ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ವಿಕಾಸಸೌಧದಲ್ಲಿ ಲಕ್ಷ್ಮಣ ಸವದಿ ಮಾತನಾಡಿದ್ದಾರೆ.ನಮ್ಮ ಯಾವ ಶಾಸಕರು, ಮಂತ್ರಿಗಳಿಗೂ ಚಿಂತೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಮೊದಲನೆಯದಾಗಿ ಇದರ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ.ನಮ್ಮ ರಾಷ್ಟ್ರೀಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಅಂತ ಹೇಳಿದ್ದಾರೆ. ಹಾಗೆ ಇದ್ದಾಗ ನಾನು ಏನು ಹೇಳೋಕೆ ಆಗುತ್ತೆ ಎಂದಿದ್ದಾರೆ.
ಇನ್ನು ಸಿಎಂ ಹುದ್ದೆಗೆ ಮ್ಯೂಸಿಕಲ್ ಚೇರ್ ಆರಂಭವಾಗಿದೆ ಎಂಬ ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ, ಈಗ ಪಾಪ ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ.ಎನಾದ್ರು ಪ್ರತಿನಿತ್ಯ ಹೇಳಬೇಕು,ಎನಾದ್ರೂ ಹೇಳ್ದೆ ಇದ್ರೆ ಮೇಲಿನವರು ಮಲ್ಕೊಂಡು ಇದ್ದೀಯಾ ಅಂತ ಕೇಳ್ತಾರೆ, ಅದಕ್ಕೆ ಸ್ವಲ ಸುದ್ದಿಯಲ್ಲಿ ಇರಬೇಕು ಅಂತ ಇಂತಹವನ್ನ ಹೇಳ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಸಮಯದಲ್ಲಿ ಅಶೋಕ್ ಅವರಿಗೆ ನಾನು ಒಂದು ಹೇಳ್ತೀನಿ.ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನ ನೋಡ್ಕೋಳ್ಳಿ. ಬೇರೆ ತಟ್ಟೆಯಲ್ಲಿ ನೊಣ ಬಿದ್ದಿದೆ, ಅದರ ಬಗ್ಗೆ ಯಾಕೆ ಚಿಂತೆ..? ನಿಮ್ಮ ಪಕ್ಷದಲ್ಲಿ ನೋಡಿಕೊಳ್ಳಿ. ಬೇರೆಯವರು ಬಗ್ಗೆ ಮಾತಾಡೋಕೆ ನಿಮಗೆ ಏನು ನೈತಿಕತೆ ಇದೆ ಎಂದು ಟೀಕಿಸಿದ್ದಾರೆ.