾಡಲು ನಿರ್ಧಾರ..

Next Post

ನಮಗೆ 137 ಸ್ಥಾನ ಕೊಟ್ಟಿರುವುದೇ ಜಾತಿಗಣತಿ ಜಾರಿ ಮಾಡಲು..ಅದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು..! : ಬಿ.ಕೆ ಹರಿಪ್ರಸಾದ್ 

Related Posts

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ
ರಾಜಕೀಯ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

by ಪ್ರತಿಧ್ವನಿ
April 25, 2026
0

ನವದೆಹಲಿ: ದೇಶದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ರಾಘವ ಚಡ್ಡಾ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಮಹತ್ವದ ರಾಜಕೀಯ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
Next Post
ನಮಗೆ 137 ಸ್ಥಾನ ಕೊಟ್ಟಿರುವುದೇ ಜಾತಿಗಣತಿ ಜಾರಿ ಮಾಡಲು..ಅದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು..! : ಬಿ.ಕೆ ಹರಿಪ್ರಸಾದ್ 

ನಮಗೆ 137 ಸ್ಥಾನ ಕೊಟ್ಟಿರುವುದೇ ಜಾತಿಗಣತಿ ಜಾರಿ ಮಾಡಲು..ಅದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು..! : ಬಿ.ಕೆ ಹರಿಪ್ರಸಾದ್ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada