ಹೊಸ ವರ್ಷ (New Year) 2025ಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷಾಚರಣೆಯ ದಿನ (ಡಿಸೆಂಬರ್ 31) ಬೆಂಗಳೂರಿನ (Bengaluru) ಎಂಜಿ ರಸ್ತೆ (M G Road), ಬ್ರಿಗೇಡ್ ರಸ್ತೆ (Brigade Road), ಕೋರಮಂಗಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಈ ವೇಳೆ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದಾರೆ, ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧಿಸಿದ್ದಾರೆ.

ಬೆಂಗಳೂರಿನ ಜನರು ಹೊಸ ವರ್ಷವನ್ನು ಆಚರಿಸಲು, ಎಂ.ಜಿ ರಸ್ತೆ(M G Road), ಬ್ರಿಗೇಡ್ ರಸ್ತೆ(Brigade Road), ಕೋರಮಂಗಲ(Koramangala), ಇಂದಿರಾನಗರ(Indira Nagar) 100 ಅಡಿ ರಸ್ತೆ ಇತ್ಯಾದಿ ಕಡೆಗಳಲ್ಲಿ ಸೇರುತ್ತಾರೆ. ಈ ವೇಳೆ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಸ್ತೆಗಳಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ತಿಳಿಸಿದ್ದಾರೆ.
ಬ್ರಿಗೇಡ್ ರಸ್ತೆ
ಮಂಗಳವಾರ (December 31)ರ ರಾತ್ರಿ 8 ಗಂಟೆಯಿಂದ 2025ರ ಜನವರಿ 1 (January 1)ರ ನಸುಕಿನ ಜಾವ 2 ಗಂಟೆಯವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಪೊಲೀಸ್ ವಾಹನಗಳು ಹೊರತು ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

* ಎಂ.ಜಿ.ರಸ್ತೆ, (M G Road) ಅನಿಲ್ ಕುಂಬ್ಳೆ ವೃತ್ತ (Anil Kumble Circle) ದಿಂದ ಮೆಯೋಹಾಲ್ (Mayol) ಬಳಿಯ ರೆಸಿಡೆನ್ಸಿ ರಸ್ತೆ (Residency Road Junction) ಜಂಕ್ಷನ್ವರೆಗೆ.
* ಬ್ರಿಗೇಡ್ ರಸ್ತೆಯಲ್ಲಿ(Brigade Road), ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಅಪೇರಾಜಂಕ್ಷನ್‌ವರೆಗೆ.
* ಚರ್ಚ್ ಸ್ಟ್ರೀಟ್‌ನಲ್ಲಿ(Church Street), ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ(Brigade Road Junction) ಮ್ಯೂಸಿಯಂ ರಸ್ತೆವರೆಗೆ.
* ಮ್ಯೂಸಿಯಂ ರಸ್ತೆ ಎಂ.ಜಿ.ರಸ್ತೆ ಜಂಕ್ಷನ್ ನಿಂದ ಹಳೆ ಮದ್ರಾಸ್ ಬ್ಯಾಂಕ್ ರಸ್ತೆ (SBI Circle) ವೃತ್ತದವರೆಗೆ.
* ರೆಸ್ಟ್ ಹೌಸ್, ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ವರೆಗೆ.
* ರೆಸಿಡೆನ್ಸಿ ಕ್ರಾಸ್ ರಸ್ತೆ ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರ) ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಬೇರೆ ಮಾರ್ಗ
ಡಿಸೆಂಬರ್ 31ರ ರಾತ್ರಿ 10 ಗಂಟೆಯ ನಂತರ ಎಂ.ಜಿ ರಸ್ತೆಯ ಕ್ಲೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗೂ ಇನ್ನು ಮುಂದಕ್ಕೆ ಹೋಗುವಂತಹ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್-ಬಿ. ಆರ್.ವಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕಬ್ಬನ್ ರಸ್ತೆ ಮೂಲಕ ಸಂಚರಿಸಿ ವೆಬ್ ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಿ ಸಾಗಬಹುದಾಗಿದೆ.
ಹಲಸೂರು ಕಡೆಯಿಂದ ಕಂಟೊನ್ಮೆಂಟ್ ಕಡೆಗೆ ಹೋಗುವಂತಹ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ -ಡಿಕನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆ ಸೇರಿ ಸಾಗಬೇಕು.
ಕಾಮರಾಜ್ ರಸ್ತೆಯಲ್ಲಿ, ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಈಜಿಪುರ, ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲಕಿರುವು ಪಡೆದು, ಎ.ಎಸ್.ಪಿ. ಸೆಂಟರ್‌ನಲ್ಲಿ ಎಡತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬಹುದು.
