ಮಂಡ್ಯ (Mandya) ರಾಜಕಾರಣ ಅಂದ್ರೆ ಹಾಗೆ..ಕೇವಲ ರಾಜ್ಯವಾದಲ್ಲೇ ರಾಷ್ಟ್ರ ಮಟ್ಟದಲ್ಲಿ ಮಂಡ್ಯ ರಾಜಕಾರಣ ಸದ್ದು ಮಾಡುತ್ತದೆ.ಇದೀಗ ಮತ್ತೊಂದು ಚುನಾವಣೆಗೆ ಸಕ್ಕರೆ ನಾಡು ಸಜ್ಜಾಗುತ್ತಿದೆ.

ಹೌದು ಲೋಕಸಭೆ ರಣಕಣದ ಬಳಿಕ ಇದೀಗ ಮತ್ತೊಂದು ಪ್ರತಿಷ್ಠೆಯ ಕಣದಲ್ಲಿ ಆರಳಿತರೂಢ ಕಾಂಗ್ರೆಸ್ ಮೈತ್ರಿ ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ. ಮಂಡ್ಯ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಕಾಂಗ್ರೆಸ್ ಈಗಾಗಲೇ ಅಖಾಡಕ್ಕಿಳಿದಿದೆ.
ಈ ಚುನಾವಣೆಯಲ್ಲಿ ಮೈತ್ರಿ ಪಡೆಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲಾನ್ ಮಾಡಲು ಮುಂದಾಗಿದ್ದಾರೆ.ಈ ಕುರಿತು ಇಂದು ಸಚಿವ ಚಲುವರಾಯಸ್ವಾಮಿ ಮಹತ್ವದ ಸಭೆ ಕರೆದಿದ್ದಾರೆ.ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು, ಕಾರ್ಯಕರ್ತರೊಂದಿಗೆ ಚುನಾವಣೆಯ ರಣತಂತ್ರದ ಕುರಿತು ಚರ್ಚೆ ನಡೆಸಲಿದ್ದಾರೆ.

ಇಂದು ಮಂಡ್ಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10:30ಕ್ಕೆ ಸಭೆ ನಡೆಯಲಿದ್ದು ಶಾಸಕರಾದ ನರೇಂದ್ರ ಸ್ವಾಮಿ, ಗಣಿಗ ರವಿ, ರಮೇಶ್ ಬಂಡೀಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಉದಯ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದರೆ.