
ದಾವಣಗೆರೆ: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನರೇಂದ್ರ ಮೋದಿಯವರ ದೂರದೃಷ್ಟಿ ಚಿಂತನೆಯಿಂದ ದೆಹಲಿ ಗೆದ್ದಿದ್ದೇವೆ ಎಂದಿದ್ದು, ನನಗೂ ದೆಹಲಿಯಲ್ಲಿ ಒಂದು ಕ್ಷೇತ್ರ ಕೊಟ್ಟಿದ್ದರು. ಬೆಂಗಳೂರು ರೀತಿ ರಾಜಕಾರಣ ಮಾಡಿ ಆ ಕ್ಷೇತ್ರ ಗೆದ್ದಿದ್ದೇವೆ ಎಂದಿದ್ದಾರೆ.
ದೆಹಲಿ ಜನ ತೀರ್ಮಾನ ಮಾಡಿ ಬಿಜೆಪಿ ಗೆಲ್ಲಿಸಿದ್ದಾರೆ. ಇವಿಎಂ ಬಗ್ಗೆ ಆರೋಪ ಮಾಡ್ತಿದ್ದಾರೆ ಎನ್ನುವ ಮಾತಿಗೆ ತಿರುಗೇಟು ನೀಡಿದ್ದು, ಕೈಲಾಗದವರು ಮೈ ಪರಚಿಕೊಂಡಂತೆ ಆಗಿದೆ ಎಂದಿದ್ದಾರೆ. ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಅನ್ನೋ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್‌ನವರು ಕಣ್ಣಿನ ಪೊರೆ ತೆಗೆದು ನೋಡಬೇಕಿದೆ. ರಾಜ್ಯಕ್ಕೆ ಅನೇಕ ರೈಲ್ವೆ ಯೋಜನೆ ನೀಡಲಾಗಿದೆ. ಈ ಭಾರೀ ಬಜೆಟ್‌ನಲ್ಲಿ ಅತೀ ಹೆಚ್ಚು ಹಣ ನೀಡಲಾಗಿದೆ ಎಂದಿದ್ದಾರೆ.

ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗ ಮುಗಿಸುತ್ತೇವೆ. ನರೇಂದ್ರ ಮೋದಿಯವರು ಕಾರ್ಯವೈಖರಿ ಜನಕ್ಕೆ ಇಷ್ಟ ಆಗಿದೆ.. ರಾಜ್ಯಾಧ್ಯಕ್ಷರನ್ನ ಮುಂದುವರಿಸೋದು ಬಿಡೋದು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು ಎಂದಿರುವ ಸೋಮಣ್ಣ, ರಾಜ್ಯ ಬಿಜೆಪಿ ಗೊಂದಲ ನಾಲ್ಕು ಗೋಡೆ ಮಧ್ಯ ಬಗೆಹರಿಸುತ್ತಾರೆ. ದೆಹಲಿಯಲ್ಲಿ ನನಗೊಂದು ಮನೆ ಕೊಟ್ಟಿದ್ದಾರೆ ಅದನ್ನ ಪೂಜೆ ಮಾಡೋದು ಬೇಡ್ವಾ..? ನೀವೆಲ್ಲಾ ಉಪ್ಪು ಕಾರ ಹಾಕಿ ಬಂಡಾಯ ಸಭೆ ಅಂದ್ರೆ ಹೇಗೆ..? ಎಲ್ಲ NDA 19 ಸಂಸದರನ್ನ ಕರೆದಿದ್ದೇನೆ ನೆಂಟರನ್ನ ಕರೆದಿಲ್ಲ ಎಂದಿದ್ದಾರೆ.
