• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೇತಗಾನಹಳ್ಳಿ ಒತ್ತುವರಿ ಕೇಸ್ ನಲ್ಲಿ ಹೈಕೋರ್ಟ್ ಗರಂ..! ಅಧಿಕಾರಿಗಳನ್ನು ಜೈಲಿಗಟ್ಟುವಂತೆ ನ್ಯಾಯಾಧೀಶರ ಎಚ್ಚರಿಕೆ..! 

Chetan by Chetan
March 18, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಕೇತಗಾನಹಳ್ಳಿ ಒತ್ತುವರಿ ಕೇಸ್ ನಲ್ಲಿ ಹೈಕೋರ್ಟ್ ಗರಂ..! ಅಧಿಕಾರಿಗಳನ್ನು ಜೈಲಿಗಟ್ಟುವಂತೆ ನ್ಯಾಯಾಧೀಶರ ಎಚ್ಚರಿಕೆ..! 
Share on WhatsAppShare on FacebookShare on Telegram

ಕೇತಗಾನಹಳ್ಳಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣಕ್ಕೆ (Ketaganahalli encroachment case) ಸಂಬಂಧಪಟ್ಟಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆರೋಪಿ ಎದುರಿಸಿತ್ತುರಿವ ಈ ಕೇಸ್ ನಲ್ಲಿ ಮಾನ್ಯ ಹೈಕೋರ್ಟ್ (Highcourt), ಅಧಿಕಾರಿಗಳಿಗೆ ಚೀಮಾರಿ ಹಾಕಿದೆ. ನ್ಯಾಯಾಲದಿಂದ ಜಮೀನು ಒತ್ತುವರಿಗೆ ಆದೇಶ ನೀಡಿದ್ದರೂ ಯಾಕೆ ತೆರವು ಮಾಡಿಲ್ಲ ಎಂದು ಹೈಕೋರ್ಟ್ ಗರಂ ಆಗಿದೆ.

ADVERTISEMENT

ಈ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸುವ ವೇಳೆ ಹೈಕೋರ್ಟ್ ನ್ಯಾಯಾಧೀಶರು ಗರಂ ಆಗಿದ್ದಾರೆ. ಈಗಾಗಲೇ 14 ಎಕರೆ ಜಮೀನು ಒತ್ತುವರಿ ತೆರವಾಗಿದ್ದು, ಉಳಿದ 70 ಎಕರೆ ಜಮೀನು ಒತ್ತುವರಿ ತೆರವು ಮಾಡುವಂತೆ ಸ್ವತಃ ಹೈಕೋರ್ಟ್ ಸೂಚನೆ ನೀಡಿದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಒಂದುವೇಳೆ ಹೈಕೋರ್ಟ್ ಆದೇಶ ಪಾಲನೆ ಮಾಡದಿದ್ದಲ್ಲಿ ನಿಮ್ಮನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ಎಚ್ಚರಿಕೆ ರವಾನೆ ಮಾಡಿದ್ದಾರೆ. ಹೀಗಾಗಿ ಕೊನೆಯ ಅವಕಾಶ ನೀಡುತ್ತಿದ್ದು ಕೂಡಲೇ ಒತ್ತುವರಿ ತೆರವು ಮಾಡಬೇಕು.ಇಲ್ಲವಾದಲ್ಲಿ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಕಡೆಯ ವಾರ್ನಿಂಗ್ ಕೊಟ್ಟಿದ್ದಾರೆ. 

ಈ ಹಿಂದೆಯೂ ಕೂಡ ಕೋರ್ಟ್ ಈ ಪ್ರಕರಣದಲ್ಲಿ ಗರಂ ಆಗಿತ್ತು. ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ಉನ್ನತ ಹುದ್ದೆಯಲ್ಲಿದ್ದಾರೆ, ಪ್ರಭಾವಿಗಳು ಎಂಬ ಕಾರಣಕ್ಕೆ ನೀವು ಇಡುವಡೆಗೆ ಅವರ ಮೇಲೆ ಏನು ಕ್ರಮ ಕೈಗೊಂಡಿಲ್ಲ. ಅಂತಿಮವಾಗಿ ಕೊನೆಯ ಅವಕಾಶ ಅಂತ ನಿಮಗೆ ಇನ್ನೆರಡು ವಾರ ಸಮಯ ಕೊಡುತ್ತೇನೆ. ಅಷ್ಟರೊಳಗೆ ಏನಾದರೂ ಕ್ರಮಕ್ಕೆ ಮುಂದಾಗಬಹುದಾ ನೋಡಿ, ಇಲ್ಲವಾದ್ರೆ ನಿಮ್ಮನ್ನು ಎಲ್ಲಿಗೆ ಕಳಿಸಬೇಕೋ ಅಲ್ಲಿಗೇ ಕಳಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿದ್ದು ಬಂದರೆ ಸರಿಹೋಗ್ತಿರಿ…! ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾ‌ರ್ ಕಠಾರಿಯಾ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದರು. 