ಹೆಚ್.ಎ.ಎಲ್. ಕಡೆಯಿಂದ ಬರುವ ವಾಹನಗಳು ಎ.ಎಸ್.ಸಿ ಸೆಂಟರ್‌ನಲ್ಲಿ ಬಲತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬಹುದು.

ವಾಹನ ನಿಲುಗಡೆ ನಿಷೇಧ
ಮಂಗಳವಾರ (ಡಿಸೆಂಬರ್ 31)ರ ಸಂಜೆ 4:00 ಗಂಟೆಯಿಂದ 2025ರ ಜನವರಿ 1ರ ನಸುಕಿನ ಜಾವ 03:00 ಗಂಟೆಯ ವರೆಗೆ ಕೆಳಕಂಡ ರಸ್ತೆಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳು ಹೊರತುಪಡಿಸಿ ಉಳಿದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
> ಎಂ.ಜಿ ರಸ್ತೆಯ, ಅನಿಲ್ ಕುಂಬ್ಳೆ ವೃತದಿಂದ ಟ್ರಿನಿಟಿ ವೃತ್ತದವರೆಗೆ.
> ಬ್ರಿಗೇಡ್ ರಸ್ತೆ, ಆರ್ಟ್ಸ್ & ಕ್ರಾಫ್ಟ್ ಜಂಕ್ಷನನಿಂದ ಅಜೇರಾ ಜಂಕ್ಷನ್ವರೆಗೆ.
> ಚರ್ಡ್ ಸ್ಪೀಟ್, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್‌ವರೆಗೆ.
> ರೆಸ್ಟ್ ಹೌಸ್ ರಸ್ತೆ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ.
> ಮ್ಯೂಸಿಯಂ ರಸ್ತೆ, ಎಂ.ಜಿ ರಸ್ತೆ ಜಂಕ್ಷನ್‌ನಿಂದ ಹಳೆ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ
> ಶಿವಾಜಿನಗರ ಬಿ.ಎಂ.ಟಿ.ಸಿ ಶಾಪಿಂಗ್ ಕಾಂಪ್ಲೆಕ್ಸ್‌ನ 1ನೇ ಮಹಡಿ
> ಗರುಡಾ ಮಾಲ್
> ಕಬ್ಬನ್ ಪಾರ್ಕ್ (ಬಾಲಭವನ)
ಪಾದಚಾರಿಗಳು ಬ್ರಿಗೇಡ್ ರಸ್ತೆ, ಎಂ.ಜಿ ರಸ್ತೆ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್ ಕಡೆಗೆ ಹೋಗಬೇಕು. ವಿರುದ್ಧ ದಿಕ್ಕಿನಲ್ಲಿ ಹೋಗುವುದನ್ನು ನಿಷೇಧಿಸಲಾಗಿದೆ. ಪುನಃ ಎಂ.ಜಿ ರಸ್ತೆಗೆ ಬರಬೇಕಾದಲ್ಲಿ ರೆಸಿಡೆನ್ಸಿ ರಸ್ತೆ-ರೆಸಿಡೆನ್ಸಿ ರಸ್ತೆ ಕ್ರಾಸ್ (ಶಂಕರ್‌ನಾಗ್ ಚಿತ್ರ ಮಂದಿರ) ಮಾರ್ಗವಾಗಿ ಬರಬಹುದಾಗಿದೆ.

ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ, ರಸ್ತೆ ಮತ್ತು ಸೆಂಟ್ ಮಾರ್ಕ್ಸ್ ರಸ್ತೆಗಳಲ್ಲಿ ನಿಲ್ಲಿಸಿದಂತಹ ವಾಹನಗಳ ಚಾಲಕರು ಅಥವಾ ಮಾಲಿಕರು ತಮ್ಮ ವಾಹನಗಳನ್ನು ಡಿಸೆಂಬರ್ 31ರ ಸಂಜೆ 04:00 ಗಂಟೆಯೊಳಗೆ ತೆರುವುಗೊಳಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಇಂದಿರಾ ನಗರ
ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು: (ರಸ್ತೆಯ ಎರಡೂ ಬದಿಯಲ್ಲಿ)
ಇಂದಿರಾನಗರ 100 ಅಡಿ ರಸ್ತೆಯ ಹಳೆ ಮದ್ರಾಸ್ ರಸ್ತೆ ಜಂಕ್ಷನ್‌ನಿಂದ ದೊಮ್ಮಲೂರು ಪ್ರೈಓವರ್ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ.
ಇಂದಿರಾನಗರ 12ನೇ ಮುಖ್ಯ ರಸ್ತೆಯ 80 ಅಡಿ ರಸ್ತೆಯಿಂದ ಇಂದಿರಾನಗರ ಡಬಲ್ ರೋಡ್ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಮಹದೇವಪುರ
ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು: (ರಸ್ತೆಯ ಎರಡೂ ಬದಿಯಲ್ಲಿ)
ಐ.ಟಿ.ಪಿ.ಎಲ್ ಮುಖ್ಯರಸ್ತೆ ಬಿ ನಾರಾಯಣಪುರ ಶೆಲ್ ಪೆಟ್ರೋಲ್ ಬಂಕ್‌ನಿಂದ ಗರುಡಚಾರ್ ಪಾಳ್ಯ ಡೆಕೆಕ್ಲಾನ್ಸರೆಗೆ ರಸ್ತೆಯ ಎರಡೂ ಬದಿಯಲ್ಲಿ.
ಹೂಡಿ ಮೆಟ್ರೋ ಸ್ಟೇಷನ್‌ನಿಂದ ಗ್ರಾಫೈಟ್ ಇಂಡಿಯಾ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿಯಲ್ಲಿ
ಐಟಿಪಿಎಲ್ ರಸ್ತೆ ಮೆಡಿಕವರ್ ಆಸ್ಪತ್ರೆಯಿಂದ ಬಿಗ್‌ಬಚಾರ್ ಜಂಕ್ಷನ್ ವರೆಗೂ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಕೋರಮಂಗಲ
ಸಂಚಾರ ನಿರ್ಬಂಧ
ನ್ಯಾಷನಲ್ ಗೇಮ್ಸ್ ವಿಲೇಜ್ನಿಂದ ಯುಕೋ ಬ್ಯಾಂಕ್ ಜಂಕ್ಷನ್‌ವರೆಗೆ ಎರಡೂ ಬದಿಯಲ್ಲಿ ರಾತ್ರಿ 11:00 ಗಂಟೆಯಿಂದ ಬೆಳಗಿನ ಜಾವ 02:00 ಗಂಟೆಯವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕೋರಮಂಗಲ ವೈಡಿ ಮಠ ರಸ್ತೆಯಲ್ಲಿ ಸುಖಸಾಗರ ಜಂಕ್ಷನ್‌ನಿಂದ ಮೈಕ್ರೋಲ್ಯಾಂಡ್ ಜಂಕ್ಷನ್‌ವರೆಗೆ
ಜೆ.ಎನ್.ಸಿ ರಸ್ತೆ, 4ನೇ ಬಿ ಕ್ರಾಸ್ ರಸ್ತೆ, ಟಾನಿಕ್ ಹಿಂಭಾಗದ ರಸ್ತೆ, 17ನೇ ಹೆಚ್ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗ
ಆಡುಗೋಡಿ ಜಂಕ್ಷನ್ ಕಡೆಯಿಂದ ಯುಕೋಬ್ಯಾಂಕ್ ಜಂಕ್ಷನ್ ಮುಖಾಂತರ ಎನ್.ಜಿ.ವಿ ಜಂಕ್ಷನ್, ಸೋನಿವರ್ಲ್ಡ್ ಜಂಕ್ಷನ್ಕಡೆಗೆ ಹೋಗುವ ವಾಹನಗಳು: ಯುಕೋಬ್ಯಾಂಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆಯದೆ ಮಡಿವಾಳ ಚೆಕ್ ಪೋಸ್ಟ್ ಕಡೆಗೆ ಸಾಗಿ ವಾಟರ್ ಬ್ಯಾಂಕ್ ಜಂಕ್ಷನ್ ಮುಖಾಂತರ ಸೋನಿವರ್ಲ್ಡ್ ಜಂಕ್ಷನ್, ಎನ್.ಜಿ.ವಿ ಜಂಕ್ಷನ್ ಕಡೆಗೆ ಸಾಗಬೇಕು.

* ಮಡಿವಾಳ ಕಡೆಯಿಂದ ಯುಕೋಬ್ಯಾಂಕ್ ಜಂಕ್ಷನ್ ಮುಖಾಂತರ ಎಸ್.ಜಿ.ವಿ ಜಂಕ್ಷನ್, ಸೋನಿವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು: ಯುಕೋಬ್ಯಾಂಕ್ ಜಂಕ್ಷನ್ಗೆ ಬರದೇ, ಐಯ್ಯಪ್ಪ ಜಂಕ್ಷನ್, ವಾಟರ್ ಜಂಕ್ಷನ್ ಮುಖಾಂತರ ಅಥವಾ ಮಡಿವಾಳ ಸಂತಸೇದಿ, ಕೃಪಾನಿಧಿ ಜಂಕ್ಷನ್, ಐಶ್ವರ್ಯ ಜಂಕ್ಷನ್, ವಿಟ್ರೋ ಜಂಕ್ಷನ್ ಮುಖಾಂತರ ಸೋನಿವರ್ಲ್ಡ್ ಜಂಕ್ಷನ್, ಎನ್.ಜಿ.ವಿ ಜಂಕ್ಷನ್ ಕಡೆಗೆ ಹೋಗಬೇಕು.
* ಟ್ರಾಫಿಕ್ ಡೈವರ್ಷನ್ ಸ್ಥಳಗಳು
* ಯುಕೋ ಬ್ಯಾಂಕ್ ಜಂಕ್ಷನ್
* ಸುಖಸಾಗರ್ ಜಂಕ್ಷನ್
* ಚೌಡೇಶ್ವರಿ ದೇವಸ್ಥಾನದ ಜಂಕ್ಷನ್
* ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು
80 ಅಡಿ ರಸ್ತೆಯಲ್ಲಿ ಯುಕೋ ಬ್ಯಾಂಕ್ ಜಂಕ್ಷನ್‌ನಿಂದ ಎನ್.ಜಿ.ವಿ ಬ್ಯಾಕ್ ಗೇಟ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆ
ಸೋಮೇಶ್ವರ ದೇವಸ್ಥಾನದ ರಸ್ತೆ (ಸ್ಮಶಾನ ಕ್ರಾಸ್‌ನಿಂದ-ಮೈಕ್ರೋಲ್ಯಾಂಡ್ ಜಂಕ್ಷನ್) ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ವಾಹನ ಪಾರ್ಕಿಂಗ್ ಸ್ಥಳಗಳು

60 ಅಡಿ ಮಾದರಿ ರಸ್ತೆ ಎಡಭಾಗ (ಮುನಿರೆಡ್ಡಿ ಕಲ್ಯಾಣ ಮಂಟಪದಿಂದ ಕೆನರಾ ಬ್ಯಾಂಕ್ ಜಂಕ್ಷನ್ ವರೆಗೆ) ಮುನಿರೆಡ್ಡಿ ಕಲ್ಯಾಣ ಮಂಟಪದ ಎದರುಗಡೆಯ ಬಿ.ಬಿ.ಎಂ.ಪಿ ಮೈದಾನ
ಬೆಥನಿ ಶಾಲಾ ಪಕ್ಕದ ಬಿ.ಬಿ.ಎಂ.ಪಿ ಮೈದಾನ
ಮಾಲ್ ಆಫ್ ವಿಷಿಯಾ, ಓರಾಯನ್ ಹಾಗೂ ಇತರೆ ಸ್ಥಳಗಳು
ವಾಹನ ನಿಲುಗಡೆ ನಿಷೇಧ
ಬ್ಯಾಟರಾಯನಪುರ ಸರ್ವಿಸ್ ರಸ್ತೆ ಮಾಲ್ ಆಫ್ ಐಸಿಯಾ ಮುಂದೆ ಕೊಡಿಗೇಹಳ್ಳಿ ಸಿಗ್ನಲ್ನಿಂದ ಅಳಾಲಸಂದ್ರ ಜಂಕ್ಷನ್ವರೆಗೆ
ಡಾ. ರಾಜ್ ಕುಮಾರ್ ರಸ್ತೆ ನವರಂಗ್ ಸಿಗ್ನಲ್ನಿಂದ ಹಿರಿಯನ್ ಮಾಲ್ ಮುಂದೆ ಸೋಪ್ ಫ್ಯಾಕ್ಟರಿವರೆಗೆ
ವೆಸ್ಟ್ ಆಫ್ ಕಾರ್ಡ್ ರಸ್ತೆ- ಶೆಲ್ ಪಟ್ರೋಲ್ ಬಂಕ್ ನಿಂದ ರಾಜಾಜಿನಗರ 1ನೇ ಬ್ಲಾಕ್ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ನಗರದ ಮೇಲ್ಸೇತುವೆಗಳು ಬಂದ್.
