ರಾಜ್ಯದಲ್ಲಿ ಸದ್ಯ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವ ಪ್ರಾದೇಶಿಕ ಪಕ್ಷ ಜೆಡಿಎಸ್ (JDS) ಉಳಿವಿಗಾಗಿ ಇದೀಗ ಸ್ವತಃ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Kumaraswamy) ಕಸರತ್ತು ನಡೆಸ್ತಿದ್ದಾರೆ.

ಹೌದು, ಸದ್ಯ ಜೆಡಿಎಸ್ ಪಕ್ಷ ಸಂಘಟನೆಗೆ ದೇವೇಗೌಡ್ರು ಮಾಸ್ಟರ್ ಪ್ಲಾನ್ ಮಾಡಿದ್ದು, ಪಕ್ಷ ಸಂಘಟನೆಯ ಜವಾಬ್ದಾರಿಯನ್ನ ಮೊಮ್ಮಗ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೆಗಲಿಗೆ ನೀಡೋದಕ್ಕೆ ಮುಂದಾಗಿದ್ದಾರೆ. ಇತ್ತ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ (GT Devegowda) ಅಸಮಾಧಾನದ ಮಧ್ಯೆ ಪುತ್ರ ಹರೀಶ್ ಗೌಡಗೆ ಕೂಡ ಸ್ಥಾನಮಾನ ನೀಡಿದ್ದಾರೆ.

ಇನ್ನು ಹರೀಶ್ ಗೌಡ, ನಿಖಿಲ್ ಕುಮಾರಸ್ವಾಮಿಗೆ ದೇವೇಗೌಡರು ಖಡಕ್ ಸಂದೇಶ ರವಾನಿಸಿದ್ದು, ರಾಜ್ಯದಲ್ಲಿ ನಾಲ್ಕು ಬೃಹತ್ ಸಮಾವೇಶ ನಡೆಸೋದಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಸಮಾವೇಶದ ಮೂಲಕ ಕಾಂಗ್ರೆಸ್‌ಗೆ ಟಕ್ಕರ್ ಕೊಟ್ಟು, ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಟಕ್ಕರ್ ಕೊಡಲು ದೊಡ್ಡ ಗೌಡರು ತಂತ್ರ ರೂಪಿಸಿದ್ದಾರೆ ಎನ್ನಲಾಗ್ತಿದೆ.