ರಾತ್ರಿ ಮಲಗುವಾಗ ಹೆಚ್ಚು ಜನ ತಲೆಗೆ ದಿಂಬನ್ನು ಬಳಸುತ್ತಾರೆ. ತಲೆದಿಂಬಿಲ್ಲದಿದ್ದರೆ ಕೆಲವರಿಗೆ ನಿದ್ದೆನೇ ಬರಲ್ಲ. ಅದರಲ್ಲೂ ಕೆಲವರಂತೂ ತುಂಬಾನೇ ಎತ್ತರವಾಗಿ ಅಥವಾ ಎರಡು ಮೂರು ತಲೆ ದಿಂಬನ್ನು ಬಳಸುತ್ತಾರೆ..ಆದ್ರೆ ತಲೆ ದಿಂಬು ಬಳಸದೆ ಇರುವುದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.
ಕುತ್ತಿಗೆ ನೋವು
ದಿಂಬನ್ನು ಬಳಸದಿರುವುದು ಕುತ್ತಿಗೆಯ ಸ್ನಾಯುಗಳ ಮೇಲೆ ಬೀಳುವಂತ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹಾಗೂ ಮುಖ್ಯವಾಗಿ ಕುತ್ತಿಗೆ ನೋವು ಕೂಡ ಕಡಿಮೆಯಾಗುತ್ತದೆ.
ಉಸಿರಾಟಕ್ಕೆ ಉತ್ತಮ
ದಿಂಬು ಇಲ್ಲದೆ ಮಲಗುವುದರಿಂದ ವಾಯುಮಾರ್ಗಗಳು ತೆರೆದಿರುತ್ತವೆ, ಇದು ಉಸಿರಾಟವನ್ನು ಸುಧಾರಿಸುತ್ತದೆ ಮತ್ತು ನಿದ್ರೆಯಲ್ಲಿ ನೋಸ್ ಬ್ಲಾಕ್ ಆಗುವುದು ಅಥವಾ ಉಸಿರಾಟದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಸ್ಟ್ರೆಂತ್
ಕುತ್ತಿಗೆ ಮತ್ತು ಭುಜದ ಸ್ನಾಯುಗಳು ಬಲಗೊಳ್ಳಲು ಸಹಾಯವಾಗುತ್ತದೆ, ಇದು ಒಟ್ಟಾರೆ ಭಂಗಿಯನ್ನು ಸುಧಾರಿಸುತ್ತದೆ.
ನಿದ್ರೆಯ ಗುಣಮಟ್ಟ
ಮಲಗುವಾಗ ದಿಂಬನ್ನು ಬಳಸದೆ ಇದ್ದರೆ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ. ಪದೇ ಪದೇ ಎಚ್ಚರವಾಗುವಂತದ್ದು ಇರುವುದಿಲ್ಲ. ಆದ್ರೆ ಕೆಲವರು ಹೇಳುವ ಪ್ರಕಾರ ದಿಂಬು ಇಲ್ಲದೆ ನಿದ್ರೆ ಸರಿಯಾಗುವುದಿಲ್ಲವೆಂದು. ಒಮ್ಮೆ ದಿಂಬಿಲ್ಲದೆ ಮಲಗುವುದು ಅಭ್ಯಾಸವಾದರೆ ಆರೋಗ್ಯಕ್ಕೆ ಉತ್ತಮ.