ಇತ್ತೀಚೆಗೆ ಈ ಆಹಾರ ತಯಾರಿಕೆಯ ವಿಧಾನ, ಕೃತಕ ಬಣ್ಣ (Artificial color) ಮತ್ತು ಕೆಮಿಕಲ್ ಗಳ (Chemicals) ಬಳಕೆಯಿಂದ ಉಂಟಾಗುತ್ತಿರುವ ಸಮಸ್ಯೆಗಳು ಒಂದೊಂದಾಗೆ ಮುನ್ನೆಲೆಗೆ ಬರ್ತಿದೆ. ಇದ್ರಿಂದ ಕಂಗಾಲಾಗಿರುವ ಜನ ಏನು ತಿನ್ನೋದು ಯಾವ್ದು ಬಿಡೋದು ಎಂಬ ಗೊಂದಲದಲ್ಲಿದ್ದಾರೆ.

ಈ ಮಧ್ಯೆ ಮೊಮೊಸ್ ಪ್ರಿಯರ (Momos lovers) ಪಾಲಿಗೆ ಮತ್ತೊಂದು ಸಹೊಕ್ಕಿನಗ ವಿಚಾರವಿದೆ. ಅದೇನಂದ್ರೆ, ಪಂಜಾಬ್‌ನ ಮಾತೌರ್‌ನಲ್ಲಿರುವ ಕಾರ್ಖಾನೆಯಲ್ಲಿ ನಾಯಿ ಮಾಂಸ ಕಂಡುಬಂದಿದ್ದು ಇದು ಅಕ್ಷರಶಃ ಕೋಲಾಹಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿದ್ದು, ಏಕಾಏಕಿ ಮೊಮೊಸ್, ಸ್ಪಿಂಗ್ ರೋಲ್ ತಯಾರಿಸುವ ಕಾರ್ಖಾನೆಯನ್ನು ಪರಿಶೀಲಿಸಿದಾಗ, ಅಲ್ಲಿನ ಫ್ರಿಡ್ಜ್‌ನಲ್ಲಿ ನಾಯಿ ತಲೆ & ಮಾಂಸ ಕೂಡ ಕಂಡುಬಂದಿದೆ.

ಸದ್ಯ ಇಲ್ಲಿ ಸಿಕ್ಕಿರುವ ತಲೆಯನ್ನು ಪರೀಕ್ಷೆಗೆ ಎಂದು ರವಾನೆ ಮಾಡಲಾಗಿದೆ. ಈ ಕಾರ್ಖಾನೆಯಿಂದ ಅನೇಕ ಸ್ಥಳಗಳಿಗೆ ಮೊಮೊಸ್, ಸ್ಪಿಂಗ್ ರೋಲ್‌ಗಳನ್ನು ಕಳುಹಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇದೀಗ ನಾನ್ ವೆಗ್ ಮೊಮೊಸ್ ತಯಾರಿಸಲು ನಾಯಿ ಮಾಂಸ ಬಳಸುತ್ತಾರೆಯೇ..ಎಂಬ ಆತಂಕ ಹೆಚ್ಚಾಗಿದೆ.












