ಬಾಲಿವುಡ್ನ (Bollywood) ಸ್ಸೆಲೆಬ್ರಿಟಿ ಕಪಲ್ ದೀಪಿಕಾ ಪಡುಕೋಣೆ (Deepika padukone) ಮತ್ತು ರಣವೀರ್ ಸಿಂಗ್ (Ranveen Singh) ದೀಪಾವಳಿ ಹಬ್ಬದಂದು ಅಭಿಮಾನಿಗಳಿಗೆ ತಮ್ಮ ಮಗಳ ಹೆಸರಿನ ಪರಿಚಯ ಮಾಡಿಸಿದ್ದಾರೆ.
ಪುಟಾಣಿಯ ಪುಟ್ಟ ಪಾದಗಳ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ (Social media) ಈ ದಂಪತಿ ಹಂಚಿಕೊಂಡಿದ್ದು, ತಮ್ಮ ಮಗುವಿಗೆ ದುವಾ ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿದ್ರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗಳ ಹೆಸರು ಹೇಳುತ್ತಿದ್ದಂತೆಯೇ ಫ್ಯಾನ್ಸ್ ಫುಲ್ ಖುಷಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಆದರೆ ಕೆಲವು ವರ್ಗದ ಜನರು ಈ ಹೆಸರನ್ನೇ ಇಟ್ಟುಕೊಂಡು ತಗಾದೆ ತೆಗೆದಿದ್ದಾರೆ. ದೀಪಿಕಾ ಮತ್ತು ರಣವೀರ್ ರನ್ನ ಟ್ರೋಲ್ ಮಾಡಿದ್ದಾರೆ.ದುವಾ (Duva) ಹೆಸರು ಚೆನ್ನಾಗಿದೆ.ಪ್ರಾರ್ಥನೆ ಎಂಬ ಅರ್ಥವೂ ಹೌದು. ಆದರೆ ನೀವು ಹಿಂದು ಆಗಿ ದುವಾ ಎಂಬ ಮುಸ್ಲಿಂ ಹೆಸರನ್ನು ಯಾಕೆ ಇಟ್ಟಿರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.