ಗ್ರೇಟರ್ ಬೆಂಗಳೂರು ಬಿಲ್ (Greater Bengaluru bill) ತಿದ್ದುಪಡಿ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸಭಾ ಸಭಾಧ್ಯಕ್ಷ ಯುಟಿ ಖಾದರ್ (UT Khadar) ಕಚೇರಿಗೆ ಗ್ರೇಟರ್ ಬೆಂಗಳೂರು ಜಂಟಿ ಸದನ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ (Rizwan harshad) ಭೇಟಿಕೊಟ್ಟಿದ್ದಾರೆ. ಈ ಬಗ್ಗೆ ಜನರಿಂದ ಅಹವಾಲು, ವಾರ್ಡ್ ವಿಂಗಡನೆ ಸೇರಿದಂತೆ ಕುರಿತು ಈ ಸಮಿತಿ ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ವರದಿ ಸಲ್ಲಿಕೆ ಮಾಡಿದೆ.

ಇದಕ್ಕೂ ಮುನ್ನಾ ಸಮಿತಿ ಕೊಠಡಿಯಲ್ಲಿ ಈ ಬಗ್ಗೆ ಸಭೆ ನಡೆಸಿದ ಸ್ವೀಕರ್, ಶಾಸಕರ ಜೊತೆಗೆ ಸಭೆ ನಡೆಸಿ ಬಳಿಕ ವರದಿಯನ್ನು ಪಡೆದಿದ್ದಾರೆ. ಈ ವೇಳೆ ಎಸ್.ಟಿ.ಸೋಮಶೇಖರ್, ಎ.ಸಿ.ಶ್ರೀನಿವಾಸ್,ಆನೇಕಲ್ ಶಾಸಕ ಶಿವಣ್ಣ,ಪ್ರಿಯಾ ಕೃಷ್ಣ ಉಪಸ್ಥಿತಿರಿದ್ದು ಯು.ಟಿ.ಖಾದರ್ ಗೆ ಸದನ ಸಮಿತಿಯಿಂದ ವರದಿ ಸಲ್ಲಿಸಿದ್ದಾರೆ.

ಆ ನಂತರ ಈ ಬಗ್ಗೆ ವಿಧಾನಸೌಧದಲ್ಲಿ ಸ್ವೀಕರ್ ಯು.ಟಿ.ಖಾದರ್ ಮಾತನಾಡಿದ್ದು, ಬಿಬಿಎಂಪಿಯ ವ್ಯಾಪ್ತಿಗೆ ಸಂಬಂಧಿಸಿದಂತೆ ಅಭಿವೃದ್ಧಿ,ಆಡಳಿತ ವ್ಯವಸ್ಥೆ ಮಾಡೋಕೆ ಕಳೆದ ಜುಲೈ ಸದನದಲ್ಲಿ ಡಿಕೆಶಿವಕುಮಾರ್ ಮಂಡನೆ ಮಾಡಿದ್ರು. ಇದರ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕು ಅಂತ ವಿರೋಧ ಪಕ್ಷಗಳು ಜಂಟಿ ಸದಸ ಸಮಿತಿ ಮನವಿ ಬಂದಿತ್ತು.
ಹೀಗಾಗಿ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಿದ್ವಿ.ಕೆಲ ಶಾಸಕರನ್ನ ಸಮಿತಿಯಲ್ಲಿ ನೇಮಕ ಮಾಡಲಾಗುತ್ತೆ.ಇದನ್ನ ಸಮಿತಿ ವರದಿ ನೀಡಿದೆ, ಮುಂದಿನ ಅಧಿವೇಶನದಲ್ಲಿ ವರದಿಯನ್ನು ಮಂಡನೆ ಮಾಡ್ತೀನಿ, ಯಾವಾಗ ಚರ್ಚೆ ಮಾಡಬೇಕು ಅಂತ ಬಿಸಿಎ ಸಭೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.