
ಅಮೆರಿಕದಲ್ಲಿ ಅಕ್ರಮ ವಲಸಿಗರ ವಿರುದ್ಧ ಡೊನಾಲ್ಡ್ ಟ್ರಂಪ್ ಸರ್ಕಾರ ಸಮರ ಸಾರಿದ್ದು, ಮೊದಲ ಹಂತದ 104 ಜನರನ್ನು ಅಮೆರಿಕದಿಂದ ಹೊರ ಹಾಕಿದ್ದ ಟ್ರಂಪ್, ಇದೀಗ 2ನೇ ಹಂತದಲ್ಲಿ 120 ಜನರನ್ನು ಅಕ್ರಮ ವಲಸಿಗರು ಎಂದು ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ಫೆಬ್ರವರಿ 12 ರಿಂದ 14 ತನಕ ಅಮೆರಿಕ ಪ್ರವಾಸ ಕೈಗೊಂಡಿದ್ದ, ಮಾನವ ಕಳ್ಳ ಸಾಗಣೆ ಎಂದು ದೊಡ್ಡ ಪಿಡುಗು ಎಂದಿದ್ದರು. ಇದೀಗ ನಿನ್ನೆ ರಾತ್ರಿ ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣಕ್ಕೆ ಎಲ್ಲರನ್ನು ಕರೆತಂದು ಬಿಡಲಾಗಿದೆ.
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿದ್ದಾರೆ.. ದೇಶದೆಲ್ಲೆಡೆ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನ ಹುಡುಕಿ ಹುಡುಕಿ ಅವರವರ ದೇಶಕ್ಕೆ ಗಡಿಪಾರು ಮಾಡುವ ಕೆಲಸ ಮಾಡುತ್ತಿದ್ದಾರೆ ಅಮೆರಿಕದ ಅಧಿಕಾರಿಗಳು. ಫೆಬ್ರವರಿ 5ರಂದು 104 ಅಕ್ರಮ ಭಾರತೀಯ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಅಕ್ರಮ ಭಾರತೀಯ ವಲಸಿಗರ 2ನೇ ತಂಡವನ್ನ ಹೊತ್ತ ಅಮೆರಿಕ ಸೇನಾ ವಿಮಾನ ಭಾರತಕ್ಕೆ ಬಂದಿಳಿದಿದೆ.

ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ ಹಾಗು ಯಾವುದೇ ದಾಖಲೆ ಇಲ್ಲದೇ ಅಮೆರಿಕದಲ್ಲಿ ನೆಲೆಸಿದ್ದ 120 ಭಾರತೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ.. ಪಂಜಾಬ್‌ನ ಅಮೃತಸರದ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಿದೆ. ಅದರಲ್ಲಿ ಪಂಜಾಬ್‌ನ 67 ಜನ, ಹರಿಯಾಣದ 33, ಗುಜರಾತಿನ 8, ಉತ್ತರಪ್ರದೇಶದ ಮೂವರು, ಮಹಾರಾಷ್ಟ್ರ, ರಾಜಸ್ಥಾನ, ಗೋವಾದ ತಲಾ ಇಬ್ಬರು ಹಾಗೂ ಹಿಮಾಚಲಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ತಲಾ ಒಬ್ಬರು ಬಂದಿಳಿದಿದ್ದಾರೆ.. ಇನ್ನಷ್ಟು ಅಕ್ರಮ ಭಾರತೀಯರ ವಲಸಿಗರನ್ನು ಹೊತ್ತ ಇನ್ನೊಂದು ವಿಮಾನ ಭಾನುವಾರ ರಾತ್ರಿ ಭಾರತಕ್ಕೆ ಬಂದಿಳಿಯುವ ಸಾಧ್ಯತೆ ಇದೆ..
2 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಷ್ಟೇ ಭಾರತಕ್ಕೆ ವಾಪಸ್ ಆಗಿದ್ದರು.. ಅಮೆರಿಕ ಭೇಟಿ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಭಾರತೀಯ ವಲಸಿಗರ ಕುರಿತು ಚರ್ಚಿಸಿದ್ರು.. ಈ ಬೆನ್ನಲೇ ನಿನ್ನೆ ರಾತ್ರಿ 120 ಅಕ್ರಮ ಭಾರತೀಯ ವಲಸಿಗರನ್ನ ಅಮೆರಿಕ ಗಡಿಪಾರು ಮಾಡಿದೆ. ಮಿಸ್ಟರ್ ಪ್ರೈಂ ಮಿನಿಸ್ಟರ್ ಯೂ ಆರ್ ಗ್ರೇಟ್ ಎಂದು ಬರೆದಿದ್ದ ವಿಶೇಷ ಗಿಫ್ಟ್ ನೀಡಿದ್ದ ಟ್ರಂಪ್ ಭಾರತೀಯರನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕುತ್ತಿರುವುದನ್ನು ತಡೆಯಲಿಲ್ಲವೇ ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ.

ಅಮೆರಿಕದಿಂದ ಗಡಿಪಾರಾಗಿ ಬರುತ್ತಿರುವ ಅಕ್ರಮ ಭಾರತೀಯ ವಲಿಸಿಗರನ್ನ ಪಂಜಾಬ್‌ನ ಅಮೃತಸರ ಏರ್‌ಪೋರ್ಟ್‌ನಲ್ಲಿ ತಂದು ಇಳಿಸುವ ಕೇಂದ್ರದ ನಿರ್ಧಾರಕ್ಕೆ ಪಂಜಾಬ್ ಸಿಎಂ ಭಗವಂತ ಮಾನ್ ಸಿಂಗ್ ಕಿಡಿಕಾರಿದ್ದಾರೆ. ಪಂಜಾಬಿಗಳು ಮಾತ್ರ ಅಕ್ರಮ ವಲಸಿಗರೆಂದು ಬಿಂಬಿಸುವ ಉದ್ದೇಶ ಇದೆ ಎನಿಸುತ್ತದೆ.. ಅದೇ ಕಾರಣಕ್ಕೆ ಅಕ್ರಮ ವಲಸಿಗರನ್ನು ಪಂಜಾಬ್‌ನ ಅಮೃತಸರ ಕರೆತರಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.. ಈ ಬಗ್ಗೆ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹ ಮಾಡಿದ್ದರು.

ಫೆಬ್ರವರಿ 05ರಂದು ಗಡಿಪಾರು ಮಾಡಿದ್ದ ವೇಳೆ ಅಕ್ರಮ ವಲಸಿಗರನ್ನು ಕೈಕಾಲಿಗೆ ಚೈನ್ ಹಾಕಿಕೊಂಡು ಕುರಿಗಳಂತೆ ವಿಮಾನದಲ್ಲಿ ಕರೆತಂದು ಭಾರತದಲ್ಲಿ ಇಳಿಸಲಾಗಿತ್ತು.. ಅಮೆರಿಕ ಸರ್ಕಾರದ ಹೀನಾ ನಡೆಯನ್ನ ಭಾರತ ಸರ್ಕಾರ ಖಂಡಿಸಿತ್ತು.. ನಿನ್ನೆ ಭಾರತಕ್ಕೆ ಬಂದಿಳಿದವರನ್ನು ಅಮೆರಿಕ ಅಷ್ಟೊಂದು ಕ್ರೂರವಾಗಿ ನಡೆಸಿಕೊಳ್ಳಲಿಲ್ಲ ಅನ್ನೋದು ನೆಮ್ಮದಿಯ ಸಂಗತಿ. ಫೆಬ್ರವರಿ ತಿಂಗಳಲ್ಲೇ ಹಂತ ಹಂತವಾಗಿ 223 ಅಕ್ರಮ ಭಾರತೀಯ ವಲಸಿಗರನ್ನ ಅಮೆರಿಕ ಗಡಿಪಾರು ಮಾಡಿದೆ.. ಕಾನೂನು ಪ್ರಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರನ್ನ ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.
