• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಜಯೇಂದ್ರ ಬಣ ಗುಡುಗು.. ಸೈಲೆಂಟ್‌ ಆಗ್ತಾರಾ ಯತ್ನಾಳ್‌..?

ಕೃಷ್ಣ ಮಣಿ by ಕೃಷ್ಣ ಮಣಿ
November 29, 2024
in Top Story, ಕರ್ನಾಟಕ, ರಾಜಕೀಯ
0
ವಿಜಯೇಂದ್ರ ಬಣ ಗುಡುಗು.. ಸೈಲೆಂಟ್‌ ಆಗ್ತಾರಾ ಯತ್ನಾಳ್‌..?
Share on WhatsAppShare on FacebookShare on Telegram

ಬಿಜೆಪಿ ಪಕ್ಷದಲ್ಲೇ ಬಂಡಾಯ ಸಾರಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ವಕ್ಫ್‌ ಆಸ್ತಿ ವಿರುದ್ಧ ಜನಜಾಗೃತಿ ಹೆಸರಲ್ಲಿ ಬಂಡಾಯ ನಾಯಕರನ್ನು ಕಟ್ಟಿಕೊಂಡು ಬೀದರ್‌, ಕಲಬುರಗಿ ಸುತ್ತಾಡಿ ಜನರ ಸಮಸ್ಯೆಗೆ ದನಿಯಾಗಿದ್ರು. ಬಿಜೆಪಿ ನಾಯಕರು ಡಿಸೆಂಬರ್‌ ಮೊದಲ ವಾರದಲ್ಲಿ ಪ್ರವಾಸಕ್ಕೆ ಸಿದ್ಧತೆ ನಡೆಸಿದ ಬೆನ್ನಲ್ಲೇ ಬಂಡಾಯ ಟೀಂ ಪ್ರವಾಸ ಮುಗಿಸಿದ್ದು ಬಿಜೆಪಿಗೆ ನುಂಗಲಾರದ ತುಪ್ಪ ಎನ್ನುವಂತಾಗಿತ್ತು. ಇದೀಗ ಹೈಕಮಾಂಡ್‌ ನಾಯಕರು ಯತ್ನಾಳ್‌ ಟೀಂಗೆ ವಾರ್ನಿಂಗ್‌ ಮಾಡಿದ್ದು, ಇನ್ನಾದ್ರೂ ಬಂಡಾಯ ನಿಲ್ಲುತ್ತಾ..? ವಿಜಯೇಂದ್ರ ಅಧ್ಯಕ್ಷ ಸ್ಥಾನವನ್ನು ಯತ್ನಾಳ್‌ ಅಂಡ್‌ ಗ್ಯಾಂಗ್‌ ಒಪ್ಪಿಕೊಳ್ಳುತ್ತಾ ಅನ್ನೋ ಕುತೂಹಲ ಮೂಡಿಸಿದೆ. ಈ ನಡುವೆ ವಿಜಯೇಂದ್ರ ಆಪ್ತರು ಕೋಲಾರದ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ವಾಗ್ದಾಳಿ ಮಾಡಿದ್ದಾರೆ.

ADVERTISEMENT
ಕಾಂಗ್ರೆಸ್ ಮೀಟಿಂಗ್ ಮುಗಿದ ನಂತರ Hariprasad and  Rahul Gandhi deep discuss #pratidhvani

ಬಿ.ವೈ ವಿಜಯೇಂದ್ರ ಮುಂದಿನ ಸಿಎಂ ಆಗಲಿ ಎಂದು ದೇವರಲ್ಲಿ ಅರ್ಚನೆ ಮಾಡಿಸಿದ ರೇಣುಕಾಚಾರ್ಯ ಟೀಂ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ವಿರುದ್ಧ ವಾಗ್ದಾಳಿ ಮಾಡಿದೆ. ಕೋಲಾರದ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ರೇಣುಕಾಚಾರ್ಯ, ಬಿ.ಸಿ‌ ಪಾಟೀಲ್, ಕಟ್ಟಾ ಸುಬ್ರಮಣ್ಯ ನಾಯ್ಡು ಮಾತಿನ ಚಾಟಿ ಬೀಸಿದ್ದಾರೆ. ಮಾಜಿ ಶಾಸಕರಾದ ವೈ ಸಂಪಂಗಿ, ಬಿ.ಪಿ ವೆಂಕಟಮುನಿಯಪ್ಪ, ನಾರಾಯಣಸ್ವಾಮಿ, ರಾಜಣ್ಣ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ನೀಡಿದ್ದು, ದಾವಣಗೆರೆಯಲ್ಲಿ ಬೃಹತ್‌ ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗಿದೆ.

