ಜನ ತಮಗಿಂತ ಜಾಸ್ತಿ ಬ್ಯಾಂಕ್ ಅನ್ನು ನಂಬುತ್ತಾರೆ… ಅದರೆ ಇಲ್ಲಿ ಬೆಲಿನೇ ಎದ್ದು ಒಲ ಮೇಯ್ದದಂತೆ ಅಗಿದೆ… ಮನೆಯಲ್ಲಿ ಚಿನ್ನ ಹಾಗೂ ಮುಖ್ಯ ದಾಖಲೆಗಳನ್ನು ಇಟ್ಟರೆ ಮನೆಗಳ್ಳರ ಕಾಟ ಎಂದು ಬ್ಯಾಂಕ್ ನಲ್ಲಿ ಇಡುತ್ತಾರೆ… ಬ್ಯಾಂಕ್ ನಲ್ಲಿ ಇದ್ದರೆ ಸೇಫ್ ಮತ್ತು ಸೇಕ್ಯೂರ್ ಅಗಿರುತ್ತೆ ಎಂದು ನಿಚ್ಚಿಂತೆಯಿಂದ ಇರುತ್ತೆ… ಹೀಗಾಗಿ ಅಗತ್ಯ ಬರುವವರೆಗೆ ಬ್ಯಾಂಕ್ ನಲ್ಲಿ ಇಟ್ಟ ಲಾಕರ್ ಒಪನ್ ಮಾಡುವುದಿಲ್ಲ…

ತಿಂಗಳಾನುಗಟ್ಟಲೇ ಲಾಕರ್ ಓಪನ್ ಮಾಡದೆ ಫೆ.25 ರಂದು ಲಾಕರ್ ಓಪನ್ ಮಾಡಿವರಿಗೆ ಶಾಕ್ ಕಾದಿತ್ತು..!!! ಜಯನಗರದ 8 ನೇ ಬ್ಲಾಕ್ ನ ಬ್ಯಾಂಕ್ ಆಫ್ ಬರೋಡದಲ್ಲಿ ಲಾಕರ್ ಹೊಂದಿದ್ದ ರಾಜೇಂದ್ರ ಪಾಟೀಲ್… ಕಳೆದ ನಾಲ್ಕು ವರ್ಷದಿಂದ ಲಾಕರ್ ಹೊಂದಿರುವ ರಾಜೇಂದ್ರ… ಲಾಕರ್ ನಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನ ಹಾಗೂ ದಾಖಲೆ ಇಟ್ಟಿದ್ದ ರಾಜೇಂದ್ರ…. ಫೆ.25 ರಂದು ಬ್ಯಾಂಕ್ ಲಾಕರ್ ಓಪನ್ ಮಾಡಿದಾಗ ಶಾಕ್… ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಭರಣ ಕಳುವಾಗಿತ್ತು…

ಈ ಬಗ್ಗೆ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಕೇಳಿದಾಗ ನೆಗ್ಲೆಟ್ ಮಾಡಿದ್ದಾರೆ… ನಿಮ್ಮ ಲಾಕರ್ ನಲ್ಲಿ ಇಟ್ಟಿದ್ದ ವಸ್ತುಗಳು ನಮಗೆ ಏನು ಗೊತ್ತು ನಮಗೆ ಗೊತ್ತಿಲ್ಲ ಎಂದು ಉತ್ತರ… ಲಾಕರ್ ಒಂದು ಕೀ ಅಸಿಸ್ಟೆಂಟ್ ಮ್ಯಾನೇಜರ್ ಬಳಿ ಹಾಗೂ ಮತ್ತೊಂದು ಕೀ ರಾಜೇಂದ್ರ ಬಳಿ ಇತ್ತು… ಸದ್ಯ ಲಾಕರ್ ನಲ್ಲಿ ಇದ್ದ ಚಿನ್ನಭರಣ ಕಳುವು ಅಗಿದೆಂದು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲು… ಬ್ಯಾಂಕ್ ಬರೋಡ ಅಸಿಸ್ಟೆಂಟ್ ಮ್ಯಾನೇಜರ್ ರಾಜು ವಿರುದ್ಧ ಪ್ರಕರಣ ದಾಖಲು…
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಹೇಳಿಕೆ

ಜಯನಗರ ಠಾಣಾ ವ್ಯಾಪ್ತಿಯಲ್ಲಿ ಮಾ೧ ರಂದು ವಂಚನೆ ಪ್ರಕರಣ ದಾಖಲಾಗಿದೆ ತನ್ನ ಬ್ಯಾಂಕ್ ನಲ್ಲಿ ಬೆಲೆ ಬಾಳುವ ಒಡೆವಗಳನ್ನ ಇಟ್ಟಿದ್ರು ಅಕ್ಟೋಬರ್ ನಲ್ಲೂ ಚಿನ್ನ ಇರುತ್ತೆ ಆದರೆ ಮಧ್ಯದಲ್ಲಿ ಎರಡು ಒಡೆವೆಗಳು ನಾಪತ್ತೆಯಾಗಿದೆ ಅದರ ಬದಲಾಗಿ ಡುಪ್ಲಿಕೇಟ್ ಒಡವೆ ಇಟ್ಟಿದ್ದಾರೆ ಎಂದು ದೂರು ನೀಡಿದ್ರು
ಕಳೆದ ಜನವರಿಯಲ್ಲಿ ಇದೆ ಎರಡು ಕೇಸ್ ವರದಿಯಾಗಿವೆ ಅಸಿಸ್ಟೆಂಟ್ ಮ್ಯಾನೇಜರ್ ಮೇಲೆ ಪ್ರತ್ಯೇಕವಾಗಿ ದೂರು ನೀಡಿದ್ದಾರೆ ಅವರು ಯಾವಾಗಾ ಕೆಲಸಕ್ಕೆ ಸೇರಿದ್ರು ಅನ್ನೋ ಬಗ್ಗೆ ತನಿಖೆ ಮಾಡಬೇಕಿದೆ ಈಗ ದಾಖಲಾಗಿರೋ ಪ್ರಕರಣದ ಬಗ್ಗೆ ತನಿಖೆ ಮಾಡ್ತಿವಿ