• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಭಾರತ ಹಾಗೂ ಬೆಂಗಳೂರು ಜಾಗತಿಕವಾಗಿ ಬೆಳೆಯಲು ಕೊಡುಗೆ ನೀಡಿದವರು ಮನಮೋಹನ್ ಸಿಂಗ್: ಡಿಸಿಎಂ ಡಿ.ಕೆ.ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
March 3, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

ಮನಮೋಹನ್ ಸಿಂಗ್ (Manmohan SIngh) ಅವರ ಹೆಸರಿನಲ್ಲಿ ಶಾಶ್ವತ ಯೋಜನೆಗೆ ಚಿಂತನೆ

ADVERTISEMENT

“ದೂರದೃಷ್ಟಿಯ ನಾಯಕ, ಆರ್ಥಿಕ ನೀತಿಗಳ ಮೂಲಕ ಜನಸಾಮಾನ್ಯರ ಹಾಗೂ ದೇಶ ಹಾಗೂ ಬೆಂಗಳೂರು ಜಾಗತಿಕವಾಗಿ ಬೆಳೆಯಲು, ಗುರುತಿಸಿಕೊಳ್ಳಲು ಕೊಡುಗೆ ನೀಡಿದ ವ್ಯಕ್ತಿ ಮನಮೋಹನ್ ಸಿಂಗ್ ಅವರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಅವರು ಅಭಿಪ್ರಾಯಪಟ್ಟರು.

ವಿಧಾನಸಭೆ ಬಜೆಟ್ ಅಧಿವೇಶನದ ಮೊದಲನೇ ದಿನದ ಸಂತಾಪ ಸೂಚನೆ ವೇಳೆ ಶಿವಕುಮಾರ್ ಅವರು ಸೋಮವಾರ ಮಾತನಾಡಿದರು.

“ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ(Electronic City), ನೆಲಮಂಗಲ(Nelamangala), ವಿಮಾನ ನಿಲ್ದಾಣ(Airport), ಕೋಲಾರ(Kolar) ಕಡೆಯ ಮೇಲ್ಸೆತುವೆಗೆ ಅನುದಾನ ನೀಡಿದರು. ನರ್ಮ್ ಯೋಜನೆ ಮುಖಾಂತರ ಬೆಂಗಳೂರಿನ ಅಭಿವೃದಿಗೆ ಸಾಕಷ್ಟು ಅನುದಾನ ನೀಡಿದರು. ಬೆಂಗಳೂರಿನ ಬಗ್ಗೆ ಅಪಾರವಾದ ವಿಶ್ವಾಸವನ್ನು ಹೊಂದಿದ್ದವರು ಡಾ.ಸಿಂಗ್. ಹೃದಯಶ್ರೀಮಂತಿಕೆಯಿಂದ ಹಣದ ಸಹಾಯ ಮಾಡಿದ್ದಾರೆ. ಇಲ್ಲಿ ಆದಾಯವೂ ಸಹ ಅದೇ ರೀತಿ ಮರಳಿ ಬರುತ್ತಿತ್ತು. ಈಗ ಐಟಿ- ಬಿಟಿ (IT-BT)ರಫ್ತು ಮೂಲಕ ಶೇ.39 ರಷ್ಟು ಆದಾಯ ದೇಶಕ್ಕೆ ಬೆಂಗಳೂರಿನಿಂದ ಬರುತ್ತಿದೆ. ಇಂತಹ ದೂರದೃಷ್ಟಿಯಿಂದ ಸಿಂಗ್ ಅವರು ಬೆಂಗಳೂರಿನ ಅಭಿವೃದ್ದಿಗೆ ಕೊಡುಗೆ ನೀಡಿದ್ದರು” ಎಂದರು.

“ಮನಮೋಹನ್ ಸಿಂಗ್ (Manmohan Singh) ಅವರ ಹೆಸರಿನಲ್ಲಿ ಯೋಜನೆ ಮಾಡುವ ಕುರಿತು ಈ ಹಿಂದೆ ಉನ್ನತ ಶಿಕ್ಷಣ ಸಚಿವರ ಬಳಿ ಚರ್ಚೆ ನಡೆಸಿದ್ದೆ. ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ನಾವು ಮಾಡಬೇಕು ಎನ್ನುವ ಆಲೋಚನೆಯಿದೆ. ಇದಕ್ಕೆ ಯಾವ ರೀತಿ ಹೆಸರನ್ನು ಇಡಬೇಕು ಎಂದು ಮುಂದಿನ ದಿನಗಳಲ್ಲಿ ಆಲೋಚನೆ ಮಾಡಲಾಗುವುದು” ಎಂದು ಹೇಳಿದರು.

“ಯುಪಿಎ (UPA) ಅವಧಿಯಲ್ಲಿ ಮಾಡಿರುವ ಕಾರ್ಯಕ್ರಮಗಳನ್ನು, ಜನರ ಬದುಕು, ಕಲ್ಯಾಣಕ್ಕೆ ತೆಗೆದುಕೊಂಡಿರುವ ತೀರ್ಮಾನಗಳನ್ನು ನಾವುಗಳು ಮರೆಯಬಾರದು. ರಾಷ್ಟ್ರ್ರೀಕೃತ ಬ್ಯಾಂಕ್ ಗಳಲ್ಲಿ ಇದ್ದ ಸುಮಾರು 70 ಸಾವಿರ ಕೋಟಿಗೂ ಹೆಚ್ಚಿನ ರೈತರ ಸಾಲವನ್ನು ಮನ್ನಾ ಮಾಡಿದ್ದರು. ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಆಹಾರ ಭದ್ರತಾ ಕಾಯ್ದೆ ಎನ್ನುವ ಅತ್ಯುತ್ತಮ ಯೋಜನೆ ತಂದವರು. ನರೇಗಾ ಮೂಲಕ ಪ್ರತಿ ಪಂಚಾಯಿತಿಯು 3-4 ಕೋಟಿಯಷ್ಟು ಅನುದಾನ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟವರು. ಇದಕ್ಕೂ ಹಿಂದೆ ಒಂದು ಪಂಚಾಯಿತಿಗೆ 1 ಲಕ್ಷ ಅನುದಾನವೂ ಸಿಗುತ್ತಿರಲಿಲ್ಲ. ಜೆ.ಎಚ್.ಪಟೇಲರ ಕಾಲದಲ್ಲಿ ರೂ.5 ಲಕ್ಷ ಅನುದಾನ ಬರುತ್ತಿತು. ಜೊತೆಗೆ ನರೇಗಾ (Narega Scheme) ಮೂಲಕ ರೈತನು ತನ್ನ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿ ಹಣ ಪಡೆಯುವ ಯೋಜನೆ ನರೇಗಾದಲ್ಲಿದೆ” ಎಂದು ಹೇಳಿದರು.

“ಅರಣ್ಯ ಭೂಮಿ ಹಕ್ಕು ಕಾಯ್ದೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಕಾನೂನುಗಳನ್ನು ತಂದರು. ಭೂಮಿ ಕಳೆದುಕೊಂಡ ಜನರಿಗೆ ದುಪ್ಪಟ್ಟು ಪರಿಹಾರ ಯೋಜನೆ, 15 ಕಿಮೀ ವ್ಯಾಪ್ತಿಯಿದ್ದರೆ ಮೂರುಪಟ್ಟು, ಗ್ರಾಮೀಣ ಭಾಗದಲ್ಲಿ 4 ಪಟ್ಟು ಪರಿಹಾರ ನೀಡುವ ಯೋಜನೆ ಜಾರಿಗೆ ತಂದರು. ಇದರಿಂದ ಅನೇಕರಿಗೆ ಉಪಯೋಗವಾಗಿದೆ. ಸರ್ಕಾರದಲ್ಲಿ ಕುಳಿತಿರುವ ನಮಗೆ ಈ ಹಣ ಹೊರೆ ಎಂದು ಅನ್ನಿಸಬಹುದು. ರಾಜ್ಯಪಾಲರ ಭಾಷಣದ ವೇಳೆ ಭೂಸ್ವಾಧಿನಕ್ಕೆ ಸುಮಾರು ರೂ. 20 ಸಾವಿರ ಕೋಟಿ ಹಣ ನೀಡಬೇಕು ಎಂದು ಹೇಳಿದರು. ಈ ಕಾಯ್ದೆ ಬರುವ ಮೊದಲು ರೂ. 3-4 ಸಾವಿರ ಕೋಟಿಗೆ ಮುಗಿಯುತಿತ್ತು. ಆದರೆ ಇದರಿಂದ ಭೂಮಿ ಕಳೆದುಕೊಂಡ ರೈತರಿಗೆ ಅನುಕೂಲವಾಗಿದೆ. ಇದು ಮನಮೋಹನ್ ಸಿಂಗ್ ಅವರು ದೂರದೃಷ್ಟಿ” ಎಂದು ತಿಳಿಸಿದರು.