ಡಿಸೆಂಬರ್ 31ರ ರಾತ್ರಿ 11ಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯ ವರೆಗೆ ನಗರದ ಎಲ್ಲ (ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ವೇತುವೆಯನ್ನು ಹೊರತು ಪಡಿಸಿ) ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲುಸೇತುವೆ ರಸ್ತೆಯ ಮೇಲೆ ಡಿಸೆಂಬರ್ 31ರ ರಾತ್ರಿ 10:00 ಗಂಟೆಯಿಂದ ಜನವರಿ 1ರ ಬೆಳಗ್ಗೆ 06:00 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರವನ್ನೂ ಸಹ ನಿಷೇಧಿಸಲಾಗಿದೆ.

ಸೂಚನೆಗಳು
ಮದ್ಯಪಾನ/ಮಾದಕ ದ್ರವ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಶೂನ್ಯ ಸಹನೆಯನ್ನು ದಾರಿಗೆ ತರಲಾಗಿದೆ. ಮದ್ಯಪಾನ/ಮಾದಕ ದ್ರವ್ಯ ಸೇವನೆ ಮಾಡಿ ವಾಹನಚಾಲನೆ ಮಾಡುವಂತಹ ಚಾಲಕ/ಸವಾರರ ಪತ್ತೆಗೆ ರಾತ್ರಿ ಇಡೀ ಬೇರೆ ಬೇರೆ ಸ್ಥಳಗಳಲ್ಲಿ ತಪಾಸಣೆ ಮಾಡುವ ಚೆಕ್ ಪಾಯಿಂಟ್ಗಳನ್ನು ಹಾಕಲಾಗಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಸಿದ್ದಾರೆ.
ಅತಿಬೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಹಾಗೂ ವೀಲಿಂಗ್/ಡ್ರಾಗ್ ರೇಸ್ನಲ್ಲಿ ಭಾಗಿಯಾಗಿ ಇತರೆ ಸಾರ್ವಜನಿಕರಿಗೆ ಅನಾನುಕೂಲ ಮಾಡುವಂತಹ ಮೊಟಾರ್ ಸೈಕಲ್ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.

ನೋ-ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ಅನಧಿಕೃತವಾಗಿ ನಿಲ್ಲಿಸಿದ್ದಲ್ಲಿ ಅಂತಹವುಗಳನ್ನು ಟೋಚಿಂಗ್ ಮಾಡಲಾಗುವುದು.
ಹೊಸ ವರ್ಷಾಚರಣೆಗೆ ವಿವಿಧ ವಾಣಿಜ್ಯ ಕೇಂದ್ರಗಳು, ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇತ್ಯಾದಿ ಕಡೆಗೆ ಆಗಮಿಸುವ ಸಾರ್ವಜನಿಕರು ತಮ್ಮ ಸ್ವಂತ ವಾಹನಗಳನ್ನು ಬಳಸದೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ನಮ್ಮ ಮೆಟ್ರೋ, ಬಿಎಂಟಿಸಿ, ಕೆಎಸ್ಆರ್ಟಿಸಿ, ಆಟೋರಿಕ್ಷ ಅಥವಾ ಕ್ಯಾಬ್ಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.
ಸಿ.ಬಿ.ಡಿ. ಪ್ರದೇಶದ ವ್ಯಾಪ್ತಿಯಲ್ಲಿ ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ತಡೆಯಲು ಓಲ್ಡ್ ಉದಯ ಟಿ.ವಿ, ಜಂಕ್ಷನ್, ಖೋಡೆ, ಟೌನ್ಹಾಲ್ ಜಂಕ್ಷನ್, ಚಾಲುಕ್ಯ ಜಂಕ್ಷನ್ ದೊಮ್ಮಲೂರು, ಮೇಕ್ರೆ ಸರ್ಕಲ್‌ಗಳಲ್ಲಿ ಮಾರ್ಗ ಬದಲಾವಣೆಯನ್ನು ಡಿಸೆಂಬರ್ 31ರ ರಾತ್ರಿ 08:00 ಗಂಟೆಯಿಂದ ಜನವರಿ 01 ರ ಬೆಳಗ್ಗೆ 06:00 ಗಂಟೆಯವರೆಗೆ ಮಾಡಲಾಗುವುದು.
ಬೆಂಗಳೂರು ನಗರದ ಎಲ್ಲಾ ನಾಗರೀಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ, ಶೂನ್ಯ ಅಪಘಾತ ಹಾಗೂ ಸುರಕ್ಷಿತ ಹೊಸವರ್ಷವನ್ನು ನಿರೀಕ್ಷಿಸೋಣವೆಂದು ಆಶಿಸುತ್ತೇವೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಶುಭ ಕೋರಿದ್ದಾರೆ.