ಕೂದಲ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾನೇ ಮುಖ್ಯ ಅದರಲ್ಲೂ ಕೆಲವರು ಕೂದಲಂತೂ ತುಂಬಾನೆ ರಫ್ ಆಗಿರುತ್ತದೆ.. ಕೂದಲು ಒರಟಾಗಿದ್ದಾಗ ಸಿಕ್ಕು ಜಾಸ್ತಿ ಆಗಿರುತ್ತದೆ ಹಾಗೂ ಉದುರುವ ಸಮಸ್ಯೆ ಕೂಡ ಎದುರಾಗುತ್ತದೆ. ಇನ್ನು ಕೆಲವರಿಗೆ ದಟ್ಟವಾದ ಉದ್ದವಾದ ಕೂದಲು ಇರುತ್ತದೆ. ಆದ್ರೂ ರಫ್ ಇರುತ್ತದೆ. ಈ ಕೂದಲ ಆರೋಗ್ಯಕ್ಕಾಗಿ ನಾವು ಸಾಕಷ್ಟು ಪ್ರಯತ್ನವನ್ನ ಮಾಡ್ತೀವಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬಳಸುವುದರ ಜೊತೆಗೆ ಹೋಂ ರೆಮಿಡೀಸ್ ಅನ್ನ ಕೂಡ ಮಾಡಿಕೊಳ್ಳುತ್ತೇವೆ. ಆದರೆ ಯಾವ ಕಾರಣಕ್ಕೆ ಕೂದಲು ಒರಟಾಗುತ್ತದೆ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ ಆ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ.

ಅತಿಯಾಗಿ ಹೇರ್ ವಾಶ್
ಕೆಲವರಂತೂ ಪ್ರತಿ ದಿನ ಹೇರ್ ವಾಷನ ಮಾಡ್ತಾರೆ. ಇದರಿಂದ ಕೂದಲಲ್ಲಿ ಇರುವಂತಹ ನ್ಯಾಚುರಲ್ ಆಯಿಲ್ ಕಡಿಮೆಯಾಗುತ್ತದೆ. ಹಾಗೂ ಕೂದಲು ರಫ್ ಆಗುತ್ತದೆ. ಇನ್ನು ಮುಖ್ಯವಾಗಿ ತಲೆಗೆ ಸ್ನಾನ ಮಾಡುವ ಮುನ್ನ ಆಯಿಲ್ ಹಚ್ಚಿ ನಂತರ ಸ್ನಾನ ಮಾಡುವುದರಿಂದ ಒರಟು ಕಡಿಮೆಯಾಗುತ್ತದೆ.
ಹೇರ್ ಪ್ರೊಡಕ್ಟ್ಸ್ ಬಳಸುವುದು
ಸಲ್ಫೇಟ್‌ಗಳು, ಪ್ಯಾರಾಬೆನ್‌ಗಳು ಅಥವಾ ಸಿಲಿಕೋನ್‌ಗಳನ್ನು ಒಳಗೊಂಡಿರುವ ಉತ್ಪನ್ನಗಳು ಕೂದಲಿಗೆ ಬಳಸುವುದರಿಂದ ಕೂದಲು ಡ್ರೈ ಮತ್ತು ಒರಟಾಗಿಸಬಹುದು.
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು
ಯುವಿ ಕಿರಣಗಳು ಕೂದಲನ್ನು ಹಾನಿಗೊಳಿಸಬಹುದು, ಇದು ಒರಟಾಗಲು ಕಾರಣವಾಗಬಹುದು.ಹೆಚ್ಚು ಜನ ಫೀಲ್ಡ್ ವರ್ಕ್ ಮಾಡುತ್ತಾರೆ.ಆದ್ರೆ ಸರಿಯಾದ ಕಾಳಜಿಯನ್ನು ವಹಿಸುವುದಿಲ್ಲ. ಹಾಗೂಅತಿಯಾದ ಗಾಳಿ ಇಂದಾಗಿ ಕೂದಲಿನ ನೈಸರ್ಗಿಕ ತೇವಾಂಶವನ್ನು ಕಸಿದುಕೊಂಡು ಒರಟಾಗಲು ಕಾರಣವಾಗಬಹುದು.

ಥೈರಾಯಿಡ್ ಸಮಸ್ಯೆ
ಹೆಚ್ಚು ಜನಕ್ಕೆ ಥೈರೊಯ್ಡ್ ಸಮಸ್ಯೆ ಕಾಡುತ್ತಿದೆ ಥೈರೊಯ್ಡ್ ಇದ್ದವರು ಅತಿಯಾಗಿ ದಪ್ಪವಾಗುತ್ತಾರೆ. ತುಂಬಾನೇ ವೀಕ್ ಆಗುತ್ತಾರೆ. ಇದರ ಜೊತೆಗೆ ಕೂದಲ ಆರೋಗ್ಯ ಹಾಗೂ ಚರ್ಮದ ಆರೋಗ್ಯವು ಕೂಡ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಕೂದಲು ಒರಟಾಗುವುದು ಸಹಜ.
ಸೇವಿಸುವ ಆಹಾರ
ನಾವು ಸೇವಿಸುವ ಆಹಾರದಲ್ಲಿ ಒಮೇಗಾ ಫ್ಯಾಟಿ ಆಸಿಡ್ ಕಡಿಮೆಯಾದಾಗ ಅಥವಾ ವಿಟಮಿನ್ ಇ ಕೊರತೆ ಕಂಡಾಗ ಕೂದಲು ಡ್ರೈ ಆಗುತ್ತದೆ. ಜೊತೆಗೆ ದೇಹದ ಚರ್ಮ ಮಾತ್ರವಲ್ಲದೆ ಕೂದಲು ಕೂಡ ಒರಟಾಗುತ್ತದೆ.