ಸಿಎಸ್ ಆರ್ (CSR) ಸದ್ಬಳಕೆಗೆ ನಾಂದಿ ಹಾಡಿದವರು ಡಾ.ಸಿಂಗ್

“ನಮ್ಮ ರಾಜ್ಯವೊಂದರಲ್ಲಿಯೇ ರೂ. 8,100 ಕೋಟಿ ಸಿಎಸ್ ಆರ್ ಹಣ ಸಂಗ್ರಹವಾಗುತ್ತಿದೆ. ಈ ಸಿಎಸ್ ಆರ್ ಯೋಜನೆ ಪರಿಚಯಿಸಿದವರು ಮನಮೋಹನ್ ಸಿಂಗ್ ಅವರು. ಅಂದು ಪ್ರಣಬ್ ಮುಖರ್ಜಿ (Pranab Mukharjee) ಅವರು ಹಣಕಾಸು ಸಚಿವರಾಗಿದ್ದರು. ಆಗ ಕಾರ್ಪೋರೇಟ್ ವಲಯದವರು ಶೇ. 2 ರಷ್ಟು ಹಣವನ್ನು ಸಾಮಾಜಿಕ ಕೆಲಸಗಳಿಗೆ ಮೀಸಲಿಡಬೇಕು ಎಂದು ಈ ಯೋಜನೆ ಜಾರಿಗೆ ತಂದರು” ಎಂದರು.

“ಈಗ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದ ಸರ್ಕಾರ ಈ ವಿಚಾರವಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದೆ. ಇದರ ಮೂಲಕ ಪ್ರತಿ ಗ್ರಾಮೀಣ ಪ್ರದೇಶದಲ್ಲಿ ಕೆಪಿಎಸ್ ಶಾಲೆಗಳನ್ನು (Built KPS Schools) ನಿರ್ಮಾಣ ಮಾಡಬೇಕು ಎಂದು ಮುಂದಾಗಿದ್ದೇವೆ. ಈಗಾಗಲೇ ಮೊದಲನೇ ಹಂತದಲ್ಲಿ 500 ಶಾಲೆಗಳ ನಿರ್ಮಾಣಕ್ಕೆ ಹೆಜ್ಜೆಯಿಟ್ಟಿದ್ದೇವೆ. ಒಟ್ಟು 2 ಸಾವಿರ ಶಾಲೆಗಳ (2000 Schools) ನಿರ್ಮಾಣ ಗುರಿ ನಮ್ಮ ಮುಂದಿದೆ. ಒಂದು ಕ್ಷೇತ್ರಕ್ಕೆ ಕನಿಷ್ಠ 5- 8 ಶಾಲೆಗಳು ನಿರ್ಮಾಣವಾಗುವ ಅವಕಾಶವಿದೆ. ಪ್ರತಿ ಶಾಲೆಗೆ ಕನಿಷ್ಠ ರೂ.7- 10 ಕೋಟಿ ಹಣವನ್ನು ವಿನಿಯೋಗಿಸಲಾಗುವುದು. ಜನರು ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹಾಗೂ ಜಿಲ್ಲಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗಲಿದೆ. ಇದಕ್ಕೆಲ್ಲಾ ಮನಮೋಹನ್ ಸಿಂಗ್ ಅವರು ಜಾರಿಗೆ ತಂದ ಸಿಎಸ್ ಆರ್ ಯೋಜನೆ ಕಾರಣ” ಎಂದರು.

ಶಾಂತಿಯಿಂದಿರಿ ಎಂದು ಕಿವಿ ಮಾತು ಹೇಳಿದ್ದ ಸಿಂಗ್ ಅವರು

“ಸಮ್ಮಿಶ್ರ ಸರ್ಕಾರದಲ್ಲಿ ನನ್ನನ್ನು ಮಂತ್ರಿ ಮಾಡಿರಲಿಲ್ಲ. ದೇವೇಗೌಡರು(Devegowda) , ಶಿವಕುಮಾರ್ (Shivakumar) ಹಾಗೂ ಎಸ್.ಎಂ.ಕೃಷ್ಣ (SM Krishna) ಅವರು ಸಂಪುಟದಲ್ಲಿ ಇರಬಾರದು ಎಂದು ಹೇಳಿದ್ದ ಕಾರಣಕ್ಕೆ ನನ್ನನ್ನು ಹೊರಗಿಟ್ಟಿದ್ದರು. ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ತಿಳಿದಿದೆ. ಈ ಮಧ್ಯೆ ಮನಮೋಹನ್ ಸಿಂಗ್ ಅವರು ಬೆಂಗಳೂರಿಗೆ ಬಂದರು. ಆಗ ಬೆಂಗಳೂರು ವಿವಿಯ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲು ಶ್ರೀಕಂಠಯ್ಯ(Shree Kantaiah), ಚಂದ್ರೇಗೌಡರು (Chandregowda) ಹಾಗೂ ನಾನು ನಿಂತಿದ್ದೆವು. ಆಗ ನನ್ನ ಕೈ ಹಿಡಿದು ಕರೆದುಕೊಂಡು ಹೋದ ಸಿಂಗ್ ಅವರು, ʼನನಗೆ ಸಂದೇಶವಿದೆ ನಿಮ್ಮ ಬಳಿ ಮಾತನಾಡಬೇಕುʼ ಎಂದರು. ನಂತರ ʼನೀವು ಸ್ವಲ್ಪ ತಾಳ್ಮೆಯಿಂದ ಇರಬೇಕು. ಈ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಇಡೀ ಪ್ರಪಂಚ ಬೆಂಗಳೂರು ಮೂಲಕ ದೇಶವನ್ನು ನೋಡುತ್ತಿದೆ. ನಾವೆಲ್ಲರೂ ಭಾರತವನ್ನು ಪ್ರತಿನಿಧಿಸುತ್ತಾ ಇದ್ಧೇವೆ. ನಾವು ಏನು ಬೇಕಾದರೂ ಬೆಂಗಳೂರಿಗೆ ಸಹಾಯ ಮಾಡಲು ತಯಾರಿದ್ದೇವೆ. ಈ ಸಮ್ಮಿಶ್ರ ಸರ್ಕಾರ ಬಹಳ ಶಾಂತಿಯಿಂದ ನಡೆಯಬೇಕುʼ ಎಂದು ನನಗೆ ಕಿವಿ ಮಾತು ಹೇಳಿದರು” ಎಂದು ಹಳೆಯ ಘಟನೆ ಮೆಲುಕು ಹಾಕಿದರು.

“ಮನುಷ್ಯನ ಜೀವ ಶಾಶ್ವತವಲ್ಲ. 60- 100 ವರ್ಷಗಳ ನಡುವಿನಲ್ಲಿ ಕೆಲವರು ನಾವುಗಳು ಸಹ ಯಾವಾಗ ಬೇಕಾದರೂ ಮರಣ ಹೊಂದಬಹುದು. ಮನಮೋಹನ್ ಸಿಂಗ್ ಅವರು ತಮ್ಮ ಜೀವಿತಾವಧಿಯಲ್ಲಿ ದೊಡ್ಡ ಸಾಧನೆ ಮಾಡಿ ತೆರಳಿದ್ದಾರೆ. 6 ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಜನಾರ್ಧನ ಪೂಜಾರಿ (Janardhan Poojari) ಅವರು ವಿತ್ತ ಮಂತ್ರಿಗಳಾಗಿದ್ದ ಸಮಯದಲ್ಲಿ ಇವರು ಸರ್ಕಾರಕ್ಕೆ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಪ್ರಧಾನಿಗಳಾಗಿದ್ದ ಸಮಯ, ನಂತರದ ದಿನಗಳಲ್ಲಿಯೂ ಅವರನ್ನು ಭೇಟಿ ಮಾಡಿದ್ದೇನೆ” ಎಂದರು.

