ಹೆಚ್ಚು ಜನ ಬೆಳಗ್ಗೆ ಇದ್ದ ತಕ್ಷಣ ಹಲ್ಲುಗಳನ್ನು ಉಜ್ಜುತ್ತಾರೆ..ಆದ್ರೆ ಕೆಲವರು ಹಲ್ಲುಜ್ಜುವ ಮೊದಲು ಬೆಳಗಿನ ತಿಂಡಿಯನ್ನು ಸೇವಿಸುತ್ತಾರೆ..ಹಲ್ಲುವುಜ್ಜುವ ಮೊದಲು ತಿಂಡಿ ತಿನ್ನವುದು ಒಳ್ಳೆಯ ಅಭ್ಯಾಸವಲ್ಲ ಎಂಬುವುದು ಹೆಚ್ಚು ಜನರ ಅಭಿಪ್ರಾಯ ಆದ್ರೆ ಹಾಗೆ ಸೇವಿಸುವುದರಿಂದ ಹಲವಾರು ಆರೋಗ್ಯ ಪರಿಣಾಮಗಳು ಉಂಟಾಗಬಹುದು, ಪೋಸ್ಟಿವ್ ಹಾಗೂ ನೆಗೆಟಿವ್ ಇಂಪ್ಯಾಕ್ಟ್ ಎರಡು ಇದೆ..ಆ ಬಗ್ಗೆ ಇಲ್ಲಿದೆ ಮಾಹಿತಿ.

ಪಾಸಿಟಿವ್ ಪರಿಣಾಮಗಳು
ಶಕ್ತಿಯನ್ನು ಹೆಚ್ಚಿಸುತ್ತದೆ
ಹಲ್ಲುಜ್ಜುವ ಮೊದಲು ಉಪಾಹಾರ ಸೇವಿಸುವುದರಿಂದ ದೇಹದಲ್ಲಿ ಎನರ್ಜಿಯನ್ನು ಬೂಸ್ಟ್ ಮಾಡುತ್ತದೆ..
ಏಕಾಗ್ರತೆಯನ್ನು ಸುಧಾರಿಸುತ್ತದೆ
ಉಪಾಹಾರ ಸೇವಿಸುವುದರಿಂದ ಏಕಾಗ್ರತೆ ಮತ್ತು ಅರಿವಿನ ಕಾರ್ಯ ಸುಧಾರಿಸುತ್ತದೆ ಎಂದು ಹಲವರು ಹೇಳುತ್ತಾರೆ..
ತೂಕ ನಿರ್ವಹಣೆಯನ್ನು ಬೆಂಬಲಿಸುತ್ತದೆ
ಹಲ್ಲುವುಜ್ಜುವ ಮುನ್ನ ಉಪಾಹಾರ ಸೇವಿಸುವುದರಿಂದ ಬೊಜ್ಜು ಮತ್ತು ತೂಕ ಹೆಚ್ಚಾಗುವ ಅಪಾಯ ಕಡಿಮೆಯಾಗುತ್ತದೆ. ತೂಕ ನಿರ್ವಹಣೆಯನ್ನು ಬೆಂಬಲಿಸುತ್ತದೆ..

ನೆಗೆಟಿವ್ ಪರಿಣಾಮ
ಆಸಿಡ್
ಹಲ್ಲುಜ್ಜುವ ಮೊದಲು ಸಿಟ್ರಸ್ ಹಣ್ಣುಗಳು ಅಥವಾ ಜ್ಯೂಸ್ ಗಳನ್ನು ಕುಡಿಯುವುದರಿಂದ ಹಲ್ಲಿನ ದಂತಕವಚದ ಆಸಿಡ್ ನಿಂದ ಸವೆಯುತ್ತದೆ.
ಹಲ್ಲಿನ ಕೊಳೆತ
ಬೆಳಗಿನ ಉಪಾಹಾರದ ನಂತರ ಹಲ್ಲುಜ್ಜದಿರುವುದು ಬ್ಯಾಕ್ಟೀರಿಯಾ ಮತ್ತು ಆಹಾರ ಕಣಗಳ ಸಂಗ್ರಹಕ್ಕೆ ಕಾರಣವಾಗಬಹುದು, ಇದು ಹಲ್ಲು ಕೊಳೆಯುವ ಅಪಾಯವನ್ನು ಹೆಚ್ಚಿಸುತ್ತದೆ.

ಬಾಯಿ ದುರ್ವಾಸನೆ
ತಿಂಡಿ ತಿನ್ನುವ ಮೊದಲು ಹಲ್ಲುಜ್ಜದಿದ್ದರೆ ಬಾಯಿ ದುರ್ವಾಸನೆ ಉಂಟಾಗುತ್ತದೆ.ಹಾಗಾಗಿ ಹಲ್ಲುಜ್ಜುವುದು ತುಂಬಾನೆ ಮುಖ್ಯ.