ಭಾರತದ ಸೆನೆಗೆ (India army) ಅಪಾರ ಸೇವೆ ಸಲ್ಲಿಸಿದ ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ (M cariyappa) ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅವಹೇಳನ ಮಾಡಲಾಗಿತ್ತು.
ಈ ಅಪಮಾನವನ್ನು ವಿರೋಧಿಸಿ ಇಂದು ಕೊಡಗು (Kodagu) ಬಂದ್ಗೆ ಕರೆ ಕೊಡಲಾಗಿದೆ. ಈ ಬಗ್ಗೆ ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ವೀರ ಸೇನಾನಿಗಳ ಬಗ್ಗೆ ಅವಹೇಳನಕಾರಿ ಬರಹ ಹರಿಬಿಟ್ಟಿದ್ದರು ಮತ್ತು ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ನಡೆಯನ್ನು ವಿರೋಧಿಸಿ ಇವತ್ತು (ಡಿ.12) ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಕೊಡಗು ಬಂದ್ಗೆ ಕರೆ ನೀಡಲಾಗಿದೆ. ಸರ್ವ ಜನಾಂಗಗಳ ಒಕ್ಕೂಟ, ಛೇಂಬರ್ ಆಫ್ ಕಾಮರ್ಸ್, ಖಾಸಗಿ ಶಾಲಾ ಒಕ್ಕೂಟ ಈ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದೆ.