ಸಿಎಂ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟ್ ಮಾಡಿದ್ರು. ಆ ಬಳಿಕ ಡಾ ಜಿ ಪರಮೇಶ್ವರ್ ಕೂಡ ದಲಿತ ಸಮುದಾಯದ ಮುಖಂಡರಿಗೆ ಡಿನ್ನರ್ ಮಿಟ್ ಆಯೋಜನೆ ಮಾಡಿದ್ದರು. ಆದರೆ ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ಡಿನ್ನರ್ ಮೀಟ್ ರದ್ದು ಮಾಡಲಾಗಿತ್ತು. ಆದರೆ ಇದೀಗ ಸ್ವತಃ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಸಂಘಟನೆ, ಬೆಳಗಾವಿ ಸಮಾವೇಶದ ಬಗ್ಗೆ ಚರ್ಚೆ ಮಾಡಿದ ಬಳಿಕ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಡಿನ್ನರ್ ಸಭೆ ಚರ್ಚೆಗಳಿಗೆಲ್ಲಾ ಡಿ.ಕೆ ಶಿವಕುಮಾರ್ ಸ್ಪಷ್ಟ ಉತ್ತರ ನೀಡಿದರು.
ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟಲು ತೀರ್ಮಾನ ಮಾಡಲಾಗಿದೆ. ಜನವರಿ 13ಕ್ಕೆ ಎಲ್ಲಾ ಕಾಂಗ್ರೆಸ್ ಪ್ರಮುಖರನ್ನ ಸಭೆಗೆ ಆಹ್ವಾನ ಮಾಡಿದ್ದೇವೆ. ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಬರ್ತಾರೆ, ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ ಎಂದಿದ್ದಾರೆ ಡಿ.ಕೆ ಶಿವಕುಮಾರ್. ಇನ್ನು ಗೃಹ ಸಚಿವ ಪರಮೇಶ್ವರ್ ಹಾಗು ಸಚಿವ ಕೆ.ಎನ್ ರಾಜಣ್ಣ ಮಾತಿಗೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ. ಡಿನ್ನರ್ ಮೀಟ್ ರದ್ದು ಆಗಿಲ್ಲ, ಕೇವಲ ಮುಂದೂಡಿಕೆ ಮಾಡಿದ್ದೇವೆ ಎಂದಿದ್ದರು. ದಲಿತ ಸಭೆ ರದ್ದು ಮಾಡಲು ಯಾರಿಗೂ ಸಾಧ್ಯವಿಲ್ಲ ಅಂತಾನೂ ಟಾಂಟ್ ಕೊಟ್ಟಿದ್ರು. ಇದೀಗ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಯಾವ ಸಭೆನೂ ಇಲ್ಲ, ಯಾರೂ ಸಭೆಯನ್ನೂ ಮಾಡೋದಿಲ್ಲ. ಏನೇ ಇದ್ರೂ ಸಿಎಂ ಸಂಪುಟದಲ್ಲಿ ಚರ್ಚಿಸ್ತಾರೆ ಎಂದಿದ್ದಾರೆ ಡಿ.ಕೆ ಶಿವಕುಮಾರ್.
ಯಾರೂ ಸಭೆ ತಡೆಯೋಕೆ ಆಗಲ್ಲ ಅಂದಿದ್ದ ಸಚಿವ ಕೆ.ಎನ್.ರಾಜಣ್ಣಗೆ ತಿರುಗೇಟು ನೀಡಿದ್ದಾರೆ. SC.ST ಸಭೆ ನಡೆದೇ ನಡೆಯುತ್ತೆ ಎಂದಿದ್ದ ಪರಮೇಶ್ವರ್‌ಗೂ ಗುದ್ದು ಕೊಟ್ಟಿದ್ದಾರೆ. ಇದೇ ವೇಳೆ ದೊಡ್ಡವರ ಬಗ್ಗೆ ಮಾತಾಡಲ್ಲ ಅನ್ನೋ ಮೂಲಕ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತ ವಿನಯ್ ಗುರೂಜಿ ಭವಿಷ್ಯ ನುಡಿದ ಬಗ್ಗೆಯೂ ಡಿ.ಕೆ ಶಿವಕುಮಾರ್ ಮಾತನಾಡಿ, ನಾನು ಎಲ್ಲಾ ಸ್ವಾಮೀಜಿ, ಗುರೂಜಿಗಳಿಗೆ ವಿನಂತಿ ಮಾಡ್ತೀನಿ, ಸರ್ಕಾರದ ವಿಚಾರದಲ್ಲಿ ಯಾರ ಹೇಳಿಕೆನೂ ಬೇಡ ಎಂದಿದ್ದಾರೆ. ಇನ್ನು ಎಲ್ಲಾ ಇಲಾಖೆಯಲ್ಲಿ ರೇಟ್ ಕಾರ್ಡ್ ಫಿಕ್ಸ್ ಆಗಿದೆ ಅನ್ನೋ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದು, ಅನುಭವದ ಮಾತು ಅಂತ ವ್ಯಂಗ್ಯವಾಡಿದ್ದಾರೆ.