ದರ್ಶನ್ ಜೈಲಿನಿಂದ ಬಿಡುಗಡೆ ಆಗಿದ್ದಕ್ಕೆ ಸಾಕಷ್ಟು ಕಡೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಅಭಿಮಾನದ ಹೆಸರಲ್ಲಿ ಯುವಕನೋರ್ವ ಹುಚ್ಚಾಟ ಮಾಡಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.
ಉರಿಯುತ್ತಿದ್ದ ಪಟಾಕಿ ಶಾಟ್ಸ್ ಬಾಕ್ಸ್ ತಲೆ ಮೇಲೆ ಇಟ್ಟುಕೊಂಡಿದ್ದಾನೆ ದರ್ಶನ್ ಅಭಿಮಾನಿ. ಬೆಂಕಿ ಬಾಕ್ಸ್ ಅಪಾಯ ಅನ್ನೋದನ್ನು ಲೆಕ್ಕಿಸದೆ ತಲೆ ಮೇಲಿಟ್ಟುಕೊಂಡು ಹುಚ್ಚಾಟ ಮೆರೆದಿದ್ದಾನೆ.
ಈ ವೇಳೆ ಯುವಕನ್ನು ತಡೆದಿರುವ ಪೊಲೀಸ್ರು, ಹುಚ್ಚಾಟ ಮೆರೆಯುತ್ತಿದ್ದ ಯುವಕನ ಗ್ರಹಚಾರ ಬಿಡಿಸಿದ್ದಾರೆ. ಸಿಡಿಯುತ್ತಿದ್ದ ಪಟಾಕಿ ಬಾಕ್ಸ್ ತಲೆಮೇಲೆ ಹೊತ್ತು ಹುಚ್ಚಾಟ ಮಾಡಿದವನಿಗೆ ಪೊಲೀಸರು ಗೂಸಾ ಕೊಟ್ಟಿದ್ದಾರೆ.
ಪೊಲೀಸ್ರ ಲಾಠಿ ಮಾತನಾಡುತ್ತಿದ್ದ ಹಾಗೆ ಸರಿದಾರಿಗೆ ಬಂದ ಯುವಕನಿಗೆ ಬುದ್ಧಿವಾದ ಹೇಳಿ ಕಳಿಸಿದ್ದಾರೆ ಪೊಲೀಸರು. ಇಂಟರ್ನ್ಯಾಷನಲ್ ಏರ್ಪೋಟ್ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಮಸ್ಯೆ ಆಗಿಲ್ಲ ಎನ್ನುವುದು ವಿಶೇಷ.