ಚಳಿಗಾಲದಲ್ಲಿ ಬೀಸುವ ತಂಪಾದ ಗಾಳಿಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಮಾತ್ರವಲ್ಲದೇ ಕೈಕಾಲುಗಳು ಗಾಳಿಗೆ ಒಡೆಯುತ್ತವೆ. ಇದೆಲ್ಲದರ ಜೊತೆಗೆ ಕೂದಲು ಡ್ರೈ ಆಗುತ್ತದೆ ಹಾಗೂ ಡ್ಯಾಂಡ್ರಫ್ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಈ ಡ್ಯಾಡ್ರಫ್ ಸಮಸ್ಯೆಯಿಂದ ದೂರಾಗಲು ಈ ಸಿಂಪಲ್ ಮನೆಮದ್ದುಗಳನ್ನು ಬಳಸಿ.

ಆಪಲ್ ಸೈಡರ್ ವಿನಿಗರ್
ತಲೆಗೆ ಸ್ನಾನ ಮಾಡಿದ ನಂತರ ಸಮ ಪ್ರಮಾಣದಲ್ಲಿ ಆಪಲ್ ಸೈಡರ್ ವಿನಿಗರ್ ಹಾಗೂ ನೀರನ್ನು ಮಿಶ್ರಣ ಮಾಡಿ ತಲೆ ಕೂದಲಿಗೆ ಹಚ್ಚಿ ಹಾಗೆ ಬಿಡಿ ಇದರಿಂದ ಕೂದಲಿನ ಪಿಎಚ್ ಲೆವಲ್ ಬ್ಯಾಲೆನ್ಸ್ ಆಗುವುದರ ಜೊತೆಗೆ ಡ್ಯಾಂಡ್ರಫ್ ಕೂಡ ಕಡಿಮೆಯಾಗುತ್ತದೆ.

ಆಲಿವ್ ಆಯಿಲ್ ಮತ್ತು ನಿಂಬೆರಸ
ಸಮ ಪ್ರಮಾಣದಲ್ಲಿ ಆಲಿವ್ ಆಯಿಲ್ ಮತ್ತು ನಿಂಬೆರಸವನ್ನ ಬೆರೆಸಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಅಥವಾ ಒಂದು ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಡ್ಯಾಂಡ್ರಫ್ ಕಡಿಮೆಯಾಗುತ್ತದೆ. ನಿಂಬೆ ರಸದಲ್ಲಿ ಆಂಟಿ ಫಂಗಲ್ ಅಂಶಗಳಿದೆ ಹಾಗೂ ಆಲಿವ್ ಆಯಿಲ್ ಅಲ್ಲಿ ಮಾಯಿಶ್ಚರೈಸಿಂಗ್ ಕೆಪ್ಯಾಸಿಟಿ ಹೆಚ್ಚಿದು ಡ್ಯಾಂಡ್ರಫ್ ಅನ್ನ ದೂರವಿರುತ್ತದೆ.

ಮೊಸರು ಮತ್ತು ಜೇನು
ಮೊಸರು ಮತ್ತು ಜೇನನ್ನ ಬೆರೆಸಿ ಸ್ಕಾಲ್ಪ್ ಗೆ ಹಚ್ಚಿ 15ರಿಂದ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಲೆಗೆ ಸ್ನಾನ ಮಾಡಿ. ಮೊಸರಿನಲ್ಲಿ ಲಾಟಿಕ್ ಆಸಿಡ್ ಇದೆ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಅಂಶ ಜೇನಿನಲ್ಲಿ ಇರುವುದರಿಂದ ಡ್ಯಾಂಡ್ರಫ್ ಅನ್ನ ತಕ್ಷಣಕ್ಕೆ ಕಡಿಮೆ ಮಾಡುತ್ತದೆ.