ಸುಂದರವಾದ ಉಗುರುಗಳು ಇರಬೇಕು ಎಂಬುದು ಪ್ರತಿಯೊಬ್ಬರ ಆಸೆ. ಅವು ಗುರುಗಳ ಸೌಂದರ್ಯವನ್ನು ಹೆಚ್ಚಿಸಲು ಹೆಣ್ಣು ಮಕ್ಕಳು ಉಗುರಿಗೆ ಬಣ್ಣವನ್ನು ಹಚ್ಚಿಕೊಳ್ತಾರೆ.ಇನ್ನು ಕೆಲವರಂತು ಪ್ರತಿದಿನ ಉಗುರುಗಳ ಬಣ್ಣ ಚೇಂಜ್ ಮಾಡುತ್ತಾರೆ..ಇದರಿಂದ ಉಗುರುಗಳು ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಹಲವಾರು ಅಡ್ಡಪರಿಣಾಮಗಳು ಉಂಟಾಗಬಹುದು.
ಉಗುರುಗಳು ದುರ್ಬಲಗೊಳ್ಳುವುದು
ಪ್ರತಿದಿನ ಉಗುರು ಬಣ್ಣ ಬದಲಾಯಿಸುವುದರಿಂದ, ಉಗುರುಗಳು ಒಣಗಬಹುದು ಮತ್ತು ದುರ್ಬಲಗೊಳ್ಳಬಹುದು.ಹಾಗಾಗಿ ವಾರಕ್ಕೆ ಒಮ್ಮೆ ಅಥವಾ ೧೫ ದಿನಕ್ಕೆ ಒಮ್ಮೆ ನೈಲ್ ಪಾಲಿಶ್ ಬದಲಿಸೋದು ಉತ್ತಮ.
ಉಗುರುಗಳ ಸೂಕ್ಷ್ಮತೆ
ದಿನನಿತ್ಯದ ಉಗುರು ಬಣ್ಣ ಬದಲಿಸುವುದರಿಂದ,ಉಗುರುಗಳು ಸುಲಭವಾಗಿ ಮುರಿಯುತ್ತದೆ.ಹಾಗೂ ಉದ್ದವಾದ ಉಗುರುಗಳನ್ನು ಬೆಳೆಸಲು ಕಷ್ಟವಾಗುತ್ತದೆ.
ಕೆಮಿಕಲ್ಸ್
ನೇಲ್ ಪಾಲಿಷ್ ರಿಮೂವ್ ಮಾಡಲು ನಾವು ಕಠಿಣ ರಾಸಾಯನಿಕಗಳನ್ನು ಬಳಸುತ್ತಿವಿ , ಅಷ್ಟೇ ಅಲ್ಲದೆ ನೈಲ್ ಪಾಲಿಶ್ ಅಲ್ಲಿ ಇರುವಂತಹ, ಕೆಮಿಕಲ್ಸ್ನ ಚರ್ಮ ಹೀರಿಕೊಳ್ಳುತ್ತದೆ ಮತ್ತು ಚರ್ಮದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.