ಕೆಲವರು ಬೆಳಗಿನ ಸಂದರ್ಭದಲ್ಲಿ ಹಸಿ ಮೊಟ್ಟೆಯನ್ನ ಸೇವಿಸ್ತಾರೆ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂಬ ಮಾತು ಕೂಡ ಇದೆ . ಇನ್ನು ನೀನು ದಪ್ಪ ಆಗಬೇಕು ಅಂದ್ರೆ ಹಸಿ ಮೊಟ್ಟೆಯನ್ನ ಸೇವಿಸಬೇಕು ಅಂತ ಸಜೆಶನ್ ಕೂಡ ಕೊಡುತ್ತಾರೆ. ಹಸಿ ಮೊಟ್ಟೆ ನಾ ಸೇವಿಸುವುದರಿಂದ ಆರೋಗ್ಯಕ್ಕೆ ಲಾಭಗಳೆಷ್ಟಿದೆಯೋ ಒಂದಿಷ್ಟು ಸಮಸ್ಯೆಗಳು ಕೂಡ ಎದುರಾಗಬಹುದು ಆ ಬಗ್ಗೆ ಇಲ್ಲಿದೆ ಮಾಹಿತಿ

ಹಸಿ ಮೊಟ್ಟೆಯಿಂದ ಆರೋಗ್ಯ ಪ್ರಯೋಜನಗಳು
ಪ್ರೋಟಿನ್ ಅಂಶ
ಹಸಿ ಮೊಟ್ಟೆಯಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ ಹಾಗಾಗಿ ವರ್ಕೌಟ್ ಮಾಡುವವರು ಅಥವಾ ದಪ್ಪ ಆಗಬೇಕು ಎಂದು ಬಯಸುವವರು ಹಸಿ ಮೊಟ್ಟೆಯನ್ನು ಸೇವಿಸುವುದು ಉತ್ತಮ. ಅದ್ರಲ್ಲೂ 9 ರೀತಿಯ ಅಮೈನೊ ಆಸಿಡ್ ಕೂಡ ಇದರಲ್ಲಿ ಇರುತ್ತದೆ.
ಉತ್ತಮವಾದ ಕೋಲೀನ್ ಅಂಶ
ಹಸಿ ಮೊಟ್ಟೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವಂತಹ ಕೋಲಿನ್ ಅಂಶವಿರುತ್ತದೆ. ಇದು ಬ್ರೈನ್ ಫಂಕ್ಷನ್ ಗೆ ಮೆಟಬಾಲಿಸಂ ಹಾಗೂ ಲಿವರ್ ಹೆಲ್ತಿಗೆ ತುಂಬಾನೆ ಒಳ್ಳೆಯದು.

ವಿಟಮಿನ್ ಹಾಗೂ ಮಿನರಲ್ ಅಂಶ
ಹಸಿ ಮೊಟ್ಟೆಗಳು ವಿಟಮಿನ್ ಡಿ, ಬಿ 12, ರಿಬೋಫ್ಲಾವಿನ್ ಮತ್ತು ಸೆಲೆನಿಯಮ್ ಸೇರಿದಂತೆ ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.ಆರೋಗ್ಯ ಲಾಭಗಳನ್ನು ಉತ್ತಮವಾಗಿ ನೀಡುತ್ತದೆ.
ಹೃದಯದ ಆರೋಗ್ಯ
ಹಸಿ ಮೊಟ್ಟೆಯಲ್ಲಿರುವಂತಹ ಕೊಲೆಸ್ಟ್ರಾಲ್ ಅಂಶ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅದರಲ್ಲೂ ಹೃದಯಕ್ಕೆ ಬೇಕಾದ ಒಳ್ಳೆಯ ಕೊಲೆಸ್ಟ್ರಾಲನ್ನು ಹೆಚ್ಚು ಮಾಡಿ, ಉರಿಯೂತ ಅನ್ನ ಕಡಿಮೆ ಮಾಡುತ್ತದೆ.
ಹಸಿ ಮೊಟ್ಟೆಗಳನ್ನು ತಿನ್ನುವುದರಿಂದ ಉಂಟಾಗುವ ಸಮಸ್ಯೆಗಳು
ಸಾಲ್ಮೊನೆಲ್ಲಾ ಅಪಾಯ
ಹಸಿ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯ ಇರುತ್ತದೆ. ಇದು ನಾವು ಸೇವಿಸಿದ ಆಹಾರವನ್ನ ವಿಷಕಾರಿಯನ್ನಾಗಿ ಮಾಡಬಹುದು, ಇದರಿಂದ ಡೈರಿಯ ವಾಕರಿಕೆ ವಾಂತಿ ಫುಡ್ ಪಾಯಿಸನ್ ಸಮಸ್ಯೆ ಎದುರಾಗುತ್ತದೆ.

ಇತರ ಬ್ಯಾಕ್ಟೀರಿಯಾದ ಮಾಲಿನ್ಯ
ಹಸಿ ಮೊಟ್ಟೆಗಳು ಇ. ಕೋಲಿ ಮತ್ತು ಕ್ಯಾಂಪಿಲೋಬ್ಯಾಕ್ಟರ್ನಂತಹ ಇತರ ಬ್ಯಾಕ್ಟೀರಿಯಾಗಳಿಂದ ಕೂಡ ಕಲುಷಿತಗೊಳ್ಳಬಹುದು.ಹಾಗಾಗಿ ಎಚ್ಚರದಿಂದ ಇರುವುದು ಉತ್ತಮ.