ಕೇಂದ್ರ ಗೃಹ ಸಚಿವ, ಬಿಜೆಪಿ ಕೇಂದ್ರ ನಾಯಕ ಅಮಿತ್ ಶಾ (Bjp leader Amit sha) ಅವರ ಜೊತೆಗೆ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (Dk Shivakumar) ಶಿವರಾತ್ರಿಯಂದು (Shivaratri) ಒಂದೇ ವೇದಿಕೆ ಹಂಚಿಕೊಂಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಪ್ರದೀಪ್ ಈಶ್ವರ್ (Pradeep ishwar) ಪ್ರತಿಕ್ರಿಯೆಸಿದ್ದಾರೆ.

ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ನಾನು ಕೆಪಿಸಿಸಿ ಪಕ್ಷದ ಸಾಮಾನ್ಯ ಕಾರ್ಯಕರ್ತ.ನನ್ನ ಅರ್ಹತೆ ಕೆಪಿಸಿಸಿ ಕಚೇರಿಯಲ್ಲಿ ಕಸ ಗುಡಿಸೋದು.ಕಸ ಗುಡಿಸೋನು ದೇವರ ಬಗ್ಗೆ ಮಾತನೋಡೋ ಅರ್ಹತೆ ಇರುತ್ತಾ ಎಂದಿದ್ದಾರೆ.
ಇದೇ ವೇಳೆ ಬಿಜೆಪಿಗೆ ಕೌಂಟರ್ ಕೊಟ್ಟ ಪ್ರದೀಪ್ ಈಶ್ವರ್, ನಾನು ಕೆಪಿಸಿಸಿ ದೇವರ ಬಗ್ಗೆ ಮಾತನಾಡೋದಿಲ್ಲ. ಆದ್ರೆ ನಾನು ಅಶೋಕ್ ಯತ್ನಾಳ್ ಬಗ್ಗೆ ಮಾತನಾಡುತ್ತೇನೆ. ಅವರು ನನ್ನ ಲೆವೆಲ್ ನಾಯಕರ ಅಂತಾ ಬಿಜೆಪಿ ನಾಯಕರ ಕಾಲೆಳೆದಿದ್ದಾಟೆ.