
ದಾವಣಗೆರೆ: ದಾವಣಗೆರೆ ಹಂದಿಗಳು ಎಂದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಮಾಜಿ ಸಚಿವ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿ ಎರಡು ಹಂದಿಗಳು ಇವೆ ಎಂದು ಕಿಡಿಕಾರಿದ್ದ ಯತ್ನಾಳ್‌ಗೆ ಡಿಚ್ಚಿ ಕೊಟ್ಟಿದ್ದು, ಯತ್ನಾಳ್ ಒಂದು ರೀತಿಯಲ್ಲಿ ದೇವರಿಗೆ ಬಿಟ್ಟಿರುವ ಕೋಣ ಎಂದಿದ್ದಾರೆ. ಕೋಣವನ್ನು ನುಣ್ಣಗೆ ಹರಳೆಣ್ಣೆ ಹಾಕಿ ಮಸಾಜ್ ಮಾಡಿ, ಸುಣ್ಣದ ನೀರು ಕುಡಿಸಿ ಬಲಿ ಕೊಡುತ್ತಾರೆ ಎಂದಿದ್ದಾರೆ.
ಯತ್ನಾಳ್‌ಗೆ ಕೋಣ ಎಂದಿರುವ ಎಂ.ಪಿ ರೇಣುಕಾಚಾರ್ಯ, ಹತ್ತರಿಂದ ಹದಿನೈದು ವರ್ಷ ಸಾಕಿ ಬೆಳಗಿನ ಜಾವ ದೇವರ ಮುಂದೆ ಬಲಿ ಕೊಡುತ್ತಾರೆ. ಕಾಂಗ್ರೆಸ್‌ನವರೆ ಬಲಿ ಕೊಡ್ತಾರೆ ಎಂದು ಯತ್ನಾಳ್ ಕಾಲೇಳೆದಿದ್ದಾರೆ ರೇಣುಕಾಚಾರ್ಯ. ದಾವಣಗೆರೆ ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸೂರ್ಯ ಚಂದ್ರ ಇರೋದು ಎಷ್ಡು ಸತ್ಯವೋ ವಿಜಯೇಂದ್ರರ ಅವರು ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದು ಅಷ್ಟೇ ಸತ್ಯ ಎಂದಿದ್ದು, ದುಷ್ಟಶಕ್ತಿಗಳು ಎಷ್ಟೇ ಪ್ರಯತ್ನ ಮಾಡಿದರೂ ಅವರನ್ನು ಕೆಳಗಿಸಲು, ತಡೆಯಲು ಸಾಧ್ಯವಿಲ್ಲ. ನಮ್ಮ ಬಗ್ಗೆ ಮಹಾನುಭಾವ ಏನೋನೋ ಮಾತಾಡ್ತಾರೆ. ನೀನು ಜೆಡಿಎಸ್ ಸೇರಿ ಕಬಾಬ್, ಬಿರಿಯಾನಿ ತಿನ್ನುವಾಗ ಎಲ್ಲಿ ಹೋಗಿದ್ದಪ್ಪ ಹಿಂದೂ ಹುಲಿ ಎಂದಿದ್ದಾರೆ.

ಜೆಡಿಎಸ್‌ಗೆ ಹೋಗಿದ್ದಲ್ಲ ನಿನಗೆ ನಾಚಿಕೆ ಆಗೋದಿಲ್ವಾ..? ಎಂದಿರುವ ರೇಣುಕಾಚಾರ್ಯ, ಈಗ ಬಿಜೆಪಿ ಪಕ್ಷ ಸಿದ್ದಾಂತದ ಬಗ್ಗೆ ಮಾತಾಡ್ತಿಯಾ..? ಮೋದಿರವರ ಬಗ್ಗೆ ಮಾತಾಡ್ತಿಯಲ್ಲ..? ನೀನು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತೀಯಾ..? ನೀನು ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿನ್ನ ಮಕ್ಕಳನ್ನು ಕರೆದುಕೊಂಡು ವೈಭವೀಕರಿಸಿದ್ದೀಯಾ..? ಇದು ಕುಟುಂಬ ರಾಜಕಾರಣ ಅಲ್ವಾ..? ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನವರು ಕುಟುಂಬ ರಾಜಕಾರಣ ಮಾಡಿಲ್ಲ. ರಾಘವೇಂದ್ರ ಸಿಂಡಿಕೇಟ್ ಮೆಂಬರ್ ಆಗಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ನಿನಗೆ ವಿಜಯಪುರದಲ್ಲಿ ಟಿಕೆಟ್ ಕೊಡ್ಲಿಲ್ಲ ಎಂದರೆ ನೀನು ಕೇರ್ ಅಫ್ ಪುಟ್ಬಾತ್ ಆಗ್ತಾ ಇದ್ದೆ. ಬಬಲೇಶ್ವರ ಕ್ಷೇತ್ರದಲ್ಲಿ ಹೊಂದಾಣೆಕೆ ಮಾಡಿಕೊಂಡು ಶಾಸಕನಾಗಿದ್ದು ನೀನು. ನೀನು ನಮಗೆ ಹಂದಿಗೆ ಹೋಲಿಸಿದ್ದೀಯಾ. ಹಂದಿ ಎಂದರೆ ವರಹ, ವಿಷ್ಣುವಿನ ಅವತಾರ. ನಮ್ಮನ್ನು ದೇವರಿಗೆ ಹೋಲಿಸಿದ್ದೀಯಾ ನಿನಗೆ ಧನ್ಯವಾದಗಳು. ನಿನ್ನ ಜೊತೆ ಮೂರ್ಖರ ತಂಡ ಇದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಮಠಾಧೀಶರಿಗೆ ನಿಂದನೆ ಮಾಡಿ ಅಪಮಾನ ಮಾಡ್ತಿಯಾ, ನೀನು ಪೇಮೆಂಟ್ ಗಿರಾಕಿ. ಹಳ್ಳಿಗಳಲ್ಲಿ ಮಾರಿ ಕೋಣವನ್ನು ಚನ್ನಾಗಿ ಮೇಯಿಸಿ ಮಾರಿಗೆ ಬಲಿ ಕೊಡ್ತಾರೆ. ಬಲಿ ಕೊಡುವ ಮುನ್ನ ಎಣ್ಣೆ ಹಾಕಿ ಮಸಾಜ್ ಮಾಡಿ ಉಪ್ಪಿನ ನೀರು ಕುಡಿಸುತ್ತಾರೆ. ಅದೇ ರೀತಿ ಮಾರಿ ಕೋಣದ ರೀತಿ ನಿನ್ನನ್ನು ಬಲಿ ಕೊಡ್ತಾರೆ. ಸೋತು ಸುಣ್ಣವಾದವರಿಗೆ ನೀನು ದಂಡನಾಯಕ. ಫೆಬ್ರವರಿ 12 ಕ್ಕೆ ಬೆಂಗಳೂರಿನಲ್ಲಿ ಸಭೆ ಮಾತನಾಡುತ್ತೇವೆ. ನಾವು ಮೌನವಾಗಿದ್ದರೆ ಅದು ಈಗ ಸುಮ್ಮನೆ ಇರೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.