ರಾಷ್ಟ್ರ ರಾಜಧಾನಿ ದೆಹಲಿಯ (Delhi elections) ಚುನಾವಣಾ ಕಾವು ಹೆಚ್ಚಾಗಿದ್ದು ಪ್ರಮುಖವಾಗಿ ಬಿಜೆಪಿ (Bjp) ಮತ್ತು ಆಪ್ (AAP) ಪಕ್ಷಗಳ ನಡುವಿನ ವಾಕ್ಸಮರ , ಕಿತ್ತಾಟ, ಕೆಸರೆರಚಾಟ ತಾರಕಕ್ಕೇರಿದೆ. ದೆಹಲಿ ಜನರು ಸಾಯಲು ಹರಿಯಾಣ ಬಿಜೆಪಿ ಸರ್ಕಾರ (Haryana bjp government) ನದಿಯಲ್ಲಿ ವಿಷ ಬೆರೆಸುತ್ತಿದೆ ಎಂದು ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Aravind Kejriwal) ಗಂಭೀರ ಆರೋಪ ಮಾಡಿದ್ದಾರೆ.

ಹರಿಯಾಣದ ಮೂಲಕ ಯಮುನಾ ನದಿ ಹರಿದು ಬಂದು ದೆಹಲಿಗೆ ತಲುಪುತ್ತಿದೆ.ಈ ವೇಳೆ ಹರ್ಯಾಣ ಸರ್ಕಾರ ನೀರಿಗೆ ವಿಷ ಬೆರೆಸುತ್ತಿದೆ. ಆ ನೀರನ್ನ ಕುಡಿದು ದೆಹಲಿ ಜನ ಸಾವಿಗಿಡಾಗಿದ್ರೆ, ಅದರ ಆರೋಪ ಆಪ್ ಪಕ್ಷದ ಮೇಲೆ ಹೊರಿಸಲು ಬಿಜೆಪಿ ಪ್ಲಾನ್ ಮಾಡಿದೆ ಎಂದು ಕೇಜ್ರಿವಾಲ್ ಆರೋಪ ಮಾಡಿದ್ದಾರೆ.

ಈ ಆರೋಪದ ಬಗ್ಗೆ ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿ ಪ್ರತಿಕ್ರಿಯಿಸಿದ್ದು,ದೆಹಲಿಯ 28 ದೊಡ್ಡ ನಾಲೆಯ ನೀರನ್ನ ನದಿಗೆ ಬಿಟ್ಟಿದ್ದು ಕೇಜ್ರಿವಾಲ್. ಅವರು ಮೊದಲು ಅದನ್ನ ಸರಿ ಪಡಿಸಿಕೊಳ್ಳಲಿ. ಈ ರೀತಿ ಸುಮ್ಮನೆ ಆರೋಪ ಮಾಡಿದ್ರೆ ಕೇಜ್ರಿವಾಲ್ ವಿರುದ್ದ ಮಾನನಷ್ಟ ಮೊಕ್ಕದ್ದಮ್ಮೆ ಹಾಕಲಾಗುವುದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದ್ರೆ.. ಕೇವಲ ರಾಜಕೀಯ, ಚುನಾವಣೆ, ಅಧಿಕಾರಕ್ಕೋಸ್ಕರ ಎಂತೆಂಥ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿರುವ ರಾಜಕೀಯ ಪಕ್ಷಗಳನ್ನು ಕಂಡು ದೆಹಲಿಯ ಜನ ರೇಜಿಗೆ ವ್ಯಕ್ತಪಡಿಸಿದ್ದಾರೆ.