ರಾಜ್ಯ ಕಾಂಗ್ರೆಸ್ (congress) ಪಾಳಯದ ಡಿನ್ನರ್ ಪಾಲಿಟಿಕ್ಸ್ (Dinner politics) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ,ಡಿಕೆಶಿ ಅವರು ಬೆಳಗಾವಿ ಅಧಿವೇಶನದಲ್ಲಿ ಅಧಿಕಾರ ಸಿಗದಿದ್ರೆ ಒದ್ದು ಕಿತ್ಕೊಳ್ಳಬೇಕು ಎಂದು ಹೇಳಿದ್ದಾರೆ.ಹೀಗಾಗಿ ಪವರ್ ಶೇರಿಂಗ್ ಬಗ್ಗೆ ಅವರೇ ಹೇಳಬೇಕು.
ಈಗ ಬೇರೆ ಬೇರೆ ಸಚಿವರ ಮೂಲಕ ಡಿನ್ನರ್ ಪಾಲಿಟಿಕ್ಸ್ ಶುರುವಾಗಿದೆ. ಇದೆಲ್ಲ ಸಿದ್ದರಾಮಯ್ಯನವರ (Cm siddaramaiah) ಆಟ.ಈ ಡಿನ್ನರ್ ಪಾಲಿಟಿಕ್ಸ್ ಹೀಗೆ ಮುಂದುವರಿಯುತ್ತೆ.ಈ ಕಡೆ ಡಿಕೆಶಿ ಒದ್ದು ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ಮುಂದುವರೆಸ್ತಾರೆ ಎಂದು ಬಿ.ವೈ ವಿಜಯೇಂದ್ರ ಕಾಲೆಳೆದಿದ್ದಾರೆ.
ಅಧಿಕಾರವನ್ನು ಒದ್ದು ಕಿತ್ಕೋಬೇಕು ಅಂತ ಡಿಕೆಶಿಯವರಿಗೆ ಅವರ ಗುರುಗಳು ಹಿಂದೊಮ್ಮೆ ಹೇಳಿದ್ದರಂತೆ.ಈ ಮಾತನ್ನು ಚಳಗಾಲದ ಅಧಿವೇಶನದಲ್ಲಿ ಡಿಕೆಶಿಯವರು ಹದಿನೈದು ವರ್ಷಗಳ ನಂತರ ನೆನಪಿಸಿಕೊಂಡರು.ಈ ಮಾತಿನ ಮರ್ಮ ಅರ್ಥ ಏನು ಅಂತ ಅರ್ಥ ಮಾಡ್ಕೊಳ್ಳಿ.ಸಿದ್ದರಾಮಯ್ಯ ಪವರ್ ಶೇರಿಂಗ್ ಫಾರ್ಮುಲಾ ಏನಿದೆ ಅಂತ ಸಿದ್ದರಾಮಯ್ಯ, ಡಿಕೆಶಿ ಹೇಳಬೇಕು ಎಂದಿದ್ದಾರೆ.
ಆದರೆ ನಮಗಿರುವ ಮಾಹಿತಿ, ಸಿದ್ದರಾಮಯ್ಯ ಅವಧಿ ಮುಗೀತಿದೆ. ಹಾಗಾಗಿ ಸಿದ್ದರಾಮಯ್ಯ ಈಗ ದಾಳ ಉರುಳಿಸ್ತಿದ್ದಾರೆ. ಹೀಗೆ ಬೇರೆ ಬೇರೆ ಸಚಿವರ ಮೂಲಕ ಡಿನ್ನರ್ ಪಾಲಿಟಿಕ್ಸ್ ಮಾಡಿಸ್ತಿದ್ದಾರೆ.ಅವರ ಹೈಕಮಾಂಡ್ ಏನೇ ಹೇಳಿದ್ರೂ ಡಿನ್ನರ್ ಪಾಲಿಟಿಕ್ಸ್ ಮುಂದುವರೆಸ್ತಾರೆ.
ಅಧಿಕಾರ ಒದ್ದು ಕಿತ್ಕೋಬೇಕು ಅನ್ನುವ ದಾಳವನ್ನೇ ಸಿದ್ದರಾಮಯ್ಯ ಮುಂದುವರೆಸಿದ್ದಾರೆ.ಬರುವ ದಿನಗಳಲ್ಲಿ ಕಾಂಗ್ರೆಸ್ ಕಿತ್ತಾಟ ಬೀದಿಗೆ ಬರಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.