ಕೂದಲ ಬೆಳವಣಿಗೆಗೆ ವಿಧವಿಧವಾದ ಎಣ್ಣೆಗಳನ್ನ ಬಳಸುತ್ತಾರೆ. ಆದರೆ ಸಾಕಷ್ಟು ಜನ ಹರಳೆಣ್ಣೆಯನ್ನ ಹಿಂದಿನಿಂದಲೂ ಬಳಸಿಕೊಂಡು ಬಂದಿದ್ದಾರೆ. ಆಯುರ್ವೇದದ ಪ್ರಕಾರ ಹರಳೆಣ್ಣೆಯಲ್ಲಿ ಸಾಕಷ್ಟು ಔಷಧಿ ಅಂಶವು ಇದೆ. ಇಂದಿನವರು ಹೇಳುವ ಪ್ರಕಾರ ಕೂದಲಿಗೆ ತುಂಬಾನೇ ಒಳ್ಳೆಯದು ಅಂದ್ರೆ ಹರಳೆಣ್ಣೆ. ಇನ್ನು ಹರಳೆಣ್ಣೆಯನ್ನ ಹಚ್ಚುವಾಗ ಸ್ವಲ್ಪ ಬಿಸಿ ಮಾಡಿ ನಂತರ ನೆತ್ತಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಕೂದಲಿನ ಕಿರುಚೀಲಗಳು ಗಟ್ಟಿಯಾಗುತ್ತದೆ. ಇನ್ನು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಹಳೆ ಎಣ್ಣೆಯನ್ನ ಹಚ್ಚುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದರ ಮಾಹಿತಿ ಇಲ್ಲಿದೆ.
ತಲೆಹೊಟ್ಟು ಮತ್ತು ತುರಿಕೆ ಕಡಿಮೆ ಮಾಡುತ್ತದ
ಕ್ಯಾಸ್ಟರ್ ಆಯಿಲ್‌ನಲ್ಲಿರುವ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ನೆತ್ತಿಯನ್ನು ಶಮನಗೊಳಿಸುತ್ತದೆ ಮತ್ತು ಶಾಂತಗೊಳಿಸುತ್ತದೆ.ಹಾಗೂ ಮುಖ್ಯವಾಗಿ ನೆತ್ತಿಯ ಸೋಂಕುಗಳಿಗೆ ಚಿಕಿತ್ಸೆ ನೀಡುತ್ತದೆ ಕ್ಯಾಸ್ಟರ್ ಆಯಿಲ್‌ನ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ರಿಂಗ್‌ವರ್ಮ್‌ನಂತಹ ನೆತ್ತಿಯ ಸೋಂಕುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಮಾಯಿಶ್ಚರೈಸ ಮಾಡುತ್ತಿದೆ
ಹರಳಿನಲ್ಲಿ ಫ್ಯಾಟಿ ಆಸಿಡ್ ಅಂಶ ಇರೋದ್ರಿಂದ ಕೂದಲನ್ನ ಹೈಡ್ರೇಟ್ ಮಾಡುತ್ತದೆ ಹಾಗೂ ನ್ಯಾಚುರಲ್ ಆಗಿ ಕೂದಲನ್ನ ಮಾಯಿಶ್ಚರೈಸ್ ಮಾಡುತ್ತದೆ.
ಕೂದಲ ಹೊಳಪು
ಆಂಟಿಆಕ್ಸಿಡೆಂಟ್‌ಗಳು ಕೂದಲನ್ನು ಹಾನಿಯಿಂದ ರಕ್ಷಿಸುತ್ತದೆ, ಇದು ಆರೋಗ್ಯಕರ, ಹಾಗೂ ಮುಖ್ಯವಾಗಿ ಕೂದಲ ಹೊಳಪು ಹೆಚ್ಚಾಗುತ್ತದೆ.ಮತ್ತು ಸಾಫ್ಟ್ ಹೇರ್ ನಿಮ್ಮದಾಗುತ್ತದೆ .
ಉಷ್ಣತೆ ಕಡಿಮೆಯಾಗುತ್ತದೆ
ನೆತ್ತಿಗೆ ಹರಳೆಣ್ಣೆಯನ್ನು ಹಚ್ಚುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮುಖ್ಯವಾಗಿ ಕಣ್ಣುರಿ ನಿವಾರಣೆಯಾಗುತ್ತದೆ. ಸ್ಟ್ರೆಸ್ ರಿಲೀಸ್ ಮಾಡುವುದಕ್ಕೆ ಸಹಾಯಕಾರಿ.