ಬೆಂಗಳೂರು ಅರಮನೆ ಮೈದಾನದ (Bangalore palace ground) ಜಮೀನಿಗೆ ಟಿಡಿಆರ್ (TDR) ನೀಡುವ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ (Supreme court) ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿರುವ ಕಾರಣ ಇಂದು ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ.

೩೧೦೦ ಕೋಟಿ ರೂಪಾಯಿ ಟಿಡಿಆರ್ ನೀಡುವುದು ಅಸಾಧ್ಯ. ಹೀಗಾಗೋ ಸರ್ಕಾರದ ವತಿಯಿಂದ ಕಾನೂನು ಹೋರಾಟ ತೀವ್ರಗೊಳಿಸಲು ತಿರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ವಕೀಲರ ಜೊತೆಗೆ ಚರ್ಚೆ ಮಾಡಿ ಮುಂದಿನ ಕ್ರಮದ ಬಗ್ಗೆ ಯೋಚಿಸಲು ಕ್ಯಾಬಿನೆಟ್ ತೀರ್ಮಾನಿಸಿದೆ. ಈ ಕಾನೂನು ಹೋರಾಟಕ್ಕೆ ಸಂಪುಟ ಸಭೆಯಲ್ಲಿ ಸಹಮತ ದೊರೆತಿದೆ.
ಕಳೆದ ತಿಂಗಳಿನಿಂದ ಸಾಂಸ್ಕೃತಿಕ ನಗರಿ ಮೈಸೂರು ಒಡೆಯರ್ ರಾಜಮನೆತನ (Mysuru odeyar) ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮತ್ತೊಂದು ಹಂತಕ್ಕೆ ತಲುಪಿದೆ. ಅರಮನೆ ಭೂಮಿಗೆ ಟಿಡಿಆರ್ (TDR) ನೀಡುವ ವಿಚಾರದಲ್ಲಿ ತಿಕ್ಕಾಟ ನಡೆದಿದೆ.

ಹೀಗಾಗಿ ಅರಮನೆ ಮತ್ತು ಸರ್ಕಾರದ ನಡುವಿನ ಕಾನೂನು ಸಮರ ಹಿನ್ನೆಲೆ ಸುಪ್ರೀಂಕೋರ್ಟ್‌ನಲ್ಲಿ (Supreme court) ಅಫಿಡವಿಟ್ ಸಲ್ಲಿಸಲಾಗಿತ್ತು.
ಬಳ್ಳಾರಿ ಹಾಗೂ ಜಯಮಹಲ್ ರಸ್ತೆ (Bellary & Jayamahal road) ಅಗಲೀಕರಣಕ್ಕಾಗಿ ಅರಮನೆ ಮೈದಾನದ 15.7 ಎಕರೆ ಜಾಗ ಬಳಕೆಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಆಗ ಜಾಗ ಬಳಕೆಗೆ ಸುಮಾರು 2011 ಕೋಟಿ ರೂ. ಟಿಡಿಆರ್ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು.