
ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರದ ಆಡಳಿತ ಅಂತ್ಯ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಾರ್ಟಿ ‘ಶೀಶ್ ಮಹಲ್’ ಬಗ್ಗೆ ತನಿಖೆಗೆ ಆದೇಶ ಮಾಡಿದೆ. ಅರವಿಂದ್ ಕೇಜ್ರಿವಾಲ್ ಅವರ ಅವಧಿಯಲ್ಲಿ ಸಿಎಂ ನಿವಾಸ ಶ್ರೀಶ್ ಮಹಲ್ ನವೀಕರಣದ ಬಗ್ಗೆ ಬಿಜೆಪಿ-ಆಪ್ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು..

ಐಷಾರಾಮಿ ಜೀವನಕ್ಕಾಗಿ ಸಿಎಂ ಆಗಿದ್ದ ವೇಳೆ ಅರವಿಂದ್ ಕೇಜ್ರಿವಾಲ್ ‘ಶೀಶ್ ಮಹಲ್’ನ ಬಂಗಲೆಯಾಗಿ ಮಾರ್ಪಾಡು ಮಾಡಿಕೊಂಡಿದ್ದರು. ನವೀಕರಣದ ಹೆಸರಲ್ಲಿ ಕೋಟಿ ಕೋಟಿ ರೂಪಾಯಿ ಹಗರಣ ನಡೆಸಿದ್ದಾರೆಂದು ಆರೋಪ ಮಾಡಲಾಗಿತ್ತು.. ಇದೀಗ ವಿವಾದಿತ ಶೀಶ್ ಮಹಲ್‌ನ ನವೀಕರಣದ ಬಗ್ಗೆ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ..
ದೆಹಲಿಯ 6 ಫ್ಲ್ಯಾಗ್‌ಸ್ಟಾಫ್ ರಸ್ತೆಯ ದೆಹಲಿ ಸಿಎಂ ನಿವಾಸ, ಸುಮಾರು 8 ಎಕರೆಯಷ್ಟು ವಿಸ್ತೀರ್ಣದಲ್ಲಿದೆ. ಅರಮನೆ ಹಾಗೆ ಇರುವ ಶೀಶ್ ಮಹಲ್ನಲ್ಲಿ 2015 ರಿಂದ 2024ರ ಅಕ್ಟೋಬರ್‌ವರೆಗೆ ಅರವಿಂದ್ ಕೇಜ್ರಿವಾಲ್ ವಾಸವಾಗಿದ್ರು.. ಈ ಕಟ್ಟಡದ ನವೀಕರಣಕ್ಕಾಗಿ ಸರ್ಕಾರದ ಹಣವನ್ನ ಬಳಸಲಾಗಿದೆ. ಶೀಶ್ ಮಹಲ್ ಮಾಡಿಕೊಂಡಿದ್ದಾರೆ ಅಂತ ಕಾಂಗ್ರೆಸ್-ಬಿಜೆಪಿ ಆರೋಪಿಸಿತ್ತು.. ಬಿಜೆಪಿ ನಾಯಕ ವಿಜೇಂದರ್ ಗುಪ್ತಾ, ಲೆಫ್ಟಿನೆಂಟ್ ಜನರಲ್ಗೂ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ..

ರಾಜ್‌ಪುರ ರಸ್ತೆಯಲ್ಲಿರುವ ಫ್ಲಾಟ್ ಸಂಖ್ಯೆ 45 ಮತ್ತು 47, ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿನ 2 ಸರ್ಕಾರಿ ಬಂಗಲೆಗಳನ್ನು ಕೆಡವಿ ಹೊಸ ನಿವಾಸ ಕಟ್ಟಿರುವ ಆರೋಪ ಇದೆ.. ಅಲ್ಲದೇ ನೆಲದ ವ್ಯಾಪ್ತಿ ಮತ್ತು ವಿಸ್ತೀರ್ಣ ಅನುಪಾತ ಮಾನದಂಡಗಳನ್ನು ಉಲ್ಲಂಘಿಸಿದೆ.. ಸರಿಯಾದ ವಿನ್ಯಾಸ ಯೋಜನೆ ಅನುಮೋದನೆ ಇಲ್ಲದೆ ಕಟ್ಟಡ ನಿರ್ಮಿಸಲಾಗಿದೆ.. ಅಲ್ಲದೇ ನವೀಕರಣಕ್ಕಾಗಿ ಸರ್ಕಾರದ ಕೋಟಿ ಕೋಟಿ ಹಣವನ್ನ ಕೇಜ್ರಿವಾಲ್ ಬಳಸಿದ್ದಾರೆ.. ಈ ಬಗ್ಗೆ ತನಿಖೆ ಆಗ್ಬೇಕು ಅಂತ ಬಿಜೆಪಿ ದೂರು ನೀಡಿದೆ.

ಹಿಂದಿನ ಸರ್ಕಾರದ ದುಷ್ಕೃತ್ಯಗಳು ಕೊನೆಗೊಳ್ಳಲಿವೆ ಎಂದಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ, ಮಾಡಿರುವ ತಪ್ಪಿಗೆ ಅನುಗುಣವಾಗಿ ಶಿಕ್ಷೆಗಳನ್ನು ನೀಡಲಾಗುವುದು. ಅದು ಶೀಶ್ ಮಹಲ್ ಹಗರಣ ಇರಲಿ.. ಮದ್ಯ, ಜಲ ಮಂಡಳಿ, ಪ್ಯಾನಿಕ್ ಬಟನ್ ಹಗರಣ, ಪಡಿತರ ಚೀಟಿ ಹಗರಣ, ಮೊಹಲ್ಲಾ ಕ್ಲಿನಿಕ್ ಹಗರಣ ಸೇರಿದಂತೆ ದೆಹಲಿಯನ್ನು ಲೂಟಿ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷೆಯಾಗುತ್ತದೆ. ಯಾರನ್ನೂ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.