• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಳಗಾವಿಯಲ್ಲಿ ಮರಾಠಿ – ಕನ್ನಡಿಗರಿಗೆ​ ಪಟ್ಟ ಹಂಚಿದ ಬಿಜೆಪಿ..

ಕೃಷ್ಣ ಮಣಿ by ಕೃಷ್ಣ ಮಣಿ
March 15, 2025
in ಕರ್ನಾಟಕ, ರಾಜಕೀಯ
0
ಬೆಳಗಾವಿಯಲ್ಲಿ ಮರಾಠಿ – ಕನ್ನಡಿಗರಿಗೆ​ ಪಟ್ಟ ಹಂಚಿದ ಬಿಜೆಪಿ..
Share on WhatsAppShare on FacebookShare on Telegram

ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ನಡೆದಿದ್ದು, ಕನ್ನಡಿಗ ಸದಸ್ಯರು ಮೇಯರ್ ಆಗ್ತಾರಾ..? ಮರಾಠಿಗರಿಗೆ ಮೇಯರ್​ ಪಟ್ಟ ಸಿಗುತ್ತಾ ಅನ್ನೋ ಕೂತುಹಲಕ್ಕೆ ತೆರೆ ಬಿದ್ದಿದೆ. 23ನೇ ಅವಧಿಗೆ ಮೇಯರ್, ಉಪಮೇಯರ್ ಆಯ್ಕೆ ನಡೆದಿದ್ದು, ಮೇಯರ್ ಆಗಿ ಸಾಮಾನ್ಯ ವರ್ಗ ಹಾಗೂ ಉಪ ಮೇಯರ್ ಆಗಿ ‌ಸಾಮಾನ್ಯ ವರ್ಗದ ಮಹಿಳೆಗೆ ಮೀಸಲು ನೀಡಲಾಗಿತ್ತು. 58 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದು, 35 ಬಿಜೆಪಿ ಸದಸ್ಯರ ಜೊತೆಗೆ ಇಬ್ಬರು ಪಕ್ಷೇತರ ಸದಸ್ಯರು ಬೆಂಬಲವು ಇತ್ತು. ಇನ್ನೂ ಕಾಂಗ್ರೆಸ್ ಹಾಗೂ ಪಕ್ಷೇತರರು ಸೇರಿ 21 ಸದಸ್ಯರ ಮಾತ್ರ ಹೊಂದಿತ್ತು. ಹೀಗಾಗಿ ಬಿಜೆಪಿ ಅಧಿಕಾರವನ್ನು ಸೂಸೂತ್ರವಾಗಿ ಹಂಚಿಕೆ ಮಾಡಿದೆ.

ADVERTISEMENT

ಬೆಳಗಾವಿ ಪಾಲಿಕೆಯಲ್ಲಿ ಅನರ್ಹಗೊಂಡಿದ ಬಿಜೆಪಿ ಸದಸ್ಯನಿಗೆ ಮೇಯರ್ ಪಟ್ಟ ಒಲಿದಿದೆ. ಮರಾಠಿ – ಕನ್ನಡ ಭಾಷಿಕರಿಗೆ ಅಧಿಕಾರ ಹಂಚಿಕೆ ಮಾಡಿದೆ ಬಿಜೆಪಿ. ಮೇಯರ್ ಸ್ಥಾನಕ್ಕೆ ಮಂಗೇಶ್ ಪವಾರ್ ಆಯ್ಕೆ ಆದರೆ, ಉಪಮೇಯರ್ ‌ಸ್ಥಾನಕ್ಕೆ ವಾಣಿ ವಿಲಾಸ್ ಜೋಶಿ ಆಯ್ಕೆ ಆಗಿದ್ದಾರೆ. ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದ ಆರೋಪದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಮಂಗೇಶ್ ಪವಾರ್ ಸದಸ್ಯತ್ವ ಅನರ್ಹ‌ ಮಾಡಿದ್ದರು. ಪ್ರಾದೇಶಿಕ ಆಯುಕ್ತರ ಆದೇಶ ಪ್ರಶ್ನಿಸಿ ಮಂಗೇಶ್ ಪವಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಾದೇಶಿಕ ಆಯುಕ್ತರ ಅನರ್ಹಗೊಳಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

Assembly Session:ಸದನದಲ್ಲಿ ಬಡಿದಾಡಿಕೊಂಡ ಕಾಂಗ್ರೆಸ್ ನಾಯಕರು. ಸುಮ್ಮನೆ ಕೂತ ಸಿದ್ದರಾಮಯ್ಯ #pratidhvani

ಹೈಕೋರ್ಟ್​ ಆದೇಶದಂತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಮಂಗೇಶ್​ ಪವಾರ್​ ಮೇಯರ್​ ಆಗಿ ಆಯ್ಕೆ ಆಗಿದ್ದಾರೆ. ಇದೀಗ ಬೆಳಗಾವಿ ಪಾಲಿಕೆ ಮೇಯರ್ ಆಗಿ ಮಂಗೇಶ್ ಪವಾರ್ ಆಯ್ಕೆ ಆಗಿದ್ದಾರೆ. ಕನ್ನಡಿಗರು, ಮರಾಠಿಗರನ್ನು ಬ್ಯಾಲೆನ್ಸ್ ಮಾಡಿದೆ ಬಿಜೆಪಿ ನಾಯಕತ್ವ. ಮೇಯರ್, ಉಪಮೇಯರ್ ಚುನಾವಣೆ ‌ನಡೆಸಿದ ಸಂಜಯ ಕುಮಾರ್ ಶೆಟ್ಟಣ್ಣವರ್ ಫಲಿತಾಂಶ ಘೋಷಣೆ ಮಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೂ ಮುನ್ನ ಖಾಸಗಿ ಹೋಟೆಲ್​ನಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಯ್ತು. ಸಂಸದ ಜಗದೀಶ ಶೆಟ್ಟರ್, ಚುನಾವಣೆ ವೀಕ್ಷಕ ಎಂಎಲ್ಸಿ ಎನ್ ರವಿಕುಮಾರ್ ನೇತೃತ್ವದಲ್ಲಿ ಕೋರಕಮಿಟಿ ಸಭೆ ನಡೆಸಿದ್ದು. ಮೇಯರ್ ಸ್ಥಾನಕ್ಕೆ ಐವರು, ಉಪಮೇಯರ ಸ್ಥಾ‌ನಕ್ಕೆ ಮೂವರ ನಡುವೆ ಪೈಪೋಟಿ ಇದೆ. ಪೈಪೋಟಿ ಹಿನ್ನೆಲೆ ಚುನಾವಣೆಗೂ ಮುನ್ನ ಖಾಸಗಿ ಹೋಟೆಲ್​ನಲ್ಲಿ‌ ಒನ್ ಟು ಒನ್ ಸಭೆ ಮಾಡಿ, ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮೇಯರ್​ ಉಪಮೇಯರ್​ ಆಯ್ಕೆ ಪ್ರಕ್ರಿಯೆ ನಡೀತು..

Tags: all about belgaumbelgaum liveBelgaum newsbelgaum news belgavi updates marathi city tarun bharat sakal in kannada daily dailynewsbjp party workerscity news belgaumin belgaum newsin marathiin newskannadamma newsKarnatakakarnataka bankKarnataka State Policeknnknn city newsknn city news belgaumknn city news marathimarathi newsmosr suresh angadi'sShiv Senaspeaks aboutsudden demisetv9 marathiwww.karnatakabank.com
Previous Post

WAQF ಬೋರ್ಡ್​ ಅಧ್ಯಕ್ಷರ ಆಯ್ಕೆ.. ಜಮೀರ್​ ಆಪ್ತನಿಗೆ ಕೊಕ್.. ಏನಾಯ್ತು ಗೊತ್ತಾ..?

Next Post

ಜನಸಂಖ್ಯಾ ಹೆಚ್ಚಳವೂ ಪಿತೃಪ್ರಧಾನ ಮೌಲ್ಯಗಳೂ

Related Posts

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!
Top Story

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

by ಪ್ರತಿಧ್ವನಿ
July 25, 2026
0

ಬೆಂಗಳೂರು : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ಕರ್ನಾಟಕದ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ...

Read moreDetails
30 ದಿನಗಳು..50ಕ್ಕೂ ಹೆಚ್ಚು ನಿರ್ಧಾರಗಳು: ಹೇಗಿತ್ತು ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ತಿಂಗಳು..?

ಪಶ್ನೆ ಪತ್ರಿಕೆ ಸೋರಿಕೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ

July 25, 2026
ʼನನ್ನ ಮಗ ಸುರಕ್ಷಿತವಾಗಿ ಮನೆಗೆ ಬರಬೇಕು’: ಅಭಿಜಿತ್ ದೀಪ್ಕೆ ತಾಯಿ ಭಾವುಕ ಮಾತು

ʼನನ್ನ ಮಗ ಸುರಕ್ಷಿತವಾಗಿ ಮನೆಗೆ ಬರಬೇಕು’: ಅಭಿಜಿತ್ ದೀಪ್ಕೆ ತಾಯಿ ಭಾವುಕ ಮಾತು

July 25, 2026
ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಇದು ಬೆಸ್ಟ್ ನ್ಯೂಸ್ ಅಂದ್ರು ರಮ್ಯಾ!

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಇದು ಬೆಸ್ಟ್ ನ್ಯೂಸ್ ಅಂದ್ರು ರಮ್ಯಾ!

July 25, 2026
BREAKING: ಪ್ರತಿಭಟನೆ ಅಂತ್ಯ: ಸಿಜೆಪಿ ವಕ್ತಾರ ಸೌರವ್‌ ದಾಸ್ ಮಹತ್ವದ ಘೋಷಣೆ

BREAKING: ಪ್ರತಿಭಟನೆ ಅಂತ್ಯ: ಸಿಜೆಪಿ ವಕ್ತಾರ ಸೌರವ್‌ ದಾಸ್ ಮಹತ್ವದ ಘೋಷಣೆ

July 25, 2026
Next Post
ಜನಸಂಖ್ಯಾ ಹೆಚ್ಚಳವೂ ಪಿತೃಪ್ರಧಾನ ಮೌಲ್ಯಗಳೂ

ಜನಸಂಖ್ಯಾ ಹೆಚ್ಚಳವೂ ಪಿತೃಪ್ರಧಾನ ಮೌಲ್ಯಗಳೂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada