ಹೆಚ್ಚು ಜನಕ್ಕೆ ಹಿಮ್ಮಡಿ ಒಡೆದಿರುತ್ತೆ ಇದರಿಂದ ಯಾವುದೇ ರೀತಿಯ ನೋವು ಅಥವಾ ಉರಿ ಆಗುವುದಿಲ್ಲ ಆದರೆ ಹಿಮ್ಮಡೆ ಒಡೆದಾಗ ಕೊಳೆ ಕೂರುವಂತದ್ದು ಅಥವಾ ನೋಡಲು ಹಿಂಸೆ ಅನಿಸುವುದು ಬೇಸಿಗೆಯಲ್ಲಿ ಹಿಮ್ಮಡಿ ಹೆಚ್ಚು ಒಡೆಯುತ್ತದೆ.ಇನ್ನು ಎಕ್ಸ್‌ಫೋಲಿಯೇಟ್ ಮಾಡುವುದು ಮಾಯಿಶ್ಚರೈಸರ್ ಬಳಸಿ..ಇನ್ನು ಹಿಮ್ಮಡಿ ಒಡೆಯಲು ಪ್ರಮುಖ ಕಾರಣಗಳು ಏನು ಎಂಬುವುದರ ಮಾಹಿತಿ ಇಲ್ಲಿದೆ..

ಒಣ ಚರ್ಮ
ಹೆಚ್ಚು ಜನಕ್ಕೆ ಹಿಮ್ಮಡಿ ಬಿರುಕು ಬಿಡಲು ಪ್ರಮುಖ ಕಾರಣ ಒಣ ಚರ್ಮ.ಹೌದು ಹಿಮ್ಮಡಿಯ ಮೇಲಿನ ಚರ್ಮವು ಒಣಗಿದಾಗ ಮತ್ತು ಅದರ ನೈಸರ್ಗಿಕ ತೇವಾಂಶವನ್ನು ಕಳೆದುಕೊಂಡಾಗ, ಅದು ಬಿರುಕು ಬಿಡಲು ಕಾರಣವಾಗುತ್ತದೆ.
ಅಧಿಕ ತೂಕ
ಇದ್ದಕ್ಕಿದ ಹಾಗೆ ದೇಹದ ತೂಕ ಹೆಚ್ಚಾದಾಗ ಹಿಮ್ಮಡಿ ಮೇಲೆ ಒತ್ತಡ ಹೇರಬಹುದು, ಇದರಿಂದಾಗಿ ಚರ್ಮವು ಬಿರುಕು ಬಿಡಬಹುದು.ಇದು ಕೂಡ ಒಂದು ಮುಖ್ಯ ಕಾರಣ.
ವಯಸ್ಸಾಗುವಿಕೆ
ನಮಗೆ ವಯಸ್ಸಾಗುತ್ತಿದ್ದಂತೆ, ಚರ್ಮದ ನೈಸರ್ಗಿಕ ತೇವಾಂಶ ಕಡಿಮೆಯಾಗುತ್ತದೆ .ಇದು ಶುಷ್ಕತೆ ಮತ್ತು ಬಿರುಕುಗಳಿಗೆ ಕಾರಣವಾಗಬಹುದು.

ವೈದ್ಯಕೀಯ ಪರಿಸ್ಥಿತಿಗಳು
ಮಧುಮೇಹ, ಎಸ್ಜಿಮಾ ಅಥವಾ ಸೋರಿಯಾಸಿಸ್‌ನಂತಹ ಕೆಲವು ವೈದ್ಯಕೀಯ ಪರಿಸ್ಥಿತಿಗಳು ಹಿಮ್ಮಡಿ ಬಿರುಕು ಬಿಡುವ ಅಪಾಯವನ್ನು ಹೆಚ್ಚಿಸಬಹುದು.
ದೇಹದ ಉಷ್ಣತೆ
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ನೀರಿನಾಂಶ ಕೂಡ ಮಡಿಮೆಯಾಗುತ್ತದೆ..ಇದರಿಂದ ಹಿಮ್ಮಡಿ ಒಡೆಯುತ್ತದೆ..