ಮೈಸೂರು ಮುಡಾ ಅಕ್ರಮ ನಿವೇಶನ ಹಂಚಿಕೆ (Muda scam) ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ (Paravati siddaramaiah) ಮತ್ತು ಸಚಿವ ಬೈರತಿ ಸುರೇಶ್ ಗೆ (Bairathi suresh) ED ನೋಟೀಸ್ ಜಾರಿ ಮಾಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ, ಇಂದು ವಿಧಾನಸೌಧದಲ್ಲಿ ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಪೊನ್ನಣ್ಣ (Ponanna) ಪ್ರತಿಕ್ರಿಯಿಸಿದ್ದು,ಲೋಕಾಯುಕ್ತ FIR ದಾಖಲು ಮಾಡಿದ ನಂತರ ED ಸಹ ತನಿಖೆ ಆರಂಭ ಮಾಡಿದ್ದು, ಇದೇ ಕಾನೂನು ಬಾಹಿರ ಹೆಜ್ಜೆ ಎಂದು ಟೀಕಿಸಿದ್ದಾರೆ.

ಈಗಾಗಲೇ ತನಿಖೆ ನಡೆಸಿರುವ ಲೋಕಾಯುಕ್ತ, ತನ್ನ ತನಿಖಾ ವರದಿಯನ್ನು ಕೋರ್ಟ್ ಗೆ ನೀಡಿದೆ. ಮಾನ್ಯ ಉಚ್ಚ ನ್ಯಾಯಾಲಯ ಈ ತನಿಖೆ ವರದಿ ಪಡೆಯುತ್ತಿದೆ, ಹೀಗಿದ್ದರೂ ED ತನಿಖೆ ಆರಂಭಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ, ಈ ಮೊದಲೇ ನೋಟಿಸ್ ಗೆ ಕಾಲಾವಕಾಶ ಕೊಡಿ ಅಂತ ಕೇಳಿದ್ದಾರೆ.ಇದರ ಜೊತೆಗೆ ಮತ್ತೊಂದು ನೋಟಿಸ್ ಸಹ ಕೊಟ್ಟಿದ್ದಾರೆ. ಒಟ್ಟಾರೆ ದ್ವೇಷಪೂರಿತವಾಗಿ ED ಈ ರೀತಿ ಕಾನು ಬಾಹಿರ ತನಿಖೇನೆ ಮಂದಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.