“ಗಾಂಧಿ ಭಾರತ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಸುವರ್ಣಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣವಿತ್ತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರಿಗೆ ಹಾಗೂ ನಮಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Ex PM Manmohan Singh) ಅವರು ಮರಣ ಹೊಂದಿದ್ದಾರೆ ಎನ್ನುವ ಸುದ್ದಿ ಬಂದಿತು. ನಂತರ ಗಾಂಧಿ ಭಾರತ ಕಾರ್ಯಕ್ರಮದ ವೇದಿಕೆಯಲ್ಲಿಯೇ ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು” ಎಂದು ಹೇಳಿದರು.

“ಮಾಜಿ ಸಂಸದರಾಗಿದ್ದ ಶ್ರೀನಿವಾಸಯ್ಯ (Ex MP Shreenivasaiah) ಅವರು ನನಗೆ ಆತ್ಮೀಯರಾಗಿದ್ದರು. ಅವರ ಜೊತೆ ನಾನು 4 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಅನೇಕ ಸಮಿತಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ವಿಮಾನ ನಿಲ್ದಾಣ ಸಮಿತಿಯಲ್ಲಿದ್ದಾಗ ಅವರ ಕೆಲಸವನ್ನು ಹತ್ತಿರದಿಂದ ನೋಡಿದ್ದೇನೆ. ಜಯವಾಣಿ ಮಂಚೇಗೌಡ ರು (Jayavani Manchegowda) ಅವರನ್ನು ಇದೇ ಸಮಯದಲ್ಲಿ ನೆನೆಯುತ್ತೇನೆ. ಇವರು ಉಪಚುನಾವಣೆಗೆ ನಿಂತಾಗ ದೊಡ್ಡ ಹೋರಾಟವೇ ನಡೆಯಿತು. ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್(Shyam Benagal), ಸಾಹಿತಿ ನಾ. ಡಿಸೋಜಾ (Na Disoza)ಅವರು, ಜನಪದ ಕಲಾವಿದೆ ಸುಕ್ರೀ ಬೊಮ್ಮಗೌಡ (Sukri Bommagowda) ಅವರಿಗೂ ಇದೇ ವೇಳೆ ಸಂತಾಪಗಳನ್ನು ಸೂಚಿಸುತ್ತೇನೆ. ಇವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.

Tags: ChandregowdadevegowdaDK ShivakumarJanardhan PoojariJayavani Bengaljayavani ManchegowdaManmohan SinghNa DisozaPranab MukharjeeShree NivasaiahShyam BenagalsiddaramaiahSM KrishnaSri KantaiahSukri BommagowdaUPA
Previous Post

ಬ್ಯಾಂಕ್‌ ಲಾಕರ್‌ ನಲ್ಲಿ ನಿಮ್ಮ ಚಿನ್ನ ಹಣ ಇಡುವ ಮುನ್ನ ನೂರು ಬಾರಿ ಯೋಚಿಸಿ..!!

Next Post

ಕೆಕೆಆರ್ ಹೊಸ ನಾಯಕತ್ವ: Rahane ನಾಯಕ, Venkatesh ಉಪನಾಯಕ

Related Posts

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
0

ಅಂದರ್-ಬಾಹರ್ ನಲ್ಲಿ ತೊಡಗಿದ್ದವರನ್ನ ಬೇಟೆಯಾಡಿದ ಖಾಕಿ ಗದಗ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ಗದಗ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪೊಲೀಸರ ದಾಳಿ ಗದಗ ಎಸ್ಪಿ ರೋಹನ್ ಜಗದೀಶ್...

Read moreDetails
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

October 24, 2025
ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
Next Post
ಕೆಕೆಆರ್ ಹೊಸ ನಾಯಕತ್ವ: Rahane ನಾಯಕ, Venkatesh ಉಪನಾಯಕ

ಕೆಕೆಆರ್ ಹೊಸ ನಾಯಕತ್ವ: Rahane ನಾಯಕ, Venkatesh ಉಪನಾಯಕ

Recent News

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada