
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ನಡೆದಿದ್ದು, ಕನ್ನಡಿಗ ಸದಸ್ಯರು ಮೇಯರ್ ಆಗ್ತಾರಾ..? ಮರಾಠಿಗರಿಗೆ ಮೇಯರ್ ಪಟ್ಟ ಸಿಗುತ್ತಾ ಅನ್ನೋ ಕೂತುಹಲಕ್ಕೆ ತೆರೆ ಬಿದ್ದಿದೆ. 23ನೇ ಅವಧಿಗೆ ಮೇಯರ್, ಉಪಮೇಯರ್ ಆಯ್ಕೆ ನಡೆದಿದ್ದು, ಮೇಯರ್ ಆಗಿ ಸಾಮಾನ್ಯ ವರ್ಗ ಹಾಗೂ ಉಪ ಮೇಯರ್ ಆಗಿ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲು ನೀಡಲಾಗಿತ್ತು. 58 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದು, 35 ಬಿಜೆಪಿ ಸದಸ್ಯರ ಜೊತೆಗೆ ಇಬ್ಬರು ಪಕ್ಷೇತರ ಸದಸ್ಯರು ಬೆಂಬಲವು ಇತ್ತು. ಇನ್ನೂ ಕಾಂಗ್ರೆಸ್ ಹಾಗೂ ಪಕ್ಷೇತರರು ಸೇರಿ 21 ಸದಸ್ಯರ ಮಾತ್ರ ಹೊಂದಿತ್ತು. ಹೀಗಾಗಿ ಬಿಜೆಪಿ ಅಧಿಕಾರವನ್ನು ಸೂಸೂತ್ರವಾಗಿ ಹಂಚಿಕೆ ಮಾಡಿದೆ.

ಬೆಳಗಾವಿ ಪಾಲಿಕೆಯಲ್ಲಿ ಅನರ್ಹಗೊಂಡಿದ ಬಿಜೆಪಿ ಸದಸ್ಯನಿಗೆ ಮೇಯರ್ ಪಟ್ಟ ಒಲಿದಿದೆ. ಮರಾಠಿ – ಕನ್ನಡ ಭಾಷಿಕರಿಗೆ ಅಧಿಕಾರ ಹಂಚಿಕೆ ಮಾಡಿದೆ ಬಿಜೆಪಿ. ಮೇಯರ್ ಸ್ಥಾನಕ್ಕೆ ಮಂಗೇಶ್ ಪವಾರ್ ಆಯ್ಕೆ ಆದರೆ, ಉಪಮೇಯರ್ ಸ್ಥಾನಕ್ಕೆ ವಾಣಿ ವಿಲಾಸ್ ಜೋಶಿ ಆಯ್ಕೆ ಆಗಿದ್ದಾರೆ. ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದ ಆರೋಪದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಮಂಗೇಶ್ ಪವಾರ್ ಸದಸ್ಯತ್ವ ಅನರ್ಹ ಮಾಡಿದ್ದರು. ಪ್ರಾದೇಶಿಕ ಆಯುಕ್ತರ ಆದೇಶ ಪ್ರಶ್ನಿಸಿ ಮಂಗೇಶ್ ಪವಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಾದೇಶಿಕ ಆಯುಕ್ತರ ಅನರ್ಹಗೊಳಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಹೈಕೋರ್ಟ್ ಆದೇಶದಂತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಮಂಗೇಶ್ ಪವಾರ್ ಮೇಯರ್ ಆಗಿ ಆಯ್ಕೆ ಆಗಿದ್ದಾರೆ. ಇದೀಗ ಬೆಳಗಾವಿ ಪಾಲಿಕೆ ಮೇಯರ್ ಆಗಿ ಮಂಗೇಶ್ ಪವಾರ್ ಆಯ್ಕೆ ಆಗಿದ್ದಾರೆ. ಕನ್ನಡಿಗರು, ಮರಾಠಿಗರನ್ನು ಬ್ಯಾಲೆನ್ಸ್ ಮಾಡಿದೆ ಬಿಜೆಪಿ ನಾಯಕತ್ವ. ಮೇಯರ್, ಉಪಮೇಯರ್ ಚುನಾವಣೆ ನಡೆಸಿದ ಸಂಜಯ ಕುಮಾರ್ ಶೆಟ್ಟಣ್ಣವರ್ ಫಲಿತಾಂಶ ಘೋಷಣೆ ಮಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೂ ಮುನ್ನ ಖಾಸಗಿ ಹೋಟೆಲ್ನಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಯ್ತು. ಸಂಸದ ಜಗದೀಶ ಶೆಟ್ಟರ್, ಚುನಾವಣೆ ವೀಕ್ಷಕ ಎಂಎಲ್ಸಿ ಎನ್ ರವಿಕುಮಾರ್ ನೇತೃತ್ವದಲ್ಲಿ ಕೋರಕಮಿಟಿ ಸಭೆ ನಡೆಸಿದ್ದು. ಮೇಯರ್ ಸ್ಥಾನಕ್ಕೆ ಐವರು, ಉಪಮೇಯರ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ಇದೆ. ಪೈಪೋಟಿ ಹಿನ್ನೆಲೆ ಚುನಾವಣೆಗೂ ಮುನ್ನ ಖಾಸಗಿ ಹೋಟೆಲ್ನಲ್ಲಿ ಒನ್ ಟು ಒನ್ ಸಭೆ ಮಾಡಿ, ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮೇಯರ್ ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೀತು..