Tags: ಅಧಿಕಾರಿಗಳಿಗೆ ತರಾಟೆಎಚ್ ಡಿ ಕುಮಾರಸ್ವಾಮಿಒತ್ತುವರಿ ತೆರವುಕೇತಗಾನಹಳ್ಳಿ ಒತ್ತುವರಿಹೈಕೋರ್ಟ್
Previous Post

ಸಿದ್ದರಾಮಯ್ಯಗೆ ಬೆಳ್ಳಿ ಗದೆ ಕೊಟ್ಟ ಸನ್ಮಾನ ಮಾಡ್ತೀನಿ ಬಿಜೆಪಿ ಶಾಸಕ ಸುರೇಶ್‌ ಗೌಡ

Next Post

ನಾನ್ ವೆಜ್ ಮೊಮೊಸ್ ಪ್ರಿಯರಿಗೆ ಬಿಗ್ ಶಾಕ್ ..! ಫ್ಯಾಕ್ಟರಿಯಲ್ಲಿ ಪತ್ತೆಯಾಯ್ತು ನಾಯಿ ಮಾಂಸ

Related Posts

ದೇವಾಲಯಗಳ ಹುಂಡಿ ಎಣಿಸುವ ಜಾಗದಲ್ಲಿ ಸಿಸಿಟಿವಿ ಕಡ್ಡಾಯ: ಸಿಎಂ ಖಡಕ್‌ ಸೂಚನೆ
Top Story

ಬಂದ್ ವಾಪಸ್ ಪಡೆದ ಸಂಘಟನೆಗಳಿಗೆ ಸಿಎಂ ಡಿ.ಕೆ ಶಿವಕುಮಾರ್  ಕೃತಜ್ಞತೆ

by ಪ್ರತಿಧ್ವನಿ
August 13, 2026
0

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಇಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಬಳಿಕ ಕೆಲವು ಪ್ರಮುಖ ಹೋರಾಟಗಾರರ ತಂಡ ಮುಖ್ಯಮಂತ್ರಿ ಡಿ.ಕೆ....

Read moreDetails
ಎಸ್ಐಆರ್ ಪ್ರಕ್ರಿಯೆ: ಪ್ರಜಾಪ್ರಭುತ್ವ ಮತ್ತು ಸಮಾಜದ ಮೇಲೆ ಪರಿಣಾಮ

ರಿಹಾಬ್ ಕೇಂದ್ರದ ರೋಗಿಗಳನ್ನು SIR ಪ್ರಕ್ರಿಯೆಯಲ್ಲಿ ಸೇರಿಸಿ: ಮೋಹನ್ ಕುಮಾರ್ ದಾನಪ್ಪ ಆಗ್ರಹ

August 13, 2026
ವಾಲ್ಮೀಕಿ ಸಮಾಜದ ಬಗ್ಗೆ ಗೌರವ ಇದ್ರೆ ಬಿ.ನಾಗೇಂದ್ರ ರಾಜೀನಾಮೆ ಕೊಡಲಿ- ಬಿ.ವೈ ವಿಜಯೇಂದ್ರ

ವಾಲ್ಮೀಕಿ ಸಮಾಜದ ಬಗ್ಗೆ ಗೌರವ ಇದ್ರೆ ಬಿ.ನಾಗೇಂದ್ರ ರಾಜೀನಾಮೆ ಕೊಡಲಿ- ಬಿ.ವೈ ವಿಜಯೇಂದ್ರ

August 13, 2026
ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

August 13, 2026
ವಿರೋಧ ಪಕ್ಷಗಳಿಗೆ ಮಾತಿನಲ್ಲೇ ಚಡಿ ಏಟು ಕೊಟ್ಟ ಪ್ರಿಯಾಂಕ್​ ಖರ್ಗೆ..

RSS ಕೇಂದ್ರ ಕಚೇರಿಯಿಂದಲೇ ‘ಹರ್ ಘರ್ ತಿರಂಗಾ’ ಆರಂಭಿಸಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲು

August 13, 2026
Next Post
ನಾನ್ ವೆಜ್ ಮೊಮೊಸ್ ಪ್ರಿಯರಿಗೆ ಬಿಗ್ ಶಾಕ್ ..! ಫ್ಯಾಕ್ಟರಿಯಲ್ಲಿ ಪತ್ತೆಯಾಯ್ತು ನಾಯಿ ಮಾಂಸ

ನಾನ್ ವೆಜ್ ಮೊಮೊಸ್ ಪ್ರಿಯರಿಗೆ ಬಿಗ್ ಶಾಕ್ ..! ಫ್ಯಾಕ್ಟರಿಯಲ್ಲಿ ಪತ್ತೆಯಾಯ್ತು ನಾಯಿ ಮಾಂಸ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada