ದ್ವೀಪ ರಾಷ್ಟ್ರ,ನೆರೆಯ ದೇಶ ಶ್ರೀಲಂಕಾದಲ್ಲಿ (Sri lanka) ಅಬ್ಬರಿಸಿ, ಅವಾಂತರ ಸೃಷ್ಟಿಸಿರುವ ಫೆಂಗಾಲ್ ಸೈಕ್ಲೋನ್‌ನಿಂದ (Fengal cyclone)ತಮಿಳುನಾಡಿನಲ್ಲಿ ಆತಂಕ ಶುರುವಾಗಿದೆ. ಈಗಾಗಲೇ ಸಮುದ್ರ ತೀರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಕ್ಷಣ ಕ್ಷಣಕ್ಕೂ ತೀವ್ರ ಸ್ವರೂಪ ಪಡೆದುಕೊಳ್ತಿರುವ ಫೆಂಗಲ್ ಚಂಡಮಾರುತ ಇಂದು ಮಧ್ಯಾಹ್ನ ಉತ್ತರ ತಮಿಳುನಾಡಿನ (Tamil Nadu) ಕರಾವಳಿ ಮತ್ತು ಪುದುಚೇರಿಯ ಭಾಗದಲ್ಲಿ ಭೂಮಿಗೆ ಅಪ್ಪಳಿಸಿ, ಹಾದು ಹೋಗಲಿದೆ.
ಈ ವೇಳೆ ಗಂಟೆಗೆ 80ರಿಂದ 100 ಕಿ.ಮೀ.ವೇಗದಲ್ಲಿ ಬಿರುಗಾಳಿ ಬೀಸಲಿದೆ. ಈಗಾಗಲೇ ರಾತ್ರಿಯಿಂದ ಚೆನ್ನೈ (Chennai) ಮತ್ತು ಪುದುಚೇರಿಯಲ್ಲಿ (Puducheri) ಮಳೆ ಶುರುವಾಗಿದ್ದು, ಇನ್ನೆರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.