ರಾಜ್ಯದಲ್ಲಿ ಸೈಕಲ್ ತುಳಿದು ಬಿಜೆಪಿ ಪಕ್ಷ ಕಟ್ಟಿದ್ದು ಯಡಿಯೂರಪ್ಪ ಹಾಗು ದಿವಂಗತ ಅನಂತ್ ಕುಮಾರ್ ಅವರು. ಭಾರತೀಯ ಜನತಾ ಪಾರ್ಟಿ ಕಟ್ಟಿದವ್ರ ವಿರುದ್ಧವೇ ಯತ್ನಾಳ್ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ್ ಸ್ವಯಂ ಘೋಷಿತ ಹಿಂದೂ ನಾಯಕ ಎಂದು ರೇಣುಕಾಚಾರ್ಯ ಟಾಂಗ್‌ ಕೊಟ್ಟಿದ್ದಾರೆ. ಯತ್ನಾಳ್‌ಗೆ ಯಾವುದೇ ರಾಷ್ಟ್ರೀಯ ನಾಯಕರ ಬೆಂಬಲ ಇಲ್ಲ. ವಕ್ಫ್‌ ವಿರುದ್ಧ ಹೋರಾಟ ಮಾಡು ಅಂತ ಯಾವುದೇ ರಾಷ್ಟ್ರೀಯ ನಾಯಕರು ಹೇಳಿಲ್ಲ. ಈ ಮೊದಲು ಟಿಪ್ಪು ಖಡ್ಗ ಹಿಡ್ಕೊಂಡು ಒಡಾಡಿದ್ದಾರೆ, ತಾವು ಬಾಯಿ ಬಿಚ್ಚಿದ್ರೆ, ನಾನು ಬಾಯಿ ಬಿಚ್ಚುತ್ತೇವೆ ಎಂದು ಯತ್ನಾಳ್‌ಗೆ ತಿರುಗೇಟು ನೀಡಿದ್ದಾರೆ. ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ ಎಂದಿರುವ ರೇಣುಕಾಚಾರ್ಯ, ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್, ಒಳಗಿನ ದುಷ್ಟಶಕ್ತಿ ಪಕ್ಷ ವಿರೋಧಿಗಳು. ಕಾಂಗ್ರೆಸ್ ಮುಖವಾಣಿಯಂತೆ ಯತ್ನಾಳ್ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡಂತೆ ಕೆಲಸ ಮಾಡ್ತಿದ್ದು, ರೇಣುಕಾಚಾರ್ಯ ಲಫಟ ಎಂಬ ಯತ್ನಾಳ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ನೀನೊಬ್ಬ ಗೋಮುಖ ವ್ಯಾಘ್ರ, ನೀನು ಮುಖವಾಡ ಹಾಕಿಕೊಂಡಿದ್ದೀಯ. ನೀನು ಪಕ್ಷದಿಂದ ಸಸ್ಪೆಂಡ್ ಆಗಿದ್ದಾಗ ಇಫ್ತಿಯಾರ್ ಕೂಟ ಮಾಡಿದ್ದೆ. ಪಕ್ಷದಲ್ಲಿ ಸ್ವಯಂ ಘೋಷಿತ ಹಿಂದೂ ಹುಲಿ ಎಂದು ಹೇಳ್ತೀಯ, ನಿನಗೆ ಮಾನ ಮರ್ಯಾದೆ ಇದ್ರೆ ಸುಮ್ಮನಿರು. ಬಾಯಿ ಬಿಚ್ಚಿದ್ರೆ ಅಷ್ಟೇ, ನಾವೂ ನಾಟಿ, ನಾನು ಮಾತನಾಡ್ತೀನಿ ಎಂದಿದ್ದಾರೆ.

ಪಕ್ಷದೊಳಗೆ ಇದ್ದು ಒಳಗೊಳಗೆ ಚೂರಿ ಹಾಕೋರು ಇದ್ದಾರೆ ಎಂದು ಕುರಡುಮಲೆ ದೇಗುಲದಲ್ಲಿ ಮಾಜಿ ಸಚಿವ ಬಿ.ಸಿ ಪಾಟೀಲ್ ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ಶಾಲು ಹಾಕ್ಕೊಂಡು ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡ್ತಾರೆ. ಯಾರೇ ಮಾತನಾಡಿದ್ರು, ಅವರದ್ದು ಹೊರಗೆ ತೆಗೀತೀನಿ ಅಂತಾರೆ, ಅದೇನು ಗೊತ್ತು ನಿಮಗೆ, ತಾಕತ್ ಇದ್ದರೆ ತೆಗೀರಿ ಎಂದು ಯತ್ನಾಳ್‌ಗೆ ಮಾಜಿ ಸಚಿವ ಬಿ.ಸಿ ಪಾಟೀಲ್ ಸವಾಲು ಎಸೆದಿದ್ದಾರೆ. ಬಿಜೆಪಿ ಹೈಕಮಾಂಡ್ ಸುಮ್ಮನಿಲ್ಲ, ಕಾದು ನೋಡುವ ತಂತ್ರ ಅನುಸರಣೆ ಮಾಡ್ತಿದ್ದಾರೆ. ಯತ್ನಾಳ್ ಗೆದ್ದಿದ್ದು ಕಾಂಗ್ರೆಸ್ ನಾಯಕರ ಬೆಂಬಲದಿಂದ, ಅದೊಂದು ಗೆಲುವಲ್ಲ. ಯತ್ನಾಳ್ ಕಾಂಗ್ರೆಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ವಾಗ್ದಾಳಿ ಮಾಡಿದ್ದಾರೆ. ಇನ್ನಾದ್ರೂ ಯತ್ನಾಳ್‌ ಸುಮ್ಮನಾಗ್ತಾರಾ ತಿರುಗಿ ಬೀಳ್ತಾರಾ ಅನ್ನೋದನ್ನು ಕಾದು ನೋಡ್ಬೇಕು

Tags: Basanagouda patil Yatnalbasanagouda patil yatnal on by vijayendrabasanagouda patil yatnal speechbasanagouda patil yatnal today newsBasangouda Patil Yatnalbasangouda yatnal vs vijayendraBY Vijayendraby vijayendra vs yatnalvijayendravijayendra vs yatnalYatnalyatnal basangouda patilyatnal on by vijayendrayatnal slams vijayendrayatnal slams yediyurappa vijayendrayatnal today newsyatnal vijayendrayatnal vs vijayendra
Previous Post

ಕರ್ತವ್ಯ ನಿಷ್ಠೆ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡಿ – ಪ್ರಿಯಾಂಕಾ ಖರ್ಗೆ..

Next Post

ದೇಶಕ್ಕೆಲ್ಲಾ ಒಂದೇ ರೂಲ್ಸ್‌.. ಅನ್ಯಾಯ ಅನ್ಯಾಯವೇ ಅಲ್ವಾ..?

Related Posts

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ
ಕರ್ನಾಟಕ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

by ಪ್ರತಿಧ್ವನಿ
April 16, 2026
0

ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರೀ ಮಟ್ಟದ ಬದಲಾವಣೆ ನಡೆಯಿದ್ದು, ಒಟ್ಟು 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಮಹತ್ವದ ಆದೇಶವನ್ನು ಹೈಕೋರ್ಟ್ ಹೊರಡಿಸಿದ್ದು, ವಿವಿಧ ಹಂತಗಳ...

Read moreDetails
ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

April 16, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
Next Post
ದೇಶಕ್ಕೆಲ್ಲಾ ಒಂದೇ ರೂಲ್ಸ್‌.. ಅನ್ಯಾಯ ಅನ್ಯಾಯವೇ ಅಲ್ವಾ..?

ದೇಶಕ್ಕೆಲ್ಲಾ ಒಂದೇ ರೂಲ್ಸ್‌.. ಅನ್ಯಾಯ ಅನ್ಯಾಯವೇ ಅಲ್ವಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada